ಅರಸೀಕೆರೆ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಅನಂತಕುಮಾರ್
ಮೈಸೂರು

ಅರಸೀಕೆರೆ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಅನಂತಕುಮಾರ್

November 13, 2018

ಅರಸೀಕೆರೆ: ಕೇಂದ್ರ ಸಚಿವ ಅನಂತಕುಮಾರ್ ತಮ್ಮ ಅಂದಿನ ಎಬಿವಿಪಿ ಸೇವಾ ಕಾರ್ಯಕ್ರಮಗಳಿಗೆ ಅರಸೀಕೆರೆ ನಗರವನ್ನು ಕೇಂದ್ರ ಸ್ಥಾನವನ್ನಾಗಿ ಆಯ್ಕೆ ಮಾಡಿಕೊಂಡು ನಮ್ಮೊಂದಿಗೆ ಅವಿನಾ ಭಾವ ಸಂಬಂಧವನ್ನು ತಮ್ಮ ರಾಜಕೀಯದ ಕೊನೆ ದಿನಗಳವರೆಗೂ ಇಟ್ಟುಕೊಂಡಿ ದ್ದರು ಎಂದು ಮಾಜಿ ಶಾಸಕ ಎ.ಎಸ್. ಬಸವರಾಜು ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಮತ್ತು ಪಿ.ಜಿ.ಆರ್. ಸಿಂಧ್ಯಾ ಇವರಿಬ್ಬರೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಲವ-ಕುಶರಂತೆ ಸಂಘಟನೆಗಾಗಿ ಹೋರಾಟ ಮಾಡಿದ್ದರು. ನಂತರದ ದಿನಗಳಲ್ಲಿ ರಾಜಕೀಯಕ್ಕೆ ಧುಮು ಕಿದ ಅವರು ಕಾಲಕ್ರಮೇಣ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಇವರೊಂ ದಿಗೆ ಸಾರಥಿಯಾಗಿ ದಕ್ಷಿಣ ಭಾರತದ ಕರ್ನಾ ಟಕದಲ್ಲಿ ಬಿಜೆಪಿ ಬೇರೂರಲು ತಮ್ಮದೇ ಶ್ರಮವನ್ನು ಹಾಕಿದ್ದರು ಎಂದರು.

2004ರಲ್ಲಿ ಈ ರಾಜ್ಯದ ಬಿಜೆಪಿ ಅಧ್ಯಕ್ಷ ಗಾದಿಯನ್ನು ಹಿಡಿದ ಅವರು ಅತೀ ಹೆಚ್ಚು ಸ್ಥಾನಗಳನ್ನು ತಂದುಕೊಟ್ಟ ಹೆಗ್ಗಳಿಕೆಗೆ ಅನಂತಕುಮಾರ್ ಅವರಿಗೆ ಸಲ್ಲುತ್ತದೆ. ಇವರನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಯನ್ನು ಭಗವಂತ ನೀಡಲಿ. ನಮ್ಮೊಂದಿಗೆ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದ ಅವರು ಇಂದು ನಮ್ಮನ್ನು ಅಗಲಿ ಹೋಗಿ ರುವುದು ಒಂದು ದೊಡ್ಡ ಶಕ್ತಿಯನ್ನೇ ಕಳೆದು ಕೊಂಡಂತಾಗಿದೆ ಎಂದು ಅವರೊಂದಿಗೆ ಕಳೆದ ದಿನಗಳನ್ನು ಭಾವುಕರಾಗಿ ನೆನಪು ಮಾಡಿಕೊಂಡರು.

ಬಿಜೆಪಿ ತಾಲೂಕು ಅಧ್ಯಕ್ಷ ಜಿ.ವಿ.ಟಿ. ಬಸವರಾಜು ಮಾತನಾಡಿ, ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಜೋಡಿ ಮಾಡಿದ ಮೋಡಿ ಇಂದಿಗೂ ಅವರ ಸಮಕಾಲಿನ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಉತ್ತರ ಕನ್ನಡದ ನುಡಿಯಂತೆ ಸಂಗ್ಯಾ-ಬಾಳ್ಯ ಎಂಬ ಬಿರು ದನ್ನೇ ಇವರಿಬ್ಬರಿಗೂ ನೀಡಿದ್ದರು. ಕರ್ನಾ ಟಕವು ನಾಡು, ನುಡಿ, ಜಲ ರಕ್ಷಣೆಗಾಗಿ ಹೋರಾಡುತ್ತಿರಬೇಕಾದರೆ ಕೇಂದ್ರ ಸಚಿವ ಸ್ಥಾನದಲ್ಲಿದ್ದ ಇವರು ಪಕ್ಷ ಭೇದವಿಲ್ಲದೇ ಎಲ್ಲ ಸರ್ಕಾರಗಳಿಗೂ ತೆರೆ ಮರೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿ ಸಮಸ್ಯೆ ಬಗೆಹರಿಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು. ಇಂತಹ ಮಹಾನ್ ನಾಯಕ ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರೂ ಪಕ್ಷದ ಎಲ್ಲಾ ಕಾರ್ಯ ಕರ್ತರು ಅವರ ಆದರ್ಶ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗ ಮಟ್ಟಕ್ಕೆ ಏರಬೇಕು ಎಂದರು.

ನಗರ ಘಟಕದ ಅಧ್ಯಕ್ಷ ಮನೋಜ್ ಕುಮಾರ್ ಮಾತನಾಡಿ, ನರೇಂದ್ರ ಮೋದಿ ಕೇಂದ್ರ ಸರ್ಕಾರವು ಆಡಳಿತಕ್ಕೆ ಬರುವ ಮುಂಚೆ ದೇಶಾದ್ಯಂತ ರೈತರು ರಸಗೊಬ್ಬರದ ಕೃತಕ ಅಭಾವದಿಂದ ಸಾಕಷ್ಟು ನೋವು ಗಳನ್ನು ಅನುಭವಿಸಿದ್ದರು. ಇಂತಹ ಸಮಯ ದಲ್ಲಿ ರಸಗೊಬ್ಬರ ಸಚಿವರಾಗಿ ಜವಾಬ್ದಾರಿ ತೆಗೆದುಕೊಂಡ ಅನಂತಕುಮಾರ್ ಅವರು ಯೂರಿಯ ರಸಗೊಬ್ಬರ ಮತ್ತು ಔಷಧಿ ವಿಚಾರದಲ್ಲಿ ದೇಶಾದ್ಯಂತ ಇದ್ದಂತಹ ಮಾಫಿಯಾವನ್ನು ಬುಡ ಸಮೇತ ಕಿತ್ತು ಹಾಕಿದ್ದರು. ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿಯವರ ಪರಮ ಶಿಷ್ಯರಾಗಿದ್ದ ಇವರು ಅವರುಗಳ ಮಾರ್ಗದರ್ಶನ ದಂತೆ ರಾಜಕೀಯ ಕ್ಷೇತ್ರದಲ್ಲಿ ನೀಡಲಾ ಗಿದ್ದ ವಿವಿಧ ಜವಾಬ್ದಾರಿ ಸ್ಥಾನಗಳನ್ನು ಸವಾ ಲನ್ನಾಗಿ ಸ್ವೀಕಾರ ಮಾಡಿ ಕರ್ನಾಟಕಕ್ಕೆ ಕೀರ್ತಿಯನ್ನು ತಂದಿದ್ದಾರೆ. ಇಂತಹ ಮಹಾನ್ ಚೇತನ ಮತ್ತೊಮ್ಮೆ ಹುಟ್ಟಿ ಬರಲಿ, ಸದಾ ನಮಗೆ ಮಾರ್ಗದರ್ಶಕರಾಗಲಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಿ.ಬಿ.ಗಂಗಾ ಧರ್, ಹಿರಿಯ ಮುಖಂಡರಾದ ಬಾಣಾ ವರ ಮಾಧವಮೂರ್ತಿ,ಜಿಲ್ಲಾ ಘಟಕದ ಕಾರ್ಯದರ್ಶಿ ಲಾಳನಕೆರೆ ಯೋಗೀಶ್, ತಾಲೂಕು ಘಟಕದ ಕಾರ್ಯದರ್ಶಿ ಯೋಗೀಶ್, ಕೆಂಪುಸಾಗರ ಶಿವ ಕುಮಾರ್, ನಗರಸಭೆ ಸದಸ್ಯೆ ಶ್ವೇತಾ ರಮೇಶ್ ಮಾತನಾಡಿದರು. ಮುಖಂಡ ರಾದ ನವರತನ್ ಜೈನ್, ಮುರಳಿಧರ್, ಬಾಳನಗೌಡ, ಶಿವನ್ ರಾಜ್, ಬೆಂಡೆಕೆರೆ ಮಲ್ಲಯ್ಯ, ಪ್ರಭುಕುಮಾರ್, ರಮೆಶ್ ನಾಯ್ಡು, ಅರುಣ್ ಕುಮಾರ್, ನಾಗೇಶ್, ಚಂದ್ರಶೇಖರ್ ಇನ್ನಿತರರು ಇದ್ದರು.

Translate »