ರಾಮನಾಥಪುರ: ಹನ್ಯಾಳು ಗ್ರಾಮದಲ್ಲಿರುವ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಗೋಪಾಲಸ್ವಾಮಿ ದೇವಸ್ಥಾನ ಎಲ್ಲರ ಸಹಕಾರದಿಂದ ಮತ್ತೆ ಜೀರ್ಣೋದ್ಧಾರ ವಾಗುತ್ತಿರುವ ಸ್ಥಳಕ್ಕೆ ಮಾಜಿ ಸಚಿವ ಎ. ಮಂಜು ಭೇಟಿ ನೀಡಿ ಪರಿಶೀಲಿಸಿದರು.
ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀ ಗೋಪಾಲ ಸ್ವಾಮಿ ದೇವಸ್ಥಾನ ಬಹಳ ಶಿಥಿಲಾವಸ್ಥೆ ಯಲ್ಲಿದ್ದ ಈ ದೇವಸ್ಥಾನದ ನಿರ್ಮಾಣಕ್ಕೆ ಮಾಜಿ ಸಚಿವ ಎ.ಮಂಜು ಅವರು ಸುಮಾರು 10 ಲಕ್ಷ ರೂ. ಹೆಚ್ಚಿನ ಸಹಕಾರ ದಿಂದ ಹಾಗೂ ಗ್ರಾಮಸ್ಥರ ಸಹಕಾರದಿಂದ ಸೇರಿ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತದೆ. ಈ ದೇವಸ್ಥಾನವು ಶೀಘ್ರವೇ ಲೋಕಾರ್ಪಣೆಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಣ್ಣ ತಿಳಿಸಿದರು.
ಮಾಜಿ ಸಚಿವ ಎ.ಮಂಜು ಅವರ ಅವಧಿ ಯಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯ ಲ್ಲಿವೆ. ಶೀತ ಪೀಡಿತವಾಗಿ ಸ್ಥಳಾಂತರವಾದ ಜೆ.ಹೊಸಹಳ್ಳಿ ಗ್ರಾಮ ನಾಲಾ ಹಂತದ ತಳ ಭಾಗದಲ್ಲಿದ್ದು, ಇದರಿಂದ ಇಲ್ಲಿಯ ಮನೆಗಳು ತೇವಾಂಶಕ್ಕೆ ಶಿಥಿಲವಾದ್ದರಿಂದ ಪುರ್ನವಸತಿ ಯೋಜನೆಯಡಿ (ರುದ್ರ ಪಟ್ಟಣ ಕ್ರಾಸ್‍ನಲ್ಲಿ) ಹೊಸದಾಗಿ ನಿರ್ಮಾಣ ವಾಗುತ್ತಿರುವ ಎಚ್.ಎನ್.ನಂಜೇಗೌಡರ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮಾಜಿ ಸಚಿವ ಎ.ಮಂಜು ಅವರ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗೆ 4 ಕೋಟಿ ರೂ ವೆಚ್ಚದಲ್ಲಿ ಭರದಿಂದ ಕಾಮಗಾರಿಗಳು ನಡೆಯುತ್ತಿವೆ. ಇಲ್ಲಿಯ ದೇವಸ್ಥಾನ, ಹತ್ತಾರು ರಸ್ತೆಗಳ ನಿರ್ಮಾಣ, ಅಲ್ಲದೇ ಈ ಗ್ರಾಮದ ಪಕ್ಕದಲ್ಲಿ ಸುಮಾರು 18 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊಠಡಿಗಳ ಕಾಮಗಾರಿ ಗಳು ತ್ವರಿತ ರೀತಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಣ್ಣ ತಿಳಿಸಿದರು.
ಹೊಸದಾಗಿ ನಿರ್ಮಾಣವಾಗುತ್ತಿರುವ ಇಲ್ಲಿಯ ಎಚ್.ಎನ್.ನಂಜೇಗೌಡರ ನಗರ ದಲ್ಲಿ ಶಾಲೆಯ ಕಟ್ಟಡದ ನಿರ್ಮಾಣದ 5 ಕೊಠಡಿಗಳಿಗೆ 53.63 ಲಕ್ಷ ರೂ, ಶಾಲಾ ರಂಗಮಂದಿರಕ್ಕೆ 7.60 ಲಕ್ಷ ರೂ, ಶೌಚಾ ಲಯ ನಿರ್ಮಾಣಕ್ಕೆ 6.90 ಲಕ್ಷ ರೂ, ಶಾಲಾ ಊಟದ ಮನೆ, ಅಡಿಗೆ ಮನೆಗೆ 12.80 ಲಕ್ಷ ರೂ, ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 22.40 ಲಕ್ಷ ರೂ, ಸಮು ದಾಯ ಭವನಕ್ಕೆ 23.30 ಲಕ್ಷ ರೂ, ದೇವ ಸ್ಥಾನದ ನಿರ್ಮಾಣ ಹಾಗೂ ಗೋಪುರ ಸೇರಿದಂತೆ 20.30 ಲಕ್ಷ ರೂ, ಕುಡಿಯುವ ನೀರು ಹಾಗೂ ಕೊಳವೆ ಬಾವಿ ಮತ್ತು ಟ್ಯಾಂಕ್ ನಿರ್ಮಾಣಕ್ಕೆ 2.90 ಲಕ್ಷ ರೂ, ವಿದ್ಯುತ್ ಸಂಪರ್ಕ ಮತ್ತು ನೀರು ಸರಬ ರಾಜು, ಜಲ್ಲಿ ರಸ್ತೆ, ಅಡ್ಡ ಮೋರಿಗಳು, ಕಾಂಕ್ರಿಟ್ ಚರಂಡಿಗಳು, ಶಾಲಾ ಅವರಣ ದಲ್ಲಿ 200 ಮೀಟರ್ ಉದ್ದದ ರಸ್ತೆ ಮತ್ತು ಶಾಲೆಯ ಒಳಗಡೆ ಕಾಂಕ್ರೀಟ್ ರಸ್ತೆಗೆ 12.65 ಲಕ್ಷ ರೂ, ಸೈಕಲ್ ಸ್ಟ್ಯಾಂಡ್ ನಿರ್ಮಾಣ, ಕೈ ತೊಳೆಯುವ ಬೇಸಿನ್ ನಿರ್ಮಾಣಕ್ಕೆ 2 ಕಡೆಗೆ ಒಟ್ಟು 15 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮ ಗಾರಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಗುಂಡಣ್ಣ ತಿಳಿಸಿದರು.