ಬೆಣಗಾಲು ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಧರಣಿ ಆರಂಭ
ಮೈಸೂರು

ಬೆಣಗಾಲು ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಧರಣಿ ಆರಂಭ

December 12, 2018

ಬೈಲಕುಪ್ಪೆ:  ಪಿಡಿಓ ಮಂಜುನಾಥ್ ಸರ್ವಾಧಿಕಾರಿ ಧೋರಣೆ ಖಂಡಿಸಿ, ಬೆಣಗಾಲು ಗ್ರಾಮಸ್ಥರು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಅಧ್ಯಕ್ಷ ಸುಂದರೇಗೌಡ ನೇತೃತ್ವದಲ್ಲಿ ಗ್ರಾಪಂ ಕಚೇರಿಗೆ ಬೀಗ ಜಡಿದು ಅಹೋ ರಾತ್ರಿ ಧರಣಿ ಆರಂಭಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಣ ಗಾಲು ಗ್ರಾಪಂ ಆವರಣದಲ್ಲಿ ಜಮಾ ಯಿಸಿ ಧರಣಿ ಆರಂಭಿಸಿದ ಗ್ರಾಮಸ್ಥರು, ಪಿಡಿಓ ಸೇರಿಂದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ವಿರುದ್ಧಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷ ಸುಂದರೇಗೌಡ ಮಾತನಾಡಿ, ಪಿಡಿಓ ಮಂಜುನಾಥ್ 9 ವರ್ಷಗಳಿಂದ ಇದೇ ಗ್ರಾಪಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆ ಯಲ್ಲಿನ ಕಾಮಗಾರಿಗಳು ಹಾಗೂ ಫಲಾನು ಭವಿಗಳ ಸೌಲಭ್ಯ ವಿತರಣೆಯಲ್ಲಿ ವಂಚನೆ ಎಸಗಿದ್ದು, ಗ್ರಾಪಂ ಆಡಳಿತ ಮಂಡಳಿಗೂ ಗೌರವ ನೀಡದೆ ದುರ್ವರ್ತನೆ ತೋರುತ್ತಿ ದ್ದಾರೆ ಎಂದು ಕಿಡಿಕಾರಿದರಲ್ಲದೆ, ಈತನನ್ನು ಬೇರೆಡೆಗೆ ವರ್ಗಾಯಿಸುವಂತೆ ಹಿರಿಯ ಅಧಿಕಾರಿಗಳಿಗೆ ಪಂಚಾಯಿತಿ ನಡಾವಳಿ ಕಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದ್ದರೂ ಸಹ ಪಿಡಿಓ ಮಂಜುನಾಥ್‍ರನ್ನು ಬೇರೆಡೆಗೆ ವರ್ಗಾಯಿಸದೇ ಇದೇ ಗ್ರಾಪಂನಲ್ಲೇ ಮುಂದುವರೆಸುತ್ತಿರುವುದರಿಂದ ಯಾವುದೇ ಕೆಲಸ ಗಳು ಆಗದೆ ಗ್ರಾಮದ ಅಭಿವೃದ್ಧಿಗೆ ಹಿನೆÀ್ನಡೆ ಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಕೂಡಲೇ ಪಿಡಿಓ ಮಂಜು ನಾಥ್‍ರನ್ನು ಬೇರೆಡೆಗೆ ವರ್ಗಾಯಿಸಿ ಆ ಜಾಗಕ್ಕೆ ನೂತನ ಅಧಿಕಾರಿಯನ್ನು ನೇಮಕ ಮಾಡಬೇಕು. ಅಲ್ಲಿಯವರೆಗೂ ಧರಣಿ ಮುಂದುವರೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಎಸ್.ರಾಮು, ಮಾಜಿ ಸದಸ್ಯ ರಂಗನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಸ್.ಜಗ ದೀಶ್, ಗಣೇಶ್, ಹರೀಶ್, ಗುರುಪಾದ ಸ್ವಾಮಿ, ಪ್ರಕಾಶ್, ಧನರಾಜ್, ರಾಮಚಂದ್ರ, ಸುರೇಶ, ಲಕ್ಷ್ಮಿ, ಜಾಫರ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »