ಕಾರುಗಳ ಡಿಕ್ಕಿ: ಓರ್ವ ವ್ಯಕ್ತಿ ಸಾವು
ಮೈಸೂರು

ಕಾರುಗಳ ಡಿಕ್ಕಿ: ಓರ್ವ ವ್ಯಕ್ತಿ ಸಾವು

December 12, 2018

ಮೈಸೂರು:  ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರು-ತಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ನಡೆದಿದೆ.

ತಿ.ನರಸೀಪುರ ತಾಲೂಕು, ಸೋಸಲೆ ವ್ಯಾಸರಾಜಪುರದ ನಿವಾಸಿ ಸಿದ್ದಪ್ಪಾಜಿಚಾರಿ(52) ಅಪಘಾತದಲ್ಲಿ ಮೃತಪಟ್ಟವರು. ಮತ್ತೊಂದು ಕಾರಿನಲ್ಲಿದ್ದ ಯಳಂದೂರು ನಿವಾಸಿ ಶ್ರೀನಿವಾಸ್ ಹಾಗೂ ಅವರ ತಂದೆ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿದ್ದಪ್ಪಾಜಿಚಾರಿ ಅವರು ಸೋಮವಾರ ಮಧ್ಯಾಹ್ನ ತಮ್ಮ ಮಹೀಂದ್ರ ಎಕ್ಸ್‍ಯೂವಿ 500 ಕಾರಿನಲ್ಲಿ ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುತ್ತಿದ್ದಾಗ, ಗುರುಕಾರಪುರದ ಬಳಿ ಎದುರಿನಿಂದ ಬಂದ ಶ್ರೀನಿವಾಸ್ ಅವರ ಟಾಟಾ ಟಿಯಾಗೋ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳೂ ಜಖಂ ಆಗಿದ್ದು, ಸಿದ್ದಪ್ಪಾಜಿಚಾರಿ ತೀವ್ರ ಪೆಟ್ಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾಗಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವರುಣಾ ಠಾಣೆ ಪೊಲೀಸರು ತಿಳಿಸಿದ್ದಾರೆ.

Translate »