ಮದ್ಯ ತ್ಯಜಿಸಿ, ಸಾಂಸಾರಿಕ ಬದುಕು ಯಶಸ್ವಿಗೊಳಿಸಿ
ಮೈಸೂರು

ಮದ್ಯ ತ್ಯಜಿಸಿ, ಸಾಂಸಾರಿಕ ಬದುಕು ಯಶಸ್ವಿಗೊಳಿಸಿ

November 16, 2018

ಬೈಲಕುಪ್ಪೆ:  ದುಶ್ಚಟಕ್ಕೆ ಬಲಿಯಾದರೆ ನಿಮ್ಮ ಸಂಸಾರ ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಮದ್ಯವಜ್ರ್ಯ ಶಿಬಿರದಲ್ಲಿ ಪಾಲ್ಗೊಂಡು ದುಶ್ಚಟದಿಂದ ಹೊರ ಬನ್ನಿ. ಆಗ ನಿಮ್ಮ ಸಂಸಾರ ಯಶಸ್ವಿಯಾಗಿ ಸಾಗುತ್ತದೆ ಎಂದು ತಾಪಂ ಸದಸ್ಯ ಎ.ಟಿ.ರಂಗಸ್ವಾಮಿ ಕಿವಿಮಾತು ಹೇಳಿದರು.

ಪಿರಿಯಾಪಟ್ಟಣ ತಾಲೂಕು ಮಲ್ಲಿನಾಥಪುರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ ವಲಯ ವತಿಯಿಂದ ಆಯೋಜಿಸಲಾಗಿದ್ದ ಮದ್ಯವಜ್ರ್ಯನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಮಂಜುನಾಥ ದೇವರ ಕೃಪೆಯಿಂದ ನೀವುಗಳು ದುಶ್ಚಟಕ್ಕೆ ಮುಕ್ತಿ ಹಾಡುವ ಕಾಲ ಹತ್ತಿರ ಬಂದಿದೆ. ಶಿಬಿರ ಮುಕ್ತಾಯ ವೇಳೆಗೆ ಮದ್ಯ ಸೇವನೆಯಿಂದ ಸಂಪೂರ್ಣ ಹೊರ ಬರುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆವರ್ತಿ ಗ್ರಾ.ಪಂ ಸದಸ್ಯ, ಮುತ್ತಿನಮುಳ್ಳು ಸೋಗೆ ಗ್ರಾಮದ ಎಂ.ಬಿ.ಶಿವಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದ್ಯ ಸೇವನೆಯಿಂದಾಗಿ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ ಬದಲು ಉತ್ತಮ ಬದುಕಿನ ಕಡೆ ಸಾಗಿ ಎಂದು ತಿಳಿಹೇಳಿದರು.

ಮನರಂಜನೆ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಮಾತನ್ನು ಕೇಳಿ ಸಭೆಯಲ್ಲಿ ನೆರೆದಿದ್ದ ಶಿಬಿರಾರ್ಥಿಗಳ ಕುಟುಂಬದವರು ಹರ್ಷ ವ್ಯಕ್ತ ಪಡಿಸಿದರು. ಆರ್‍ಎಸ್‍ಎಸ್ ಜಿಲ್ಲಾ ಸಂಚಾಲಕ ರಾಘವಾಚಾರ್, ಭೋದಕರಾದ ನಂದಕುಮಾರ್ ಮತ್ತು ದಿನೇಶ್, ಹುಣಸವಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚಿದಾನಂದ ಮೂರ್ತಿ ಮಹಿಳೆಯರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

Translate »