ವಿಶ್ವ ಅಯೋಡಿನ್ ಸಪ್ತಾಹ ಜಾಥಾಗೆ ಚಾಲನೆ
ಮೈಸೂರು

ವಿಶ್ವ ಅಯೋಡಿನ್ ಸಪ್ತಾಹ ಜಾಥಾಗೆ ಚಾಲನೆ

December 12, 2018

ಸರಗೂರು: ವಿಶ್ವ ಅಯೋಡಿನ್ ಸಪ್ತಾಹ ಇದರ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ರಾಷ್ಟ್ರೀಯ ಅಯೋಡಿನ್ ಕೊರೆತೆ ನಿಯಂತ್ರಣಾ ದಿನ ಹಾಗೂ ಪ್ರಧಾನ ಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನ ಕಾರ್ಯಕ್ರಮ ಜರುಗಿತು.
ಇದರ ಅಂಗವಾಗಿ ಏರ್ಪಡಿಸಿದ್ದ ಅರಿವು ಜಾಥಾಗೆ ಹೆಚ್.ಡಿ.ಕೋಟೆ ಆರೋಗ್ಯಾಧಿ ಕಾರಿ ರವಿಕುಮಾರ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಆರೋಗ್ಯಾಧಿಕಾರಿ ರವಿಕುಮಾರ್, ಉತ್ತಮ ಆರೋಗ್ಯಕ್ಕೆ ಅಯೋಡಿನ್ ಅಂಶ ಅಗತ್ಯವಾಗಿದ್ದು, ಅಯೋಡಿನ್ ಉಪ್ಪಿನಲ್ಲಿ ಹೆಚ್ಚು ಖನಿಜಾಂಶ ಇರುವುದರಿಂದ ಪ್ರತಿದಿನ 150 ಮಿ.ಗ್ರಾಂ. ಅಯೋಡಿನ್ ಅಂಶ ಹೊಂದಿರುವ ಆಹಾರ ಸೇವಿಸಬೇಕು. ಗರ್ಭಿಣಿಯರಿಗೆ ಅಯೋಡಿನ್ ಕೊರತೆ ಉಂಟಾದರೆ ಹುಟ್ಟುವ ಮಕ್ಕಳ ಬೆಳವಣಿಗೆ ಕುಂಟಿತ ವಾಗುತ್ತದೆ. ಮುಂದೆ ತೈರಾಡ್ ಬರುವ ಸಾಧÀ್ಯತೆ ಹೆಚ್ಚಿರುತ್ತದೆ. ಇದನ್ನು ನಿಯಂತ್ರಿ ಸುವ ಶಕ್ತಿ ಅಯೋಡಿನ್‍ನಲ್ಲಿ ಮಾತ್ರ ಇದೆ ಎಂದು ತಿಳಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಡಾ.ಪಾರ್ಥ ಸಾರತಿ, ಮೇಲ್ವಿಚಾರಕರು, ಸಿಬ್ಬಂದಿಗಳು, ಪಟ್ಟಣದ ಜೆಎಸ್‍ಎಸ್ ಶಾಲಾ ಮಕ್ಕಳು ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯ ಕರ್ತರು ಈ ಸಂದರ್ಭದಲ್ಲಿದ್ದರು.

Translate »