ಸರಗೂರು ಪಪಂ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್
ಮೈಸೂರು

ಸರಗೂರು ಪಪಂ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್

October 5, 2018

ಸರಗೂರು:  ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್, ಉಪಾಧ್ಯಕ್ಷರಾಗಿ ಮಂಜುಳಾ ರವಿಕುಮಾರ್ ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ. ಅಧ್ಯಕ್ಷರ ಸ್ಥಾನಕ್ಕೆ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಕಾಂಗ್ರೆಸ್ ಪಕ್ಷದ ಜ್ಯೋತಿ ಯೋಗೀಶ್ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಬಿಜೆಪಿಯ ಮಂಜುಳಾ ರವಿಕುಮಾರ್ ಆಯ್ಕೆಯಾಗಿ ದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷಗಾದಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಇದೇ ಸಂದರ್ಭ ದಲ್ಲಿ ಮಾತನಾಡಿದ ಸಂಸದರಾದ ಆರ್. ಧ್ರುವನಾರಾಯಣ್ ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಪಕ್ಷದವರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಸರಗೂರು ಪಟ್ಟಣದ ಅಭಿವೃದ್ದಿಗೆ ನಮ್ಮ ಸಹಕಾರವೂ ಇದೆ. ಉಪ ತಹಶೀಲ್ದಾರ್ ಸುನೀಲ್, ಪಪಂ ಮುಖ್ಯಾಧಿಕಾರಿ ಸಿ.ಅಶೋಕ್, ಪಪಂ ಸದಸ್ಯರಾದ ಭಾಗ್ಯಲಕ್ಷ್ಮಿಬಿಲ್ಲೇಶ್, ರತ್ನರಂಗ ನಾಥ್, ಪದ್ಮಾವತಿ ಗೋಪಾಲ್, ಮಂಜುಳ ನಾಗರಾಜು, ಹನುಮನಾಯಕ, ನಾಗಯ್ಯ, ಮಹಮದ್‍ಉಸ್ಮಾನ್, ಮಧುಸೂದನ್, ನಾಗೇಂದ್ರಪ್ಪ, ರವಿಶೆಟ್ಟಿ, ರವಿಂದ್ರಪ್ರಸಾದ್, ಮಹದೇವ್, ಸೌಭಾಗ್ಯ ರವಿ, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಗಿರೀಶ್, ಸರಗೂರು ಟೌನ್ ಅಧ್ಯಕ್ಷ ವಿನಯ್, ಜಿಪಂ ಸದಸ್ಯರಾದ ವೆಂಕಟಸ್ವಾಮಿ, ಶ್ರೀಕೃಷ್ಣ, ಬೋವಿ ಜನಾಂಗದ ಅಧ್ಯಕ್ಷ ಸೀತಾರಾಮ್ ಹಾಗೂ ಉಭಯ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸರಗೂರು ಠಾಣಾ ಎಎಸ್‍ಐ ಮಾದಪ್ಪ, ಸುಬ್ರಹ್ಮಣ್ಯ ಇವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಿದ್ದರು.

Translate »