ನಾಡಿಗೆ ಬಂದ ಒಂಟಿ ಸಲಗ ಕಾಡಿಗೆ ಮರಳಲು ಹರಸಾಹಸ
ಮೈಸೂರು

ನಾಡಿಗೆ ಬಂದ ಒಂಟಿ ಸಲಗ ಕಾಡಿಗೆ ಮರಳಲು ಹರಸಾಹಸ

October 5, 2018

ಸಾಕಾನೆ ನೆರವಿಂದ ಕಾಡು ಸೇರಿಸಿದ ಅರಣ್ಯ ಸಿಬ್ಬಂದಿ
ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಾಟಿ ನಾಡಿಗೆ ಬಂದಿದ್ದ ಒಂಟಿ ಸಲಗ ರೈಲ್ವೆ ಹಳಿ ತಡೆಗೋಡೆ ಭೇದಿಸಲಾಗದೇ ಕಾಡಂಚಿನಲ್ಲೇ ಅಡ್ಡಾಡುತ್ತಿದ್ದು, ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಮರಳಿ ಕಾಡು ಸೇರಿಸುವಲ್ಲಿ ಯಶಸ್ವಿಯಾದರು.

ಹನಗೋಡು ಬಳಿಯ ಹುಣಸೂರು ವಲಯದ ಬಿಲ್ಲೇನ ಹೊಸಳ್ಳಿ ಬಳಿ ಗ್ರಾಮಸ್ಥರಿಗೆ ಈ ಸಲಗ ಪುಕ್ಕಟೆ ಮನರಂಜನೆ ನೀಡಿತು. ಚಂದನಗಿರಿ ಹಾಡಿ ಬಳಿ ಈ ಒಂಟಿ ಸಲಗ ಆಗಾಗ್ಗೆ ನಾಡು ಪ್ರವೇಶಿಸಿ, ರಾತ್ರಿಯಿಡೀ ಮೇವು ತಿಂದು ವಾಪಾಸ್ಸಾ ಗುತ್ತಿತ್ತು. ಇತ್ತೀಚೆಗೆ ಇಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಿದ್ದು, ರಾತ್ರಿಯಿಡೀ ಮೇವು ತಿಂದಿದ್ದ ಸಲಗವು ವಾಪಸ್ ಕಾಡಿಗೆ ತೆರಳಲು ಪ್ರಯತ್ನಿಸಿದೆ.

ಆದರೆ ಬೇಲಿ ಇದ್ದುದ್ದರಿಂದ ಅತ್ತಿಂದಿತ್ತ ಅಡ್ಡಾಡಿದೆ. ಅಷ್ಟರೊಳಗೆ ಬೆಳಕಾಗಿದೆ. ಮುಂಜಾನೆ ಗ್ರಾಮಸ್ಥರು ಕಾಡಾನೆ ಕಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಕಾಡಿನ ಕಡೆಗೆ ಮರಳದ್ದರಿಂದ ಬಿಲ್ಲೇನಹೊಸಹಳ್ಳಿ ಕೆರೆ ಹತ್ತಿರದ ಕೂಟದ ಕಡದ ಬಳಿ ರೈಲ್ವೆ ಹಳಿ ತಡೆಗೋಡೆ ತೆರವುಗೊಳಿಸಿ ಕಾಡು ಸೇರಿಸುವ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ಸಫಲವಾಗದ್ದರಿಂದ ಕೊನೆಗೆ ಸಾಕಾನೆಗಳಾದ ಗೋಪಾಲಸ್ವಾಮಿ, ಗಣೇಶನ ಕರೆತಂದು ತೆರೆ ದಿದ್ದ ಬೇಲಿ ಮೂಲಕ ಸಂಜೆ ವೇಳೆಗೆ ಕಾಡು ಸೇರಿಸಿದರುಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ವೀರಭದ್ರಪ್ಪ, ರತ್ನಾಕರ, ಅರಣ್ಯ ರಕ್ಷಕರಾದ ಗೋಪಾಲ, ಆನಂದ, ಗಣೇಶ್ ಪಾಲ್ಗೊಂಡಿದ್ದರು.

Translate »