ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
ಮೈಸೂರು

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

July 21, 2018

ಹನಗೋಡು:  ಸಾಲಬಾಧೆಯಿಂದ ಯುವ ರೈತ ನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹನಗೋಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುತ್ತಣ್ಣರವರ ಪುತ್ರ ಪ್ರಶಾಂತ್ (29) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ, ಒಂದು ಹೆಣ್ಣು ಮಗು ಇದೆ.

ಘಟನೆ ವಿವರ: ಮುತ್ತಣ್ಣ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಎಲ್ಲರೂ ಒಟ್ಟಿಗೆ ವಾಸವಿದ್ದರೆನ್ನಲಾಗಿದೆ. ಇರುವ ಒಟ್ಟು 12 ಎಕರೆ ಜಮೀನಿನಲ್ಲಿ ಶುಂಠಿ, ಬಾಳೆ ಬೆಳೆ ಬೆಳೆದಿದ್ದು, ಶುಂಠಿ ಬೆಳೆ ಕಳೆದ ವರ್ಷ ಕೈಕೊಟ್ಟಿತ್ತು, ಈ ಬಾರಿ ಅತಿಯಾದ ಮಳೆ ಯಿಂದಾಗಿ ಬೆಳೆ ಕೊಳೆಯಲಾರಂಬಿಸಿತ್ತು, ಹುಣಸೂರು ನಗರದ ಬ್ಯಾಂಕೊಂದರಲ್ಲಿ 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದಲ್ಲದೇ ಸಾಕಷ್ಟು ಕೈಸಾಲ ಸಹ ಮಾಡಿಕೊಂಡಿದ್ದರೆನ್ನಲಾಗಿದೆ. ಕಳೆದೆರಡು ವರ್ಷದಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದಿದ್ದ ರಿಂದಾಗಿ ಆತಂಕಗೊಂಡು, ಜಮೀನಿನ ಕೆಲ ಭಾಗ ಮಾರಾಟ ಮಾಡಲು ಚಿಂತಿಸಿ ದ್ದರು, ಜಮೀನು ಕೊಳ್ಳಲು ಯಾರೂ ಮುಂದೆ ಬಾರದೆ ಬೇಸತ್ತ ಪ್ರಶಾಂತ್ ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »