ದೊಡ್ಡೇಬಾಗಿಲು ಗ್ರಾ.ಪಂ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ
ಮೈಸೂರು

ದೊಡ್ಡೇಬಾಗಿಲು ಗ್ರಾ.ಪಂ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ

July 21, 2018

ತಿ.ನರಸೀಪುರ:  ತಾಲೂಕಿನ ದೊಡ್ಡೇಬಾಗಿಲು ಗ್ರಾಮ ಪಂಚಾ ಯಿತಿ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಿಂದಿನ ಉಪಾಧ್ಯಕ್ಷೆ ಮಂಜುಳ ಷಡಕ್ಷರಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ಸಾಮಾನ್ಯಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸಮೂರ್ತಿ ಅವರೊಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದ ರಿಂದ ಅವಿರೋಧ ಆಯ್ಕೆಗೊಂಡರು.

21 ಗ್ರಾ.ಪಂ ಸದಸ್ಯರಲ್ಲಿ 20 ಮಂದಿ ಸಭೆಗೆ ಹಾಜರಾಗಿ ನೂತನ ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರು. ಚುನಾವಣಾಧಿಕಾರಿಯಾಗಿ ಸಿಡಿಪಿಓ ಬಿ.ಎನ್.ಬಸವರಾಜು, ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಓ ಲಿಂಗರಾಜು ಕಾರ್ಯನಿರ್ವಹಿಸಿದರು. ಆಯ್ಕೆ ಪ್ರಕ್ರಿಯೆ ನಂತರ ಉಪಾಧ್ಯಕ್ಷರ ಬೆಂಬಲಿಗರು ಎಲ್ಲರಿಗೂ ಸಿಹಿಯನ್ನು ವಿತರಿಸಿ ಸಂಭ್ರಮಿಸಿದರು.
ಉಪಾಧ್ಯಕ್ಷ ಶ್ರೀನಿವಾಸಮೂರ್ತಿ ಮಾತ ನಾಡಿ, ಅಭಿವೃದ್ಧಿಗೆ ಅಧ್ಯಕ್ಷರೊಂದಿಗೆ ದುಡಿಯಲು ಎಲ್ಲರ ಸಹಕಾರ ಪಡೆಯು ತ್ತೇನೆ. ಗ್ರಾಮೀಣ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಿಷ್ಠೆಯಿಂದ ದುಡಿ ಯುತ್ತೇನೆ ಎಂದು ತಿಳಿಸಿದರು.

ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿ ಕಾರ್ಜುನಸ್ವಾಮಿ, ಮಾಜಿ ಸದಸ್ಯ ಪಿ. ಗಿರೀಶ್, ಎಪಿಎಂಸಿ ಉಪಾಧ್ಯಕ್ಷ ಮಹ ದೇವಯ್ಯ, ಗ್ರಾ.ಪಂ ಅಧ್ಯಕ್ಷೆ ಚೆನ್ನಮ್ಮ, ಸದಸ್ಯರಾದ, ಮಲ್ಲಾಜಮ್ಮ, ಪುಟ್ಟಸ್ವಾಮಿ, ಭಾಗ್ಯಲಕ್ಷ್ಮೀ, ಮಹಮ್ಮದ್ ರಫಿಕ್, ಶಿವಮ್ಮ, ರಮೇಶ, ನಿಂಗಯ್ಯ, ಶಕೀಲಾ ಬಾನು, ಮುಬಾರಕ್ ಪಾಷ, ಮಹದೇವಯ್ಯ, ಮಹದೇವಮ್ಮ, ಭಾಗ್ಯಮ್ಮ, ಮಂಜುಳ ಸುರೇಶ್, ಮಧುಸೂದನ್, ಹೆಚ್.ಎಂ. ದಶಕಂಠ, ಮಾಜಿ ಅಧ್ಯಕ್ಷ ಮರಯ್ಯ, ಮುಖಂಡರಾದ ಡಿ.ಬಿ.ಪ್ರೇಮಕುಮಾರ, ಮಹದೇವಯ್ಯ(ಕರಗಯ್ಯ), ಯೋಗೇಂದ್ರ, ವಾಜಿದ್, ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.

Translate »