ಆಷಾಢ ಮಾಸದ ಮೊದಲ ಶುಕ್ರವಾರ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ
ಚಾಮರಾಜನಗರ

ಆಷಾಢ ಮಾಸದ ಮೊದಲ ಶುಕ್ರವಾರ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ

July 21, 2018

ಚಾಮರಾಜನಗರ: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಜಿಲ್ಲೆಯ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಸಾವಿರಾರು ಭಕ್ತರು ದೇವಸ್ಥಾನಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರು.

ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಮಲೆಮಹದೇಶ್ವರಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ, ವೀರಭದ್ರೇಶ್ವರ, ಕಾಳಿಕಾಂಬ ಹಾಗೂ ಆದಿಶಕ್ತಿ ದೇವಸ್ಥಾನ, ಸಂತೇ ಮರಹಳ್ಳಿಯ ಶ್ರೀ ಮಹದೇಶ್ವರ ದೇವಸ್ಥಾನ, ಕಂದಹಳ್ಳಿಯ ಶ್ರೀ ಮಹದೇಶ್ವರ ದೇವಾ ಲಯ ಸೇರಿದಂತೆ ಜಿಲ್ಲಾದ್ಯಂತ ಎಲ್ಲಾ ದೇವಾ ಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಆಷಾಢ ಮಾಸದ ಅಂಗವಾಗಿ ದೇವರಿಗೆ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ವಿವಿಧ ದೇವಸ್ಥಾನ ಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಮುತ್ತೈ ದೆಯರು ಹಾಗೂ ಯುವತಿಯರು ನಿಂಬೆ ಹಣ್ಣಿನ ದೀಪ ಹಚ್ಚುತ್ತಾ ದೇವರಿಗೆ ನಮಿಸುತ್ತಿದ್ದ ದೃಶ್ಯ ಬಹುತೇಕ ದೇವಸ್ಥಾ ನಗಳಲ್ಲಿ ಕಂಡು ಬಂತು.

ಸಾಮೂಹಿಕ ಲಲಿತಾ ಸಹಸ್ರನಾಮಕ್ಕೆ ಸಚಿವರಿಂದ ಚಾಲನೆ

ನಗರದ ಅಗ್ರಹಾರ ಬೀದಿಯ ಪಟ್ಟಾಭೀರಾಮ ಮಂದಿರದಲ್ಲಿ ಆಷಾಢ ಶುಕ್ರವಾದ ಅಂಗವಾಗಿ ನಡೆದ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ಕೆ ಹಿಂದುಳಿದ ವರ್ಗ ಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಅಷ್ಟಲಕ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಪಟ್ಟಾಭಿ ರಾಮ ಮಂದಿರದ ಅಧ್ಯಕ್ಷ ಕೆ.ಬಾಲಸುಬ್ರಮಣ್ಯಂ ಅವರು, ಎರಡು ವರ್ಷಗಳಿಂದ ಚಾಮರಾಜೇಶ್ವರ ಸ್ವಾಮಿರ ರಥೋತ್ಸವ ನಡೆದಿಲ್ಲ. ಮುಂದಿನ ವರ್ಷದಿಂದ ರಥೋತ್ಸವವು ವಿಜೃಂಭಣೆ ಯಿಂದ ನಡೆಯುವಂತೆ ಮಾಡಿಕೋಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆಂಪನಪುರದ ಉದ್ಯಮಿ ಹೆಚ್.ಎನ್.ಶ್ರೀಧರ್. ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ರಮೇಶ್, ಫಲ ಮೃತ ಕೃಷ್ಣಮೂರ್ತಿ, ಮಾಜಿ ನಗರಸಭೆ ಸದಸ್ಯೆ ಶಾಂತಲ ಪ್ರಸಾದ್, ಶಂಕರರುದ್ರ ಭೂಮಿ ಅಧ್ಯಕ್ಷ ಸತೀಶ್‍ಕುಮಾರ್, ಮುಖಂ ಡರಾದ ಲಕ್ಷ್ಮಿನರಸಿಂಹ, ನಾಗವಳ್ಳಿ ಶ್ರೀನಾಥ್ ಹಾಜರಿದ್ದರು. ಈ ವೇಳೆ ನೂರಕ್ಕೂ ಹೆಚ್ಚು ವಿಪ್ರ ಮಹಿಳೆಯರು ಸಾಮೂಹಿಕ ಲಲಿತಾ ಸಹಸ್ರನಾಮ ಪೂಜಾ ಕಾರ್ಯದಲ್ಲಿ ಭಾಗಿ ಯಾಗಿದ್ದರು. ಪೂಜಾ ಕಾರ್ಯವನ್ನು ವೇದ ಬಹ್ಮಶ್ರೀ ಪಾಲಕ್ಷಭರದ್ವಾಜ್, ರಾಮಕೃಷ್ಣ ಭಾರದ್ವಾಜ್ ನೆರವೇರಿಸಿದರು.

Translate »