ಕಬಿನಿ ಜಲಾಶಯ ಭರ್ತಿಯಾದರೂ ನಾಲೆಗೆ ನೀರಿಲ್ಲ ಹುಳಿಮಾವು ರೈತರ ಆರೋಪ
ಮೈಸೂರು

ಕಬಿನಿ ಜಲಾಶಯ ಭರ್ತಿಯಾದರೂ ನಾಲೆಗೆ ನೀರಿಲ್ಲ ಹುಳಿಮಾವು ರೈತರ ಆರೋಪ

July 21, 2018

ಸುತ್ತೂರು: ಮುಂಗಾರು ಮಳೆ ಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದರೂ ರಾಂಪುರ ನಾಲೆಗೆ ಇನ್ನೂ ನೀರು ಹರಿಸಿಲ್ಲ ಎಂದು ರೈತರು ದೂರಿದ್ದಾರೆ. ವಾಡಿಕೆಯಂತೆ ಭತ್ತದ ಹೈನು ಫಸಲಿಗೆ ಜೂನ್ ತಿಂಗಳಲ್ಲೇ ನಾಲೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ.

ನಾಲೆಯ ಕೆಲವು ಕಡೆ ಹೂಳು ಎತ್ತಿಸ ಬೇಕಾಗಿದೆ. ಅದೂ ಕೂಡ ನಡೆದಿಲ್ಲ. ನಂಜನಗೂಡು ತಾಲೂಕಿನ ಹುಳಿಮಾವು ಬಳಿ ಹಾದು ಹೋಗಿರುವ ರಾಂಪುರ ನಾಲೆಯಲ್ಲಿ ಹೂಳು ತೆಗೆದಿಲ್ಲ. ನೀರು ಜಮೀನು ಗಳಿಗೆ ತಲುಪದ ಸ್ಥಿತಿಯಿದೆ. ಹೂಳು ತೆಗೆಸಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ರೈತರಾದ ಗುರುಸ್ವಾಮಿ, ಶ್ರೀಕಂಠಸ್ವಾಮಿ, ಮಹೇಶ್‍ಕುಮಾರ್, ಸಿದ್ದಪ್ಪ, ಮಾದಣ್ಣ, ಮಾಧು, ನಟರಾಜು ಹಾಗೂ ಶ್ರೀರಾಮ್ ಎಂಬುವರು ಆರೋಪಿಸಿದ್ದಾರೆ.
ಕಬಿನಿ ಪ್ರವಾಹದಿಂದ ತುಂಬಿ ಹರಿಯು ತ್ತಿದ್ದರೂ ನಾಲೆಗೆ ನೀರು ಹರಿಸಲು ಮುಂದಾಗದಿರುವುದೇಕೆ ಎಂದು ಪ್ರಶ್ನಿಸಿ ದ್ದಾರೆ. ನಾಲೆಗೆ ನೀರು ಹರಿಸಲು ಈಗಲಾ ದರೂ ಕ್ರಮ ಕೈಗೊಳ್ಳಬೇಕು. ಹುಳಿಮಾವು ಬಳಿ ನಾಲಾ ಹೂಳೆತ್ತಿಸಬೇಕು ಎಂದು ಆಗ್ರಹಿಸಿದ್ದಾರೆ.

Translate »