Tag: Kabini

ಕಬಿನಿ ಕುಡಿಯುವ ನೀರು ಪೂರೈಕೆ ಪರಿಶೀಲಿಸಿದ ಶಾಸಕ ರಾಮದಾಸ್
ಮೈಸೂರು

ಕಬಿನಿ ಕುಡಿಯುವ ನೀರು ಪೂರೈಕೆ ಪರಿಶೀಲಿಸಿದ ಶಾಸಕ ರಾಮದಾಸ್

June 21, 2020

ಮೈಸೂರು, ಜೂ.20(ಆರ್‍ಕೆಬಿ)- ಮೈಸೂರು ಪಾಲಿಕೆಯ 60, 61 ಮತ್ತು 62ನೇ ವಾರ್ಡ್‍ನ ಮನೆಗಳಿಗೆ ಶನಿವಾರ ಭೇಟಿ ನೀಡಿದ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್, ಕಬಿನಿ ಯೋಜನೆ ಯಡಿ ಕುಡಿಯುವ ನೀರು ಸರಬರಾಜಾ ಗುತ್ತಿರುವುದನ್ನು ಪರಿಶೀಲಿಸಿದರು. ಮೈಸೂರು ನಗರಕ್ಕೆ ವಾರದ ಏಳೂ ದಿನ, 24 ಗಂಟೆ ನಿರಂತರ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ 2010-11ನೇ ಸಾಲಿನಲ್ಲೇ ಚಾಲನೆ ನೀಡಲಾಗಿತ್ತು. ಗುತ್ತಿಗೆ ಪಡೆದಿದ್ದ ಜೆಸ್ಕೊ ಕಂಪನಿ ಕಾಮ ಗಾರಿಯನ್ನು ಅರ್ಧಕ್ಕೆ ನಿಲ್ಲಿಸಿತ್ತು. ಕೊಳವೆ ಸಂಪರ್ಕ ಕಲ್ಪಿಸಿದ್ದರೂ ನೀರು ಸರಬರಾಜಾ ಗದ…

ಕೆಆರ್‍ಎಸ್, ಕಬಿನಿ, ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ
ಮೈಸೂರು

ಕೆಆರ್‍ಎಸ್, ಕಬಿನಿ, ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ

August 8, 2019

ಮೈಸೂರು: ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಬಿನಿ, ಹೇಮಾವತಿ ಮತ್ತು ಕೆಆರ್‍ಎಸ್ ಜಲಾ ಶಯದ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಕಬಿನಿಗೆ 25 ಸಾವಿರ ಕ್ಯೂಸೆಕ್ ನೀರು: ಕೇರಳದ ವೈನಾಡು ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾ ಗುತ್ತಿದ್ದು, ಜಲಾಶಯಕ್ಕೆ ಪ್ರಸ್ತುತ 25,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಿದ್ದು, ಸದ್ಯ 2281 ಅಡಿಗಳ ನೀರು ಸಂಗ್ರಹವಿದೆ. ಜಲಾಶಯ ಭರ್ತಿಗೆ ಕೇವಲ 3 ಅಡಿಯಷ್ಟೇ…

ಕೆಆರ್‍ಎಸ್, ಕಬಿನಿಯಿಂದ ನೀರು ಬಿಡುಗಡೆ ಪ್ರವಾಹದಿಂದ ಗ್ರಾಮ ತೊರೆಯುತ್ತಿರುವ ಜನರು
ಚಾಮರಾಜನಗರ

ಕೆಆರ್‍ಎಸ್, ಕಬಿನಿಯಿಂದ ನೀರು ಬಿಡುಗಡೆ ಪ್ರವಾಹದಿಂದ ಗ್ರಾಮ ತೊರೆಯುತ್ತಿರುವ ಜನರು

August 19, 2018

ದಾಸನಪುರ ಪ್ರವೇಶ ನಿಷೇಧ, ಗಂಜಿ ಕೇಂದ್ರಗಳಿಗೆ ಸಂತ್ರಸ್ತರ ಸ್ಥಳಾಂತರ, ಜನರ ಸಂಕಷ್ಟ ಆಲಿಸಿದ ಜನಪ್ರತಿನಿಧಿಗಳು ಕೊಳ್ಳೇಗಾಲ:  ಎತ್ತನೋಡಿದರು ನೀರು. ಜೀವ ರಕ್ಷಣೆಗಾಗಿ ಗ್ರಾಮಗಳನ್ನು ತೊರೆದು ನೀರಿನ ನಡುವೆಯೇ ಮನೆ ಸಾಮಗ್ರಿಗಳು, ಜಾನುವಾರುಗಳನ್ನು ಸಾಗಿಸುತ್ತಿರುವ ಗ್ರಾಮಸ್ಥರು. ವಯೋವೃದ್ಧರನ್ನು ಕರೆದ್ಯೊಯುತ್ತಿರುವ ರಕ್ಷಣಾ ಸಿಬ್ಬಂದಿ…. -ಇದು ತಾಲೂಕಿನ ದಾಸನಪುರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕಂಡು ಬಂದ ದೃಶ್ಯ. ನಿರಂತರ ಮಳೆಯಿಂದ ಕೆಆರ್‍ಎಸ್, ಕಬಿನಿ ಜಲಾಶಯಗಳಿಂದ 3ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಜೀವ…

ಕಬಿನಿ, ಕೆಆರ್‍ಎಸ್‍ನಿಂದ ಹೆಚ್ಚು ನೀರು ಬಿಡುಗಡೆ: ಮುನ್ನೆಚ್ಚರಿಕೆ ವಹಿಸಲು ಡಿಸಿ ಮನವಿ 
ಚಾಮರಾಜನಗರ

ಕಬಿನಿ, ಕೆಆರ್‍ಎಸ್‍ನಿಂದ ಹೆಚ್ಚು ನೀರು ಬಿಡುಗಡೆ: ಮುನ್ನೆಚ್ಚರಿಕೆ ವಹಿಸಲು ಡಿಸಿ ಮನವಿ 

August 15, 2018

ಚಾಮರಾಜನಗರ:  ಕಬಿನಿ ಜಲಾಶಯ ಹಾಗೂ ಕೆ.ಆರ್.ಎಸ್. ಅಣೆಕಟ್ಟೆಯಿಂದ ಹೆಚ್ಚು ನೀರನ್ನು ನದಿಗೆ ಬಿಡುತ್ತಿರುವ ಹಿನ್ನಲೆಯಲ್ಲಿ ಕೊಳ್ಳೆಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ. ಕಬಿನಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್, ಕೆಆರ್‍ಎಸ್ ಅಣೆ ಕಟ್ಟೆಯಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಳೆಯು ಅಧಿಕವಾಗುತ್ತಿರುವುದರಿಂದ ಕೆಆರ್‍ಎಸ್ ಅಣೆಕಟ್ಟೆಯಿಂದ ಇನ್ನು ಹೆಚ್ಚಿನ ನೀರನ್ನು ಬಿಡುವ ಸಾಧ್ಯತೆ ಇರುವುದಾಗಿ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ…

ಕಬಿನಿ ಜಲಾಶಯ ಬಳಿ ಚಿರತೆ ಮೃತದೇಹ ಪತ್ತೆ
ಮೈಸೂರು

ಕಬಿನಿ ಜಲಾಶಯ ಬಳಿ ಚಿರತೆ ಮೃತದೇಹ ಪತ್ತೆ

August 5, 2018

ಹೆಚ್.ಡಿ.ಕೋಟೆ:  ಕಬಿನಿ ಜಲಾಶಯದ ಬಳಿ ನಾಲ್ಕು ವರ್ಷದ ಗಂಡು ಚಿರತೆ ಮೃತದೇಹ ಪತ್ತೆಯಾಗಿದ್ದು, ಅದರ ಎಂಟು ಉಗುರುಗಳು ಕಾಣೆಯಾಗಿರುವುದರಿಂದ ಅದನ್ನು ಬೇಟೆಗಾರರು ಕೊಂದಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಕಬಿನಿ ಜಲಾಶಯದ ಮುಖ್ಯದ್ವಾರದ ಸಮೀಪ ಹೊಳೆಯಲ್ಲಿ ತೇಲಿ ಬಂದ ಚಿರತೆ ಮೃತದೇಹ ದಡ ಸೇರಿದೆ. ವಿಚಾರ ತಿಳಿದು, ಸ್ಥಳಕ್ಕೆ ಹೆಚ್.ಡಿ.ಕೋಟೆ ಆರ್‍ಎಫ್‍ಓ ಮಧು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಡಾಕ್ಟರ್ ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ದೇಹವನ್ನು ಜಲಾಶಯದ ಬಳಿ ಸುಡಲಾಯಿತು, ಕಳೆದ ಮೂರು ದಿನಗಳ…

ತುಂತುರು ಮಳೆ ನಡುವೆ ತರಾತುರಿಯಲ್ಲಿ ‘ಕಪಿಲೆ’ಗೆ ಸಿಎಂ ಬಾಗಿನ
ಮೈಸೂರು

ತುಂತುರು ಮಳೆ ನಡುವೆ ತರಾತುರಿಯಲ್ಲಿ ‘ಕಪಿಲೆ’ಗೆ ಸಿಎಂ ಬಾಗಿನ

July 21, 2018

ಹೆಚ್.ಡಿ.ಕೋಟೆ: ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕಬಿನಿಗೆ ನಿಗಧಿತ ಸಮಯಕ್ಕಿಂತ ತಡವಾಗಿ ಬಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತುಂತುರು ಮಳೆ ನಡುವೆ ತುಂಬಿದ ಕಪಿಲಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಸುಮಾರು ಎರಡೂವರೆ ಗಂಟೆ ತಡವಾಗಿ ಬಂದ ಮುಖ್ಯಮಂತ್ರಿಗಳು, ಬಾಗಿನ ಅರ್ಪಿಸಿದ ನಂತರ ಜಲಾಶಯದಲ್ಲಿ ಕೆಲಸ ಮಾಡುವ ನೌಕರರಿಗೆ ಸಮವಸ್ತ್ರಗಳನ್ನು ನೀಡಿದರು. ಪತ್ರಕರ್ತರು ಮಾತನಾಡಿಸಲು ಮುಂದಾದಾಗ ಕೈಸನ್ನೆಯಲ್ಲಿ “ಏನೂ ಇಲ್ಲ” ಎಂದು ಹೇಳಿ ಸ್ವಲ್ಪ ಹೊತ್ತಿನಲ್ಲೇ ನಿರ್ಗಮಿಸಿದರು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ,…

ಕಬಿನಿ ಜಲಾಶಯ ಭರ್ತಿಯಾದರೂ ನಾಲೆಗೆ ನೀರಿಲ್ಲ ಹುಳಿಮಾವು ರೈತರ ಆರೋಪ
ಮೈಸೂರು

ಕಬಿನಿ ಜಲಾಶಯ ಭರ್ತಿಯಾದರೂ ನಾಲೆಗೆ ನೀರಿಲ್ಲ ಹುಳಿಮಾವು ರೈತರ ಆರೋಪ

July 21, 2018

ಸುತ್ತೂರು: ಮುಂಗಾರು ಮಳೆ ಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದರೂ ರಾಂಪುರ ನಾಲೆಗೆ ಇನ್ನೂ ನೀರು ಹರಿಸಿಲ್ಲ ಎಂದು ರೈತರು ದೂರಿದ್ದಾರೆ. ವಾಡಿಕೆಯಂತೆ ಭತ್ತದ ಹೈನು ಫಸಲಿಗೆ ಜೂನ್ ತಿಂಗಳಲ್ಲೇ ನಾಲೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ. ನಾಲೆಯ ಕೆಲವು ಕಡೆ ಹೂಳು ಎತ್ತಿಸ ಬೇಕಾಗಿದೆ. ಅದೂ ಕೂಡ ನಡೆದಿಲ್ಲ. ನಂಜನಗೂಡು ತಾಲೂಕಿನ ಹುಳಿಮಾವು ಬಳಿ ಹಾದು ಹೋಗಿರುವ ರಾಂಪುರ ನಾಲೆಯಲ್ಲಿ ಹೂಳು ತೆಗೆದಿಲ್ಲ. ನೀರು ಜಮೀನು ಗಳಿಗೆ ತಲುಪದ ಸ್ಥಿತಿಯಿದೆ. ಹೂಳು ತೆಗೆಸಲು ಸಂಬಂಧಪಟ್ಟ…

ನೋಡ ಬನ್ನಿರೋ… ಜಿಲ್ಲೆಯ ನಯಾಗರ ಸೊಬಗು ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದೆ ಜಲರಾಶಿ…
ಚಾಮರಾಜನಗರ

ನೋಡ ಬನ್ನಿರೋ… ಜಿಲ್ಲೆಯ ನಯಾಗರ ಸೊಬಗು ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದೆ ಜಲರಾಶಿ…

July 14, 2018

ಕಣ್ಣಿಗೆ ಕಂಪು, ಕಿವಿಗೆ ಇಂಪು ಜಲ ಝೇಂಕಾರ ಚಾಮರಾಜನಗರ: ಜಿಲ್ಲೆಯ ನಯಾಗರ ಎಂದೇ ಪ್ರಸಿದ್ಧವಾಗಿರುವ ಭರಚುಕ್ಕಿ, ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತ ಭೋರ್ಗರೆಯುತ್ತಿದ್ದು, ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳು ವುದೇ ಒಂದು ಸೊಬಗು. ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರಿನ ಭೋರ್ಗರೆತ, ಅದರಿಂದ ತೇಲಿ ಬರುತ್ತಿರುವ ತಂಗಾಳಿಯ ಸ್ವಾದವನ್ನು ವರ್ಣಿಸಲು ಪದಗಳೇ ಸಾಲದು. ಕಬಿನಿಯಿಂದ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಳಿ ಜಲಪಾತಗಳೆಂದೇ ವಿಶ್ವ ಪ್ರಸಿದ್ಧವಾಗಿರುವ ಭರಚುಕ್ಕಿ, ಗಗನಚುಕ್ಕಿ ಜಲಪಾತಗಳು…

ಜುಲೈ ಮೊದಲ ವಾರದೊಳಗೆ ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ ಪ್ರತಿಭಟನೆ
ಮೈಸೂರು

ಜುಲೈ ಮೊದಲ ವಾರದೊಳಗೆ ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ ಪ್ರತಿಭಟನೆ

June 19, 2018

ಮೈಸೂರು: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ಜುಲೈ ಮೊದಲ ವಾರದೊಳಗೆ ನಾಲೆಗಳಿಗೆ ನೀರು ಬಿಡದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್ ಎಚ್ಚರಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಹಾಗೂ ಕೊಡಗಿನ ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಹಾಗೂ ಕೆಆರ್‌ಎಸ್‌ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ನಡುವೆ ಕಳೆದ ನಾಲ್ಕೈದು ದಿನಗಳಿಂದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಕಪಿಲಾ…

ನೂರರ ಗಡಿ ತಲುಪಿದ ಕೆಆರ್‍ಎಸ್ ನೀರಿನ ಮಟ್ಟ
ಮೈಸೂರು

ನೂರರ ಗಡಿ ತಲುಪಿದ ಕೆಆರ್‍ಎಸ್ ನೀರಿನ ಮಟ್ಟ

June 17, 2018

ಮಂಡ್ಯ:  ಜೀವನಾಡಿ ಕೃಷ್ಣರಾಜ ಸಾಗರ(ಕೆಆರ್‍ಎಸ್) ಜಲಾಶಯದ ನೀರಿನ ಮಟ್ಟ ನೂರರ ಗಡಿ ತಲುಪಿದೆ. ಹಾಗೆಯೇ ಇನ್ನಿತರೆ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚು ತ್ತಿದ್ದು ರೈತರಲ್ಲಿ ಸಂತಸ ಮೂಡಿಸಿದೆ.ಕೊಡಗಿನ ಭಾಗಮಂಡಲ ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಉತ್ತಮವಾಗಿರು ವುದರಿಂದ ಕೆಆರ್‍ಎಸ್ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುವುದ ರೊಂದಿಗೆ ನೀರಿನ ಮಟ್ಟ ನೂರಡಿ ತಲುಪಿದೆ. ಸದ್ಯ 28,132 ಕ್ಯೂಸೆಕ್ ಒಳ ಹರಿವಿದ್ದು ಜಲಾ ಶಯ ಮೈದುಂಬುತ್ತಿದೆ. ಹಾಗೆಯೇ 451 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ….

Translate »