Tag: Hanagodu

ವೀರನಹೊಸಳ್ಳಿ ಆಶ್ರಮ ಶಾಲೆಯಲ್ಲಿ ಪೋಷಣ್ ಅಭಿಯಾನ
ಮೈಸೂರು

ವೀರನಹೊಸಳ್ಳಿ ಆಶ್ರಮ ಶಾಲೆಯಲ್ಲಿ ಪೋಷಣ್ ಅಭಿಯಾನ

March 18, 2021

ಹನಗೋಡು, ಮಾ.17(ಮಹೇಶ)-ದೇಶದಲ್ಲಿ ಆಹಾರೋತ್ಪಾದನೆ ಜನ ಸಂಖ್ಯೆಯ ಆಧಾರದಲ್ಲಿ ದುಪ್ಪಟ್ಟಾಗಿದ್ದರೂ, ಆಹಾರ ವ್ಯರ್ಥ ಮಾಡುವ ಹಾಗೂ ಆಹಾರಕ್ಕಾಗಿ ಪರದಾಡುವ ಜನರನ್ನು ಕಾಣುತ್ತಿದ್ದೇವೆ. ಈ ಅಸಮಾನತೆ ತೊಲಗ ಬೇಕಿದೆ ಎಂದು ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಅಭಿಪ್ರಾಯಪಟ್ಟರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಾಲೂಕಿನ ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಳ್ಳಿ ಆಶ್ರಮಶಾಲೆಯಲ್ಲಿ ಪೋಷಣ್ ಅಭಿಯಾನ ಯೋಜನೆ ಯಡಿ ಆಯೋಜಿಸಿದ್ದ ಪೋಷಣ್ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ರಕ್ಷಣೆ ಕುರಿತಂತೆ ಮನೆ ಗಳಲ್ಲಿ ಅಮ್ಮ, ಅಜ್ಜಿಯರು ನೀಡುತ್ತಿದ್ದ…

‘ಸಮುದಾಯದತ್ತ ಶಾಲೆ’ ಪುನಾರಂಭ ಅಗತ್ಯ: ಎಚ್.ವಿಶ್ವನಾಥ್
ಮೈಸೂರು

‘ಸಮುದಾಯದತ್ತ ಶಾಲೆ’ ಪುನಾರಂಭ ಅಗತ್ಯ: ಎಚ್.ವಿಶ್ವನಾಥ್

November 16, 2018

ಹನಗೋಡು: ಶೈಕ್ಷಣಿಕ ಪ್ರಗತಿ ಜೊತೆಗೆ ಸವಲತ್ತು ವೃದ್ಧಿಸಿಕೊಳ್ಳಲು ಸಹ ಕಾರಿಯಾಗುವಂತೆ ತಿಂಗಳಿಗೊಮ್ಮೆ ‘ಸಮ ದಾಯದತ್ತ ಶಾಲೆ’ ಯೋಜನೆಯನ್ನು ತಾವು ಶಿಕ್ಷಣ ಸಚಿವರಾಗಿದ್ದ ವೇಳೆ ಜಾರಿಗೆ ತಂದು ಅಭಿವೃದ್ಧಿಗೆ ನೆರವಾಗಿದ್ದು, ಈ ಯೋಜನೆಯನ್ನು ಪುನರಾರಂಭಿಸುವ ಅವಶ್ಯವಿದೆ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಗ್ರಾಮ ಸಭೆಯನ್ನು ಮಕ್ಕಳಿಂದಲೇ ಉದ್ಘಾಟಿಸಿದ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ, ಯಾವುದೇ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ…

ನಾಡಿಗೆ ಬಂದ ಒಂಟಿ ಸಲಗ ಕಾಡಿಗೆ ಮರಳಲು ಹರಸಾಹಸ
ಮೈಸೂರು

ನಾಡಿಗೆ ಬಂದ ಒಂಟಿ ಸಲಗ ಕಾಡಿಗೆ ಮರಳಲು ಹರಸಾಹಸ

October 5, 2018

ಸಾಕಾನೆ ನೆರವಿಂದ ಕಾಡು ಸೇರಿಸಿದ ಅರಣ್ಯ ಸಿಬ್ಬಂದಿ ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಾಟಿ ನಾಡಿಗೆ ಬಂದಿದ್ದ ಒಂಟಿ ಸಲಗ ರೈಲ್ವೆ ಹಳಿ ತಡೆಗೋಡೆ ಭೇದಿಸಲಾಗದೇ ಕಾಡಂಚಿನಲ್ಲೇ ಅಡ್ಡಾಡುತ್ತಿದ್ದು, ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಮರಳಿ ಕಾಡು ಸೇರಿಸುವಲ್ಲಿ ಯಶಸ್ವಿಯಾದರು. ಹನಗೋಡು ಬಳಿಯ ಹುಣಸೂರು ವಲಯದ ಬಿಲ್ಲೇನ ಹೊಸಳ್ಳಿ ಬಳಿ ಗ್ರಾಮಸ್ಥರಿಗೆ ಈ ಸಲಗ ಪುಕ್ಕಟೆ ಮನರಂಜನೆ ನೀಡಿತು. ಚಂದನಗಿರಿ ಹಾಡಿ ಬಳಿ ಈ ಒಂಟಿ ಸಲಗ ಆಗಾಗ್ಗೆ ನಾಡು ಪ್ರವೇಶಿಸಿ, ರಾತ್ರಿಯಿಡೀ ಮೇವು…

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
ಮೈಸೂರು

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

July 21, 2018

ಹನಗೋಡು:  ಸಾಲಬಾಧೆಯಿಂದ ಯುವ ರೈತ ನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹನಗೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುತ್ತಣ್ಣರವರ ಪುತ್ರ ಪ್ರಶಾಂತ್ (29) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ, ಒಂದು ಹೆಣ್ಣು ಮಗು ಇದೆ. ಘಟನೆ ವಿವರ: ಮುತ್ತಣ್ಣ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಎಲ್ಲರೂ ಒಟ್ಟಿಗೆ ವಾಸವಿದ್ದರೆನ್ನಲಾಗಿದೆ. ಇರುವ ಒಟ್ಟು 12 ಎಕರೆ ಜಮೀನಿನಲ್ಲಿ ಶುಂಠಿ, ಬಾಳೆ ಬೆಳೆ ಬೆಳೆದಿದ್ದು, ಶುಂಠಿ ಬೆಳೆ ಕಳೆದ ವರ್ಷ ಕೈಕೊಟ್ಟಿತ್ತು, ಈ ಬಾರಿ…

ಭಾರೀ ಮಳೆಗೆ ಕೊಚ್ಚಿ ಹೋದ ಬೆಳೆ
ಮೈಸೂರು

ಭಾರೀ ಮಳೆಗೆ ಕೊಚ್ಚಿ ಹೋದ ಬೆಳೆ

June 4, 2018

ಹನಗೋಡು: ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಜಲಾವೃತವಾಗಿ, ಕೆರೆಗಳಂತೆ ಗೋಚರಿಸುತ್ತಿದ್ದರೆ, ಕೆಲವೆಡೆ ಕೊಚ್ಚಿ ಹೋಗಿದೆ. ಹತ್ತಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ. ಹನಗೋಡಿಗೆ ಸಮೀಪದ ಕಿರಂಗೂರು, ಹಿಂಡಗುಡ್ಲು, ದಾಸನಪುರ, ದೊಡ್ಡ ಹೆಜ್ಜೂರು, ಭಾರತವಾಡಿ, ಮಾದಹಳ್ಳಿ, ಹರಳಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ 1.30 ರಿಂದ 2.30ರವರೆಗೆ ಸುರಿದ ಭಾರೀ ಮಳೆಯು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳ, ತಂಬಾಕು, ಶುಂಠಿ,…

Translate »