ಇಂದು ಮೈಸೂರು ಜೈಲಿಂದ 10 ಖೈದಿಗಳ ಬಿಡುಗಡೆ
ಮೈಸೂರು

ಇಂದು ಮೈಸೂರು ಜೈಲಿಂದ 10 ಖೈದಿಗಳ ಬಿಡುಗಡೆ

October 5, 2018

ಮೈಸೂರು : ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಅಂಗವಾಗಿ 10 ಮಂದಿ ಖೈದಿಗಳನ್ನು ಮೈಸೂರು ಕೇಂದ್ರ ಕಾರಾಗೃಹದಿಂದ ನಾಳೆ(ಅ.5) ಬೆಳಿಗ್ಗೆ 9.45ಕ್ಕೆ ಜಿಲ್ಲಾ ಮತ್ತು ಪ್ರಧಾನ ಸೇಷನ್ ನ್ಯಾಯಾಧೀಶರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸನ್ನಡತೆಯ ಆಧಾರದ ಮೇಲೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಈರಪ್ಪ, ನೆಲಮನೆ ಗ್ರಾಮದ ತಿಮ್ಮೇಗೌಡ, ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕಿನ ಮೆಣಸ ಗ್ರಾಮದ ನಾಗರಾಜ ಅಲಿಯಾಸ್ ನಾಗ, ನಲ್ಕೇರಿ ಗ್ರಾಮದ ಹೆಚ್.ಪಿ.ಶಿವಕುಮಾರ್, ನಂಜನಗೂಡು ಟೌನ್ ನಿವಾಸಿ ಚಂದ್ರಶೇಖರ್, ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಹಳಗಂಗೂರಿನ ಚೆನ್ನಪ್ಪ, ಅಣ್ಣಪ್ಪ, ಮೈಸೂರಿನ ಹೂಟಗಳ್ಳಿಯ ಶಿವಲಿಂಗ, ಹಾಸನ ಜಿಲ್ಲೆ, ಬೇಲೂರಿನ ರಾಜು, ತಮಿಳುನಾಡಿನ ಈರೋಡು ಜಿಲ್ಲೆಯ ಸತ್ಯಮಂಗಲ ತಾಲೂಕಿನ ಚಿಕ್ಕರಸನಪಾಳ್ಳದ ದೇವರಾಜು ಬಿಡುಗಡೆಯಾಗಲಿದ್ದಾರೆ.

Translate »