ಮೂಲ ಸೌಕರ್ಯ ಒದಗಿಸದ ಪಪಂ ವಿರುದ್ಧ ಪ್ರತಿಭಟನೆ
ಮೈಸೂರು

ಮೂಲ ಸೌಕರ್ಯ ಒದಗಿಸದ ಪಪಂ ವಿರುದ್ಧ ಪ್ರತಿಭಟನೆ

January 5, 2019

ಸರಗೂರು: ವಾಜಪೇಯಿ ನಗರಾಭಿವೃದ್ಧಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡದ ಹಾಗೂ ಮೂಲಭೂತ ಸೌಕರ್ಯ ಒದಗಿಸದ ಪಟ್ಟಣ ಪಂಚಾಯಿತಿ ಕ್ರಮ ಖಂಡಿಸಿ ಫಲಾನುಭವಿಗಳು ಸರಗೂರು ಪಟ್ಟಣ ಪಂಚಾಯಿತಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮುಖಂಡ ಎಸ್.ಎಲ್. ರಾಜಣ್ಣ ಮಾತನಾಡಿ, 216 ವಸತಿ ರಹಿತ ಫಲಾನುಭವಿಗಳು ತೀರ ಬಡವರಾಗಿದ್ದಾರೆ. ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ವಿದ್ದಾರೆ. ಅಷ್ಟೇ ಅಲ್ಲ ಬಾಡಿಗೆ ಕಟ್ಟಲೂ ಅಸಹಾಯಕ ರಾಗಿದ್ದಾರೆ ಎಂದು ಸಮಸ್ಯೆ ತೀವ್ರತೆ ವಿವರಿಸಿದರು.

15 ವರ್ಷಗಳ ಹಿಂದೆ ವಾಜಪೇಯಿ ನಗರಾಭಿವೃದ್ಧಿ ವಸತಿ ಯೋಜನೆಯಲ್ಲಿ ನಿವೇಶನ ನೀಡಿ, ಮನೆ ನಿರ್ಮಾಣ ಮಾಡಿ ಕೂಡಲು ಸರ್ಕಾರದ ನಿಯಮವಿದ್ದರೂ, ಪಟ್ಟಣ ಪಂಚಾಯಿತಿ ಅಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಇಲ್ಲಿಯ ತನಕ ಕಾರ್ಯಗತ ಗೊಳಿಸಲ್ಲ. ನಿವೇಶನ ಮೂಲ ಸೌಕರ್ಯ ಗಳಾದ ವಸತಿ, ಬೀದಿದೀಪ, ನೀರಿನ ಸಂಪರ್ಕ, ರಸ್ತೆ ನಿರ್ಮಾಣ ಮಾಡಿಲ್ಲ. ಫಲಾ ನುಭವಿಗಳ ನೆರವಿಗೆ ಯಾವುದೇ ಸಂಘ ಸಂಸ್ಥೆ ಬಾರದ ಕಾರಣ ಪಟ್ಟಣ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಅನುಮೊದನೆ ನೀಡಿದ್ದರೂ, ರಾಜ್ಯ ಸರ್ಕಾರ ಅನುಮೋದನೆ ನೀಡಿಲ್ಲ. ನೀವೇಶನ ಸ್ಥಳವೆಲ್ಲಾ ಗಿಡಗಂಟಿ ಬೆಳೆದು ನಿವೇಶನವೇ ಕಾಣದಂತಾಗಿದೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಫಲಾನುಭವಿಗಳು ತಹಶೀಲಾ ್ದರ್ ಪ್ರಸನ್ನ ಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ಅಶೋಕ್ ಹಾಗೂ ಅಧ್ಯಕ್ಷೆ ಜ್ಯೋತಿ ಯೋಗೀಶ್ ಅವರಿಗೆ ಮನವಿ ಪತ್ರ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ್ದ ಸಿ. ಅಶೋಕ್ ಫಲಾನುಭವಿಗಳಿಗೆ ನಿವೇಶನ ವನ್ನು ತೋರಿಸಿ ಕೊಡಲಾಗುವುದು. ಕೇಂದ್ರ ಸರ್ಕಾರದ ಅನುಮೋದನೆ ಬಂದಿದ್ದು, ಅನುದಾನ ಬಿಡುಗಡೆಯಾಗಿ ರಾಜ್ಯ ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದೇವೆ. ಈ ವಿಚಾರವಾಗಿ ಸರ್ಕಾರಕ್ಕೆ ಮನವಿ ಮಾಡ ಲಾಗಿದೆ. ಬಾಕಿಯಾಗಿದ್ದ 12 ಫಲಾನುಭವಿ ಗಳಿಗೂ 15 ದಿನಗಳಲ್ಲಿ ನಿವೇಶನದ ಹಕ್ಕುಪತ್ರದ ಸೌಲಭ್ಯ ಸಿಗಲಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಯೋಗೀಶ್ ಮಾತನಾಡಿ, ನಾನು ಅಧ್ಯಕ್ಷೆಯಾಗಿ 3 ತಿಂಗಳಾಗಿದೆ. ಮೊದಲ ಹಂತದಲ್ಲೇ ಎಲ್ಲಾ ಸದಸ್ಯರ ಜೊತೆ ಚರ್ಚೆ ಮಾಡಿ, ಪ್ರಾಮಾಣಿಕವಾಗಿ ಮನೆ ನೀಡಲು ತಾಲೂಕಿನ ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದಿದ್ದೇವೆ. ಅವರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಅನು ಮೋದನೆಗೆ ತರಲು ಮುಂದಾಗುತ್ತಾರೆ. ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇವೆ. ನಿಮ್ಮಗಳ ಜೊತೆ ನಾವುಗಳು ಇದ್ದೇವೆ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಬಳಿಕ ಪ್ರತಿಭಟ ನಾಕಾರರು ಪ್ರತಿಭಟನೆ ಹಿಂಪಡೆದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾದ ರಮೇಶ್, ಕಲೀಲ್, ಶ್ರೀನಿವಾಸ್, ನಾಗರಾಜ ರಾಮ್ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.

Translate »