ಬೈಕ್‍ಗೆ ಪ್ಯಾಸೆಂಜರ್ ಆಟೋ ಡಿಕ್ಕಿ: ಪತಿ ಸಾವು, ಪತ್ನಿಗೆ ತೀವ್ರ ಗಾಯ
ಮೈಸೂರು

ಬೈಕ್‍ಗೆ ಪ್ಯಾಸೆಂಜರ್ ಆಟೋ ಡಿಕ್ಕಿ: ಪತಿ ಸಾವು, ಪತ್ನಿಗೆ ತೀವ್ರ ಗಾಯ

January 5, 2019

ತಿ.ನರಸೀಪುರ: ದಂಪತಿ ತೆರಳುತ್ತಿದ್ದ ಬೈಕ್‍ಗೆ ಎದುರಿಂದ ವೇಗವಾಗಿ ಬಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಗಂಡ ಸಾವನ್ನಪ್ಪಿ, ಪತ್ನಿ ಗಾಯಗೊಂಡ ಘಟನೆ ತಾಲೂಕಿನ ಹಸುವಟ್ಟಿ ಗ್ರಾಮದ ಬಳಿ ಪೂರೀಗಾಲಿ ಮುಖ್ಯ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.

ತಾಲೂಕಿನ ಪಟ್ಟೇಹುಂಡಿ ಗ್ರಾಮದ ದೊಡ್ಡ ಜವರಯ್ಯ ಎಂಬುವರ ಪುತ್ರ ಬಸವೇಶ್(45) ಮೃತಪಟ್ಟ ದುರ್ದೈವಿ ಯಾಗಿದ್ದು, ಆತನ ಪತ್ನಿ ಲಕ್ಷ್ಮೀ(35) ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಮಾವಾಸ್ಯೆಯ ಹಿನ್ನಲೆ ಬೊಪ್ಪೇಗೌಡನ ಪುರ ಮಠಕ್ಕೆ ಪೂರೀಗಾಲಿ ಮಾರ್ಗವಾಗಿ ಟಿವಿಎಸ್ ಸ್ಟಾರ್ ಸಿಟಿ ಬೈಕ್(ಕೆಎ 09, ಇಜûಡ್ 3478)ನಲ್ಲಿ ಹಸುವಟ್ಟಿ ಗ್ರಾಮದ ಬಳಿ ಎದುರಿಗೆ ವೇಗವಾಗಿ ಬಂದ ಪ್ಯಾಸೆಂಜರ್ ಆಟೋ(ಕೆಎ-34, 8134) ಡಿಕ್ಕಿ ಹೊಡೆ ದಿದ್ದರಿಂದ ಬೈಕ್‍ನೊಂದಿಗೆ ಕೆಳಗೆ ಬಿದ್ದರು.

ಕೈಗಳು ಮುರಿದು, ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಸವೇಶ್ ಕೊನೆಯುಸಿರೆಳೆದರು. ಗಾಯಗೊಂಡ ಲಕ್ಷ್ಮೀ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬನ್ನೂರು ಪೆÇಲೀಸ್ ಠಾಣೆಯ ಪಿಎಸ್‍ಐ ಎನ್.ಆನಂದ್ ಪ್ರಕರಣ ದಾಖಲಿಸಿ ಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Translate »