ಭತ್ತ, ಕಬ್ಬು ಬೆಳೆಗಾರರ ಬೇಡಿಕೆ ಈಡೆರಿಸದಿದ್ದರೆ ಹೋರಾಟ ಅನಿವಾರ್ಯ
ಮೈಸೂರು

ಭತ್ತ, ಕಬ್ಬು ಬೆಳೆಗಾರರ ಬೇಡಿಕೆ ಈಡೆರಿಸದಿದ್ದರೆ ಹೋರಾಟ ಅನಿವಾರ್ಯ

January 5, 2019

ನಂಜನಗೂಡು: ರಾಜ್ಯ ಸರ್ಕಾರ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ವಿಳಂಬ ನೀತಿ ಅನುಸರಿ ಸುತ್ತಿದೆ. ತಾಲೂಕಿನಲ್ಲಿ ಶೇ.90ರಷ್ಟು ಭತ್ತ ಕಟಾವು ಆಗಿ ಕಡಿಮೆ ಬೆಲೆಗೆ ದಲ್ಲಾಳಿಗಳ ಪಾಲಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬೆನ್ನೆಲುಬಾಗಿ ನಿಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಮಂಜುನಾಥ್ ಎಚ್ಚರಿಸಿದರು.

ನಗರದ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಭತ್ತದ ಬೆಳೆಗಾರರ ನೆರವಿಗೆ ಬರಬೇಕು. 5000 ರೂ. ಪ್ರೋತ್ಸಾಹ ಧನವನ್ನು ಪ್ರತಿ ಎಕರೆಗೂ ಕೊಡಬೇಕು. ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ಟನ್ ಕಬ್ಬಿಗೆ 3500 ರೂ. ದರ ಘೋಷಣೆ ಮಾಡ ಬೇಕು. ಕಾರ್ಖಾನೆಗಳಿಗೆ ದೊರಕುವ ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭದಲ್ಲಿ ಅರ್ಧದಷ್ಟನ್ನು ರೈತರಿಗೆ ಕೊಡಿಸಿ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದಲ್ಲಿ ರುವ ಶ್ರೀ ಗ್ಲೂಕೋ ಬಯೋಟೆಕ್ ಪ್ರೈವೇಟ್ ಲಿ. ಕಾರ್ಖಾನೆಯಿಂದ ಹೊರ ಸೂಸುವ ದುರ್ವಾಸನೆಯಿಂದ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಗೆ ಬರುವ ಗ್ರಾಮಗಳ ಜನರಿಗೆ ಉಸಿರಾಟ ಕಷ್ಟವಾಗಿದೆ. ತ್ಯಾಜ್ಯ ನೀರಿನಿಂದ ಅಂತರ್ಜಲ ಕೂಡಾ ಕಲುಷಿತ ವಾಗುವ ಸಾಧ್ಯತೆಯಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ಈ ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಶಿವಶಂಕರ, ತಾಲೂಕು ಉಪಾ ಧ್ಯಕ್ಷ ಮಹೇಶ್ ಹಾಜರಿದ್ದರು.

Translate »