ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ
ಮೈಸೂರು

ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ

January 6, 2019

ಮೈಸೂರು: ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ 28,910 ರೂ. ನಗದು, 13 ಮೊಬೈಲ್ ಫೋನ್ ಹಾಗೂ 1 ಟ್ಯಾಬ್ ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಶಾಂತಿನಗರದ ಕೈಸರ್ ಅಹಮದ್ (32), ರಾಜೀವ್ ನಗರದ ಸೈಯ್ಯದ್ ತನ್ವೀರ್ (31), ಕೆ.ಆರ್.ಮೊಹಲ್ಲಾದ ದಿಲೀಪ್ (27) ಹಾಗೂ ಕೊಳ್ಳೇಗಾಲದ ಮಹ್ಮದ್ ಶಕೀಲ್ (32) ಬಂಧಿತರು. ರಾಜೀವ್ ನಗರ 1ನೇ ಹಂತ, 1ನೇ ಕ್ರಾಸ್‍ನ 2965ನೇ ಸಂಖ್ಯೆಯ ಮನೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು.

ಖಚಿತ ಮಾಹಿತಿಯನ್ವಯ ಶುಕ್ರವಾರ ದಾಳಿ ನಡೆಸಿದ ಸಿಸಿಬಿ ಇನ್ಸ್‍ಪೆಕ್ಟರ್ ಸಿ.ಕಿರಣ್ ಕುಮಾರ್ ನೇತೃತ್ವದ ಸಿಬ್ಬಂದಿಗಳಾದ ಚಂದ್ರೇಗೌಡ, ರಾಮಸ್ವಾಮಿ, ಎಂ.ಆರ್.ಗಣೇಶ, ರಾಜೇಂದ್ರ, ಪ್ರಕಾಶ, ಆನಂದ್, ಗೌತಮ್ ಅವರು, ಆರೋಪಿಗಳನ್ನು ಬಂಧಿಸಿದರು.

Translate »