ವಿರಾಜಪೇಟೆ: ವಿರಾಜಪೇಟೆ ಪಟ್ಟಣದ ಮುಖ್ಯ ಬೀದಿಯಲ್ಲಿ ಹೋಟೆಲ್ ಮತ್ತು ಅಂಗಡಿಗಳ ಮುಂಭಾಗದಲ್ಲಿ ಅನ ಧಿಕೃತವಾಗಿ ನಿರ್ಮಿಸಿದ್ದ ಮೇಲ್ಚಾವಣೆ ಪಟ್ಟ ಣದ ಮುಖ್ಯ ಬೀದಿಯ ಫುಟ್‍ಪಾತ್‍ನಲ್ಲಿ ವ್ಯಾಪಾರ ಮಾಡುವುದನ್ನು ಪಟ್ಟಣ ಪಂಚಾ ಯಿತಿ ಮುಖ್ಯಾಧಿಕಾರಿ ಎ.ಎಂ ಶ್ರೀಧರ್ ಹಾಗೂ ಸಿಬ್ಬಂದಿ ತೆರವುಗೊಳಿಸಿದರಲ್ಲದೆ ಶುಚಿತ್ವ ಕಾಪಾಡದಿದ್ದ ಹೋಟೆಲ್‍ಗಳಿಗೆ ದಂಡ ವಿಧಿಸಿದರು.
ಸಂತೆ ದಿನವಾದ ಬುಧವಾರ ಒಂದು ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಬಾರ ದೆಂದು ಹಿಂದಿನ ಪಪಂ ಮಾಸಿಕ ಸಭೆ ಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೂ ಅಂಗಡಿಯವರು ದಾರಿಗೆ ಬಟ್ಟೆಗಳನ್ನು ತೂಗುಹಾಕುತ್ತಾರೆ, ಫುಟ್‍ಪಾತ್‍ಗಳಲ್ಲಿ ವ್ಯಾಪಾರ ಮಾಡುವುದರಿಂದ ಪಾದಚಾರಿ ಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಹಲವಾರು ಸಂಘ ಸಂಸ್ಥೆಗಳು ದೂರು ನೀಡಿದ ಹಿನ್ನಲೆಯಲ್ಲಿ ತೆರವು ಕಾರ್ಯ ಕ್ಯೆಗೊಳ್ಳಲಾಯಿತು .
ಪಟ್ಟಣದ ಗಡಿಯಾರ ಕಂಬದಿಂದ ಅಬ್ದುಲ್ ಕಲಾಂ ರಸ್ತೆ, ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪ ರಸ್ತೆ, ಎಫ್.ಎಂ.ಸಿ ರಸ್ತೆ ಗಳಲ್ಲಿ ತೆರವು ಕಾರ್ಯ ಕೈಗೊಂಡು ಹೊಟೇ ಲುಗಳಿಗೆ ಭೇಟಿ ನೀಡಿ ಶುಚಿತ್ವದ ಬಗ್ಗೆ ಪರಿಶೀಲಿಸಿದ ಮುಖ್ಯಾಧಿಕಾರಿ ಶ್ರೀಧರ್ ಅವರು ಶುಚಿತ್ವವನ್ನು ಕಪಾಡದಿದ್ದ ಹೊಟೇ ಲುಗಳಿಗೆ ದಂಡ ವಿದಿಸಿದರಲ್ಲದೆ. ಅಂಗಡಿ ಗಳ ಮುಂಭಾಗದಲ್ಲಿ ಅನಾಧಿಕೃತ ಮೇಲ್ಚಾ ವಣಿ ನಿರ್ಮಿಸಿಕೊಂಡಿರುವವರಿಗೂ ದಂಡ ವಿಧಿಸಿದರು. ನಂತರ ಒಂದು ವಾರ ದಲ್ಲಿ ಮೇಲ್ಚಾವಣಿಯನ್ನು ತೆರವು ಗೊಳಿ ಸದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ತೆರವು ಕಾರ್ಯದ ಸಂದರ್ಭ ಘರ್ಷಣೆ ಉಂಟಾಗಂತೆ ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಸೋಮೇಶ್, ವೇಲುಮುರುಗ, ಮುರುಳಿ ಮುಂತಾದವರು ಹಾಜರಿದ್ದರು.
ಬಳಿಕ ಮಾತನಾಡಿದ ಮುಖ್ಯಾದಿಕಾರಿ, ಕಳೆದ ವಾರದಲ್ಲಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಹಾಗೂ ಪದಾಧಿ ಕಾರಿಗಳ ಜೊತೆಯಲ್ಲಿ ಸಭೆ ನಡೆಸಿದ್ದೇವೆ. ಕೆಲವು ಅಂಗಡಿಗಳಿಗೆ ಭೇಟಿ ನೀಡಿ ಎಚ್ಚ ರಿಕೆ ನೀಡಲಾಗಿದೆ. ಈ ಬಾರಿ ದಂಡ ವಿಧಿಸಿ ಕಳುಹಿಸಲಾಗಿದ್ದು. ಇದೇ ರೀತಿ ಮುಂದು ವರಿದರೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು. ಪಟ್ಟಣದಲ್ಲಿ ಹಲ ವಾರು ವರ್ತಕರು ಅಂಗಡಿ ಮುಂಗಟ್ಟು ಗಳ ಪರವಾನಗಿ ಯನ್ನು ನವೀಕರಿಸದ ಕಾರಣ ಅವರ ವಿರುದ್ದ ಕ್ರಮ ಕೈಗೊಳಲಾಗು ವುದು ಎಂದು ಎ.ಎಂ.ಶ್ರೀಧರ್ ತಿಳಿಸಿದರು.