ಸರಗೂರು ಬಯಲು ಶೌಚ ಮುಕ್ತವಾಗಿಸಲು ಅಗತ್ಯ ಕ್ರಮ
ಮೈಸೂರು

ಸರಗೂರು ಬಯಲು ಶೌಚ ಮುಕ್ತವಾಗಿಸಲು ಅಗತ್ಯ ಕ್ರಮ

December 10, 2018

ಸರಗೂರು: ಸ್ವಚ್ಛ ಭಾರತ ಅಭಿಯಾನದ ಮೂಲಕ ಪಟ್ಟಣ ವನ್ನು ಬಯಲು ಶೌಚ ಮುಕ್ತ ಪಟ್ಟಣವ ನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಸಿ. ಅಶೋಕ್ ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‍ನ ಜನಧ್ವನಿ ಸಮುದಾಯ ಬಾನುಲಿಯು ಏರ್ಪಡಿಸಿದ್ದ ನೇರ ಸಂದ ರ್ಶನ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಪಟ್ಟಣದ ಅಭಿ ವೃದ್ಧಿಗೆ ಸಂಬಂಧಿಸಿದಂತೆ ಸಮುದಾಯದಿಂದ ಬಂದಂತಹ ಮೂಲ ಸೌಕರ್ಯ ಮತ್ತು ಬೇಡಿಕೆಯ ಕರೆಗಳಿಗೆ ಉತ್ತರಿಸಿದರು.

ಸರಗೂರಿನಿಂದ ವೆಂಕಟೇಶ್ ಮತ್ತು ಆನಂದ್ ಕರೆ ಮಾಡಿ, ಸರಗೂರಿನ 8ನೇ ವಾರ್ಡ್‍ನಲ್ಲಿರುವ ಸೋಪಾನ ಕಟ್ಟೆ ಹಾಳಾಗಿ, ಅಸುಚಿತ್ವದಿಂದ ಕೂಡಿದೆ. ಕೂಡಲೇ ದುರಸ್ತಿ ಗೊಳಿಸಬೇಕು. ಹಾಗೇ ಜಯಚಾಮ ರಾಜೇಂದ್ರ ಕ್ರೀಡಾಂಗಣ ಅಭಿವೃದ್ಧಿಗೊಳಿಸ ಬೇಕು ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಸೋಪಾನಕಟ್ಟೆ ಆದಷ್ಟು ಬೇಗ ದುರಸ್ತಿ ಗೊಳಿಸುವ ಭರವಸೆ ನೀಡಿದರಲ್ಲದೆ, ಜಯಚಾಮರಾಜೇಂದ್ರ ಕ್ರೀಡಾಂಗಣವು ಬೇರೆಯವರ ಹೆಸರಿ ನಲ್ಲಿದೆ, ಆದರೆ ಅವರು ಯಾರೆಂದು ತಿಳಿದು ಬಂದಿಲ್ಲ. ಹಾಗಾಗಿ ಈ ಕೆಲಸ ತಡವಾಗಿದೆ ಎಂದು ಮಾಹಿತಿ ನೀಡಿದರು.

ಸರಗೂರಿನಿಂದ ಜಯರಾಮ್ ಕರೆ ಮಾಡಿ, ಪಟ್ಟಣದ ಮಹಾವೀರ ವೃತ್ತದ ಬಳಿ ಇರುವ ಹೈಮಾಸ್ಟ್ ಬೀಳುವ ಸ್ಥಿತಿಯಲ್ಲಿದ್ದು, ಬೇಗ ತೆರವುಗೊಳಿಸುವಂತೆ ಗಮನ ಸೆಳೆದರು. ರಮೇಶ್ ಕರೆ ಮಾಡಿ, ಪಟ್ಟಣದ ನೀರು ಶುದ್ಧೀಕರಣ ಘಟಕ ಸಮಸ್ಯೆ ಹಾಗೂ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ಬಗ್ಗೆ ಗಮನ ಸೆಳೆದರು. ಇದಕ್ಕೆ ಅಧಿಕಾರಿಗಳು ಪಟ್ಟಣದ ನೀರು ಶುದ್ಧೀ ಕರಣ ಘಟಕದ ಕೆಲವು ಮೋಟಾರ್‍ಗಳು ಕೆಟ್ಟಿವೆ. ಇವನ್ನು ಕೆಲವೇ ದಿನಗಳಲ್ಲೇ ದುರಸ್ತಿ ಪಡಿಸಲಾಗುವುದು ಹಾಗೂ ತಂಬಾಕು ಉತ್ಪನ್ನ ಮಾರುವ ಅಂಗಡಿ ಗಳನ್ನು ತೆರವುಗೊಳಿಸ ಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮಲ್ಲಿ ಪಟ್ಟಣದ ಅಭಿವೃದ್ಧಿ ಕುರಿತಂತೆ ಅನೇಕ ಬಂದ ಕರೆಗಳಿಗೆ ಮುಖ್ಯಾಧಿಕಾರಿಗಳು ಸಮಾಧಾನದಿಂದ ಉತ್ತರಿಸಿದರು. ಕಾರ್ಯಕ್ರಮವನ್ನು ಜನಧ್ವನಿ ಸಮು ದಾಯ ಬಾನುಲಿಯ ವ್ಯವಸ್ಥಾಪಕ ಶಿವಕುಮಾರ್ ನಡೆಸಿಕೊಟ್ಟರು.

Translate »