ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯಲ್ಲಿ ಕಂದಾಯ ಅದಾಲತ್ ಮತ್ತು ಜನ ಸಂಪರ್ಕ ಸಭೆ ನಡೆಯಿತು.
ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಎ.ಸಿ.ಶಿವೇಗೌಡ, ತಹ ಶೀಲ್ದಾರ್ ರಮೇಶ್ ಬಾಬು, ಜಯಪುರ ಗ್ರಾಪಂ ಅಧ್ಯಕ್ಷ ದಾರಿಪುರ ಬವಸಣ್ಣ ಸಭೆ ಯನ್ನು ಉದ್ಘಾಟಿಸಿದರು.
ಹೋಳಿಯ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರತೆ ಗಳನ್ನು ಹೇಳಿಕೊಂಡರು. ಕೆಂಚಲಗೂಡಿ ನಲ್ಲಿ ವೈನ್ಸ್ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದರು. ಮದ್ದೂರು ಗ್ರಾಮಸ್ಥರಿಂದ ಶಾಲಾ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗು ತ್ತಿಲ್ಲ ಎಂಬ ದೂರು ಕೇಳಿ ಬಂತು. ಅಲ್ಲದೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ವಸತಿ ರಹಿತರಿಗೆ ನಿವೇಶನ ಕಲ್ಪಿಸಿ ಕೊಡು ವಂತೆ ವಿವಿಧ ಗ್ರಾಮಸ್ಥರು ಒತ್ತಾಯಿಸಿದರು.
ಇದೇ ವೇಳೆ ಫಲಾನು ಭವಿಗಳಿಗೆ ಮಾಸಾಶನ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಇಓ ಲಿಂಗ ರಾಜಯ್ಯ, ಉಪತಹಶೀಲ್ದಾರ್ ಎಸ್.ಕೆ. ಕುಬೇರ್, ರಾಜಸ್ವ ನಿರೀಕ್ಷ ನಿಂಗಪ್ಪ, ಜಯಪುರ ಪಿಡಿಓ ಕವಿತಾ ಸೇರಿದಂತೆ ಮೈಸೂರು ತಾಲೂಕಿನ ವಿವಿಧ ಗ್ರಾಮಗಳ ಪಿಡಿಓ ಗಳು, ತಾಪಂ ಮಾಜಿ ಸದಸ್ಯ ಜವರ ನಾಯಕ, ಜಯಪುರ ಗ್ರಾಪಂ ಸದಸ್ಯರು, ಗ್ರಾಮ ಲೆಕ್ಕಿಗರು, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.