ಬೈಲಕುಪ್ಪೆ: ಪೋಷಕರು ಶಿಕ್ಷಕರೊಂದಿಗೆ ಸಹಕರಿಸಿದಾಗ ಮಾತ್ರ ಮಕ್ಕಳು ಉನ್ನತ ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಲು ಸಾಧ್ಯ ಎಂದ ಜಿಪಂ ಸದಸ್ಯ ವಿ.ರಾಜೇಂದ್ರ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಪ್ರೌಢಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಸರ್ಕಾರ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಮಧ್ಯಾಹ್ನದ ಬಿಸಿಯೂಟ, ಕೆನೆಭರಿತ ಹಾಲು, ಸಮವಸ್ತ್ರ, ಪಠ್ಯಪುಸ್ತಕ, ಶೂ ಸೇರಿದಂತೆ ಶೈಕ್ಷಣಿಕ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುತ್ತಿದ್ದು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಶಾಲೆಯ ಎಸ್‍ಎಲ್‍ಎಲ್‍ಸಿ ಮಕ್ಕಳು ಹೆಚ್ಚು ಅಂಕ ಪಡೆದು ಉತೀರ್ಣರಾದವರಿಗೆ ನನ್ನ ವೈಯಕ್ತಿವಾಗಿ 10ಸಾವಿರ ಬಹುಮಾನ ಕೊಡುವುದಾಗಿ ಘೋಷಿಸಿದರು. ಸಭೆಯಲ್ಲಿ ಮುಖ್ಯಶಿಕ್ಷಕಿ ಭಾಗ್ಯ, ಬೈಲಕುಪ್ಪೆ ಗ್ರಾಪಂ ಸದಸ್ಯರಾದ ಹೆಚ್.ಎ.ಮಂಜುನಾಥ, ಯಶೋದಮ್ಮ ಮಾತನಾಡಿದರು. ಎಸ್‍ಡಿ ಎಂಸಿ ಅಧ್ಯಕ್ಷೆ ಕವಿತಾ, ಗ್ರಾಪಂ ಸದಸ್ಯರಾದ ನಿಸಾರ್‍ಅಹಮ್ಮದ್, ಗ್ರಾಮಸ್ಥರಾದ ಶಬ್ಬೀರ್‍ಖಾನ್, ಶಿಕ್ಷಕರಾದ ಮಂಜುನಾಥ, ವಾಸು, ಪಶುಪತಿ, ಶಾಲಾ ಮಕ್ಕಳು ಸೇರಿದಂತೆ ಪೋಷಕರು ಹಾಜರಿದ್ದರು.