ಸಂಸದರಿಂದ ನೂತನ ಬಿಎಂಸಿ ಕೇಂದ್ರ ಪರಿಶೀಲನೆ
ಮೈಸೂರು

ಸಂಸದರಿಂದ ನೂತನ ಬಿಎಂಸಿ ಕೇಂದ್ರ ಪರಿಶೀಲನೆ

November 12, 2018

ತಿ.ನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಅಭಿವೃದ್ಧಿ ಹಾಗೂ ಹಾಲು ಸಂಸ್ಕರಣೆಗೆ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಡೈರಿ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಿಎಂಸಿ ಕೇಂದ್ರ ಆರಂಭಿಸಲಾಯಿತು ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.

ತಾಲೂಕಿನ ನಂಜಾಪುರ ಗ್ರಾಮದಲ್ಲಿ ಉದ್ಘಾಟನೆಯಾದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕೇಂದ್ರ ವನ್ನು ಪರಿಶೀಲಿಸಿ ಅವರು ಮಾತನಾಡಿದರು. ಯುಪಿಎ ಕೇಂದ್ರ ಸರ್ಕಾರದಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಸಚಿವರಾಗಿದ್ದ ಶರದ್ ಪವಾರ್ ಅವರು ರಾಷ್ಟ್ರೀಯ ಡೈರಿ ಯೋಜನೆ (ಎನ್‍ಡಿಪಿ)ಯನ್ನು ಆರಂಭಿಸಿದ್ದರಿಂದ ದೇಶದಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಶೇಖರಣೆಗೆ ಬಿಎಂಸಿ ಕೇಂದ್ರಗಳು ಆರಂಭಗೊಂಡವು ಎಂದರು.

ಸಂಸದರು ಮತ್ತು ಶಾಸಕರ ಪ್ರದೇಶಾ ಭಿವೃದ್ಧಿ ಅನುದಾನ ಹಳ್ಳಿಗಳಲ್ಲಿ ನಿತ್ಯ ಬಳಕೆ ಯಾಗುವ ಸರ್ಕಾರಿ ಶಾಲೆ, ಅಂಗನವಾಡಿ, ಕೇಂದ್ರ ಹಾಗೂ ಹಾಲು ಉತ್ಪಾದಕರ ಸಹ ಕಾರ ಸಂಘಗಳ ಕಟ್ಟಡಗಳಿಗೆ ಸದ್ಬಳಕೆ ಯಾಗಬೇಕು. ಸಮುದಾಯ ಭವನಗಳಿಗೆ ಹೆಚ್ಚು ಅನುದಾನ ಕೇಳುತ್ತಾರೆ ಹೊರತು ನಿತ್ಯದ ಬಳಕೆಯ ಕಟ್ಟಡಗಳಿಗೆ ಅನುದಾನಕ್ಕೆ ಅಪೇಕ್ಷಿಸಲ್ಲ. ಮೈಮುಲ್ ಮತ್ತು ಎಂಪಿ ಸಿಎಸ್ ನಿರ್ದೇಶಕರ ಮನವಿಯಂತೆ ನಂಜಾ ಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ ಎಂದು ಆರ್.ಧ್ರುವನಾರಾ ಯಣ ತಿಳಿಸಿದರು.

ಮೈಮುಲ್ ಅಪರ ನಿರ್ದೇಶಕ ಮಲ್ಲಿ ಕಾರ್ಜುನ ಮಾತನಾಡಿ, ಸಂಗ್ರಹಗೊಳ್ಳುವ ಹಾಲು ಹೆಚ್ಚು ಕಾಲದವರೆಗೆ ಗುಣಮಟ್ಟ ವನ್ನು ಕಾಪಾಡಿಕೊಳ್ಳಲು ಬಿಎಂಸಿ ಕೇಂದ್ರ ಗಳು ಸಹಕಾರಿಯಾಗಿವೆ. ಹಾಲು ಸರಬ ರಾಜಿನಲ್ಲಿ ಸುಧಾರಣೆ ತರಲು ಮುಂದಿನ ದಿನಗಳಲ್ಲಿ ರೂಟ್ ಕ್ಯಾನ್ ಆರಂಭಿಸಲಾಗು ವುದು ಎಂದು ಮಾಹಿತಿ ನೀಡಿದರು.
ಶಾಸಕ ಎಂ.ಅಶ್ವಿನ್ ಕುಮಾರ್ ನೂತನ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿದರು. ಮೈಮುಲ್ ಅಧ್ಯಕ್ಷ ಕೆ.ಜಿ.ಮಹೇಶ್, ನಿರ್ದೇ ಶಕ

ಕೆ.ಸಿ.ಬಲರಾಂ, ಉಪವ್ಯವಸ್ಥಾಪಕ ಕೆ.ಬಿ.ಶಿವಪ್ರಸಾದ್, ಜಿಪಂ ಸದಸ್ಯ ಎಸ್.ವಿ. ಜಯಪಾಲ ಭರಣಿ, ಸಂಘದ ಅಧ್ಯಕ್ಷ ಡಿ.ಎನ್.ಲಿಂಗಯ್ಯ, ಉಪಾಧ್ಯಕ್ಷ ಬಿ.ಶಿವಣ್ಣ, ಕಾರ್ಯದರ್ಶಿ ಬಿ.ಬಸವರಾಜು, ನಿರ್ದೇಶಕ ರಾದ ಎಂ.ಬಿ.ಬೋರಣ್ಣಗೌಡ, ಸೋಮಣ್ಣ, ಸಿದ್ದ, ವೆಂಕಟೇಶ್, ಸಿರಲಿಂಗಮ್ಮ, ಲಕ್ಷ್ಮಮ್ಮ, ಕುಮಾರ್, ಗ್ರಾಪಂ ಸದಸ್ಯ ಸಿದ್ದು, ವಕೀಲರ ಸಂಘದ ಖಜಾಂಚಿ ಎನ್.ಎಲ್.ಲಿಂಗಣ್ಣ ಹಾಗೂ ಇನ್ನಿತರರಿದ್ದರು.

Translate »