ಪ್ರಧಾನಿ ಮೋದಿಯಿಂದ ಜನಪರ ಯೋಜನೆಗಳಿಲ್ಲ ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ
ಮೈಸೂರು

ಪ್ರಧಾನಿ ಮೋದಿಯಿಂದ ಜನಪರ ಯೋಜನೆಗಳಿಲ್ಲ ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ

November 18, 2018

ನಂಜನಗೂಡು: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕಾರಾವಧಿ ಯಲ್ಲಿ ಈವರೆಗೆ ಯಾವುದೇ ಜನಪರ ಯೋಜನೆಗಳೂ ಜಾರಿಗೊಳಿಸಿಲ.್ಲ ನೋಟ್ ಬ್ಯಾನ್‍ನಂತಹ ತಪ್ಪು ನಿರ್ಧಾರದಿಂದ ದೇಶದ ಆರ್ಥಿಕ ಶಿಸ್ತನ್ನೇ ಹಾಳು ಮಾಡಿದ್ದಾರೆ ಎಂದು ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.

ತಾಲೂಕಿನ ಸಿಂಧುವಳ್ಳಿಯಲ್ಲಿರುವ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಂಜನಗೂಡು ಮತ್ತು ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತ ನಾಡಿದರು. 36 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ರಫೇಲ್ ಯುದ್ಧ ವಿಮಾನ ಖರೀದಿ ಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಹಿತವನ್ನು ಬಲಿಕೊಟ್ಟು ಖಾಸಗೀ ಉದ್ಯಮಿದಾರನಿಗೆ ನೆರವು ನೀಡಿದ್ದಾರೆ. ಇನ್ನು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಿಂದ ಯಾವೊಬ್ಬ ರೈತನಿಗೂ ಅನುಕೂಲವಾಗಿಲ್ಲ. ಬದಲಾಗಿ ಖಾಸಗಿ ವಿಮಾ ಸಂಸ್ಥೆಗಳು ಹಣ ಲೂಟಿ ಹೊಡೆಯಲು ನೆರವಾಗಿದೆ. ಹೀಗಾಗಿ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಸಮಾಜದ ಎಲ್ಲಾ ವರ್ಗದ ಜನರ ಹಿತ ಕಾಯುವ ಸಾಮಥ್ರ್ಯ ಹೊಂದಿರುವ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಕಾರ್ಯ ಕರ್ತರು ಸಜ್ಜಾಗಬೇಕು ಎಂದು ಹುರಿದುಂಬಿಸಿದರು.

ಕಾಂಗ್ರೆಸ್ ಜನೋಪಯೋಗಿ ಕಾರ್ಯಕ್ರಮ ಗಳು ಹಾಗೂ ಉತ್ತಮ ಯೋಜನೆಗಳನ್ನು ಈ ದೇಶಕ್ಕೆ ನೀಡಿದ್ದರು. ಪ್ರಚಾರ ಇಲ್ಲದಿರು ವುದೇ ಹಿನ್ನಡೆಗೆ ಕಾರಣವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೇ ವರ್ಷ ಕಳೆದರೂ ಒಂದು ಜನಪ್ರಿಯ ಯೋಜನೆಗಳನ್ನು ಜಾರಿ ಗೊಳಿಸಲಿಲ್ಲ್ಲ. ಗುಜರಾತ್‍ನಲ್ಲಿ ಸರದಾರ್ ವಲ್ಲಬಾಯ್ ಪಟೇಲ್‍ರ ಏಕತಾ ಪ್ರತಿಮೆ ಹಾಗೂ ರಾಮಮಂದಿರ ಕಟ್ಟುವ ವಿಚಾರ ಹೊರತು ಯಾವ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಮುಂದಾಗಿಲ್ಲ ಎಂದು ವ್ಯಂಗ್ಯ ವಾಡಿದರು. ಮುಂಬರುವ ನಗರ ಸಭೆ ಲೋಕಸಭಾ ಚುನಾವಣೆಗೆ ಸಜ್ಜಾಗುವಂತೆ ಹಾಗೂ ಎನ್‍ಡಿಎ ಸರ್ಕಾರದ ವೈಫಲ್ಯವನ್ನು ಮನೆ-ಮನೆಗೆ ತಿಳಿಸಿ, ಕಾಂಗ್ರೆಸ್ ಸಾಧನೆ ಮುಟ್ಟಿಸಬೇಕೆಂದು ಸಂಸದರು ಕರೆ ನೀಡಿದರು.

ಸಭೆಯಲ್ಲಿ ವರುಣಾ ವಿಧಾನಸಭಾ ಶಾಸಕ ಡಾ.ಯತೀಂದ್ರ ಮಾಜಿ ಶಾಸಕ ಕಳಲೆ ಎನ್. ಕೇಶವಮೂರ್ತಿ, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಂಜನಗೂಡು ಉಸ್ತುವಾರಿ ಶ್ರೀಕಂಠು ಮಾತ ನಾಡಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಪಟೇಲ್ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್‍ಕುಮಾರ್, ಕೆಪಿಸಿಸಿ ಸದಸ್ಯರಾದ ಸುಧೀರ್ ಕುಮಾರ್, ಚಂದ್ರ ಪಾಟೀಲ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಎಪಿಎಂಸಿ ಉಪಾಧ್ಯಕ್ಷ ವಿಜಯ ಕುಮಾರ್, ಜಿಪಂ ಸದಸ್ಯರಾದ ಲತಾಸಿದ್ದಶೆಟ್ಟಿ, ಪುಪ್ಪ ನಾಗೇಶ್ ರಾಜು, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಉಪಾದ್ಯಕ್ಷ ಪ್ರದೀಪ್, ಬ್ಲಾಕ್ ಅಧ್ಯಕ್ಷರಾದ ಹೆಚ್.ಎಸ್.ಮೂಗಶೆಟ್ಟಿ ಇತರರಿದ್ದರು.

Translate »