ಹುಣಸೂರು: ತಾಲೂಕಿನ ದ್ಯಾಂತ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕಳಪೆ ಕಾಮಗಾರಿಯಿಂದ ಕೂಡಿದ್ದು, ಕಾಮಗಾರಿ ಗುತ್ತಿಗೆ ಪಡೆದ ಏಜನ್ಸಿ ಯನ್ನು ಕಪ್ಪುಪಟ್ಟಿಗೆ ಸೇರಿಸಿ, ತನಿಖೆಗೆ ಒಳಪಡಿಸುವಂತೆ ತಾಪಂ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಇಂದು ಪಟ್ಟಣದ ತಾಪಂ ಸಭಾಂಗಣ ದಲ್ಲಿ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕಿನಾದ್ಯಂತ ಏಜೆನ್ಸಿಯೊಂದರಿಂದ ನಿರ್ಮಾಣವಾಗಿ ರುವ ಶುದ್ಧ ಕುಡಿಯುವ ನೀರಿನ ಘಟಕಗಳು ತೀರ ಕಳಪೆ ಕಾಮಗಾರಿಯಿಂದ ಕೂಡಿದ್ದು, ಜನರಿಗೆ ಕುಡಿಯುವ ನೀರು ನೀಡಲು ವಿಫಲ ವಾಗಿವೆ. ಕೂಡಲೇ ಏಜೆನ್ಸಿಯನ್ನು ರದ್ದು ಗೊಳಿಸಿ, ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಕಾಮಗಾರಿಯ ಹಣವನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆಗೆ ಒಳಪಡಿಸಿ ಎಂದು ಸದಸ್ಯ ರವಿ ಆಗ್ರಹಿಸಿದರು. ಈ ವೇಳೆ ಎಲ್ಲಾ ಸದಸ್ಯರು ದನಿಗೂಡಿಸಿದರು. ಅಧ್ಯಕ್ಷರೂ ಸದಸ್ಯರ ನಿರ್ಣಯಕ್ಕೆ ಸಮ್ಮತಿಸಿದರು.
`ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆ’ಯ ಎಇಇ ಮಹೇಶ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಕೆಆರ್‍ಐಡಿಯಿಂದ ಈಗಾಗಲೇ 30 ಘಟಕಗಳನ್ನು ನಿರ್ಮಿಸಲಾಗಿದೆ. ಇದನ್ನು 5 ವರ್ಷ ಅವರೇ ನಿರ್ವಹಣೆ ಮಾಡ ಬೇಕು. ಸದ್ಯ 19 ಸಂಪೂರ್ಣಗೊಂಡು ಸೇವೆ ನೀಡುತ್ತಿವೆ. ಉಳಿದ 9 ಘಟಕಗಳ ಕಾಮಗಾರಿ ಪ್ರಗತಿ ಯಲ್ಲಿವೆ. ಈಗಾಗಲೇ ಶೇ.50ರಷ್ಟು ಹಣ ಸಂದಾಯವಾಗಿದೆ. ಉಳಿದ ಹಣ ಸಂದಾ ಯವಾಗ ಬೇಕಾಗಿದೆ ಎಂದು ತಿಳಿಸಿದರು.
ಶುದ್ಧ ನೀರು ನೀಡಲು ವಿಫಲವಾಗಿ ನಿಂತಿ ರುವ ಘಟಕಗಳನ್ನು ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಅವರು ಸಹ ಈ ಅವ್ಯವ ಹಾರದಲ್ಲಿ ಭಾಗಿಯಾಗಿದ್ದರೆ ಎಂದು ಸದಸ್ಯರು ಆರೋಪಿಸಿದರಲ್ಲದೆ, ಮುಂದೆ ಘಟಕ ನಿರ್ಮಾಣ ಕಾಮಗಾರಿಯನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳಿಗೆ ನೀಡುವಂತೆ ಆಗ್ರಹಿಸಿದರು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಉಪಾಧ್ಯಕ್ಷ ಪ್ರೇಮ್ ಕುಮಾರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಭು, ತಹಶೀಲ್ದಾರ್ ಮೋಹನ್, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.