ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್..!
ಮೈಸೂರು

ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್..!

November 18, 2018

ಬೆಂಗಳೂರು:  ಅಯ್ಯಪ್ಪನ ಸನ್ನಿಧಾನದ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷ ತೆರಳುತ್ತಿರುವ ಕರ್ನಾಟಕದ ಭಕ್ತರಿಗೆ ಶಾಕಿಂಗ್ ಮೇಲೆ ಶಾಕಿಂಗ್ ನ್ಯೂಸ್ ಕಾದಿದೆ. ಒಂದು ಕಡೆ ಅಯ್ಯಪ್ಪನ ಸನ್ನಿಧಾನದಲ್ಲಿ ಮಹಿಳೆಯ ಪ್ರವೇಶ ವಿಚಾರಕ್ಕೆ ಸಂಬಂ ಧಿಸಿದಂತೆ ಗಲಾಟೆಯ ವಾತಾವರಣ ಇದ್ದರೆ, ಇನ್ನೊಂದೆಡೆ ಹಳೆ ಬಾಕಿ ಎಲ್ಲಾ ಸೇರಿಸಿ ಕೇರಳ ಸರ್ಕಾರ ರಾಜ್ಯದ ವಾಹನಗಳಿಗೆ ವಿಪರೀತ ಸುಂಕ ವಸೂಲಿಗೆ ನಿಂತುಬಿಟ್ಟಿದೆ.

2014ರಿಂದ ಸತತ 3 ವರ್ಷಗಳ ಕಾಲ ಕರ್ನಾಟಕಕ್ಕೆ ವಾಹನ ಸುಂಕ ವಿನಾಯಿತಿ ಇತ್ತು. ಆದರೆ ಈಗ ಏಕಾಏಕಿ ಕೋರ್ಟ್‍ನಿಂದ ಆದೇಶ ಮಾಡಿಕೊಂಡು ಬಂದಿರುವ ಕೇರಳ ಸರ್ಕಾರ ಕರ್ನಾಟಕದ ಅಯ್ಯಪ್ಪ ಭಕ್ತರು ಬರುವ ವಾಹನಗಳಿಗೆ ಹಿಗ್ಗಾಮುಗ್ಗಾ ತೆರಿಗೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಪ್ಪಿ-ತಪ್ಪಿ ಕಳೆದ ಎರಡು ವರ್ಷಗಳ ಹಿಂದೆ ವಾಹನ ಕೇರಳಕ್ಕೆ ಹೋಗಿದ್ರೆ ಆ ವಾಹನಗಳಿಗೆ 1 ಲಕ್ಷದಿಂದ ಒಂದೂವರೆ ಲಕ್ಷದಷ್ಟು ದಂಡ ಹಾಕುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಕೇರಳ ಪೆÇಲೀಸರು ಈಗ ಹಳೆ ಬ್ಯಾಲೆನ್ಸ್ ವಾಹನದ ಸುಂಕವನ್ನು ವಸೂಲಿ ಮಾಡುತ್ತಿದ್ದಾರೆ. ಈಗಾಗಲೇ ಕರ್ನಾಟಕದ ವಾಹನಗಳು ದಂಡ ಕಟ್ಟಲಾರದೆ ಇದ್ದಿದ್ದಕ್ಕೆ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ತೆರಿಗೆ ಭಯಕ್ಕೆ ಟೂರಿಸ್ಟ್ ವಾಹನಗಳು ಕೇರಳಕ್ಕೆ ಎಂಟ್ರಿಯಾಗೋದಕ್ಕೆ ಹಿಂದೇಟು ಹಾಕುತ್ತಿವೆ. ಇನ್ನೊಂದೆಡೆ ಕರ್ನಾಟಕದ ಭಕ್ತರ ಸಂಖ್ಯೆಯೂ ಇಳಿಮುಖಗೊಂಡಿದೆ. ಇತ್ತ ಬಸ್‍ಗಳು ಕೂಡ ಶಬರಿ ಮಲೆಗೆ ಹೋಗೋದಕ್ಕೆ ಹಿಂದೇಟು ಹಾಕುತ್ತಿವೆ ಎಂದು ದಂಡ ಕಟ್ಟಿದ್ದ ರಮೇಶ್ ಹೇಳಿದ್ದಾರೆ.

Translate »