ಚಾ.ನಗರ, ಗುಂಡ್ಲುಪೇಟೆ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯಲ್ಲಿ ಸಂಸದ ಆರ್.ಧ್ರುವನಾರಾಯಣ್
ಚಾಮರಾಜನಗರ

ಚಾ.ನಗರ, ಗುಂಡ್ಲುಪೇಟೆ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯಲ್ಲಿ ಸಂಸದ ಆರ್.ಧ್ರುವನಾರಾಯಣ್

October 28, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿಸಲಾಗಿದೆ ಎಂದು ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತು ವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಜನೆಯ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಮಾತನಾಡಿ, ಗುಂಡ್ಲುಪೇಟೆ, ಚಾಮ ರಾಜನಗರದ 32.8 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯ ನ್ನಾಗಿ ಪರಿವರ್ತಿಸಲಾಗಿದ್ದು, 156 ಕೋಟಿ ಅಂದಾಜು ವೆಚ್ಚದಡಿ ಕಾಮಗಾರಿಗೆ ವಿಸ್ತ್ರøತ ಯೋಜನಾ ವರದಿ ತಯಾರಿಸಲಾ ಗಿದೆ. ಇದಕ್ಕೆ ಅನುಮೋದನೆ ಪಡೆದು ಡಿಸೆಂ ಬರ್ ಒಳಗೆ ಕಾಮಗಾರಿ ಆರಂಭಿಸಲು ಮುಂದಾಗಲಿದ್ದೇವೆ ಎಂದರು.

ಅಭಿವೃದ್ಧಿ ಕಾಮಗಾರಿ ವಿಳಂಬ: ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ಕೇಂದ್ರ ರಸ್ತೆ ನಿಧಿಯ 1008 ಕೋಟಿ ರೂ. ವೆಚ್ಚದಲ್ಲಿ ಬೆಂಗ ಳೂರಿನಿಂದ ಪ್ರಾರಂಭವಾಗಿದೆ. ಜಿಲ್ಲೆಯಲ್ಲೂ ಸುಮಾರು 67 ಕಿ.ಮೀ. ರಸ್ತೆ ಅಭಿವೃದ್ಧಿ ಯಾಗುತ್ತಿದ್ದು, ಕಾಮಗಾರಿ ವಿಳಂಬವಾಗಿ ಸಾಗುತ್ತಿದೆ. ಇನ್ನು 10 ತಿಂಗಳಲ್ಲಿ ಕಾಮ ಗಾರಿ ಪೂರ್ಣಗೊಳಿಸಲು ಗಡವು ನಿಗದಿ ಯಾಗಿದೆ. ಹೀಗಾಗಿ ಇನ್ನು ಮುಂದೆ ಚುರುಕಿ ನಿಂದ ಕಾಮಗಾರಿ ಕೈಗೊಂಡು ಪೂರ್ಣಗೊಳಿ ಸಬೇಕೆಂದು ಧ್ರುವನಾರಾಯಣ್ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣ ಗೊಳ್ಳಲು ಅಗತ್ಯವಿರುವ ಬಾಕಿ ಉಳಿದ ಭೂ ಸ್ವಾಧೀನ ಪ್ರಕ್ರಿಯೆ ಇತರೆ ಅಡಚಣೆಗಳ ನಿವಾರಣೆಗೆ ಜಿಲ್ಲಾಧಿಕಾರಿಗಳು ಮುಂದಾ ಗಬೇಕು. ತಕ್ಷಣ ಸಂಬಂಧಪಟ್ಟ ಇಲಾಖೆ ಗಳ ಅಧಿಕಾರಿಗಳ ಸಭೆ ಕರೆದು ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲಿಸಬೇಕು. ಸಂಬಂ ಧಪಟ್ಟ ಎಲ್ಲ ಜನಪ್ರತಿನಿಧಿಗಳು ಕಾಮ ಗಾರಿ ವೀಕ್ಷಣೆ ಹಾಗೂ ಪರಿಶೀಲಿಸಲು ಇನ್ನು 15 ದಿನಗಳೊಳಗೆ ದಿನಾಂಕ ವೊಂದನ್ನು ನಿಗದಿ ಮಾಡುವಂತೆ ಸಂಸ ದರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎನ್. ಮಹೇಶ್ ಹೆದ್ದಾರಿ ಕಾಮಗಾರಿ ಸಂಬಂಧ ಕಂದಾಯ ಇಲಾಖೆಯಿಂದ ಆಗಬೇಕಿರುವ ಕೆಲಸಗಳಿಗೆ ವಿಳಂಬ ಮಾಡಬಾರದು. ತ್ವರಿತ ವಾಗಿ ಸಂಬಂಧಿಸಿದ ವಿಷಯಗಳಿಗೆ ಪರಿ ಹಾರ ಕಂಡುಕೊಳ್ಳಬೇಕು ಎಂದರು.
ಶಾಸಕ ಆರ್. ನರೇಂದ್ರ ಮಾತನಾಡಿ, ಅಲ್ಲಲ್ಲಿ ಕೆಲಸಗಳನ್ನು ಪೂರ್ಣಗೊಳಿಸು ವುದು, ಕೆಲವೆಡೆ ಹಾಗೆಯೇ ಬಿಟ್ಟು ಬಿಡು ವುದು, ಕಾಮಗಾರಿ ಕೈಗೊಳ್ಳುವಾಗ ನಡೆಯು ತ್ತಿದೆ. ಹೀಗಾದರೆ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಕಾಮಗಾರಿ ಏಕ ರೂಪತೆಯಿಂದ ಇರಬೇಕಾದರೆ ಇರುವ ಅಡ ಚಣೆಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.

ಜಿಪಂ ಉಪಾಧ್ಯಕ್ಷ ಯೋಗೀಶ್ ಮಾತ ನಾಡಿ, ಯಳಂದೂರು, ಮದ್ದೂರು, ಕಂದ ಹಳ್ಳಿ ಭಾಗಗಳಲ್ಲಿ ರಸ್ತೆ ಬದಿ ಮರಗಳನ್ನು ತೆರವುಗೊಳಿಸಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಂತಹ ಕಡೆ ಮಾತ್ರ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದೆ. ಮರ ತೆಗೆದ ಬಳಿಕ ಇನ್ನಷ್ಟು ಹೆಚ್ಚು ಕೆಲಸ ಮಾಡಬೇಕಾಗು ತ್ತದೆ. ಮಣ್ಣನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸುರಿಯಲಾಗುತ್ತಿದೆ. ಇದಕ್ಕೆ ಸೂಕ್ತ ಸಮ ಜಾಯಿಷಿಯನ್ನು ಅಧಿಕಾರಿಗಳು ನೀಡುತ್ತಿಲ್ಲ ವೆಂದು ಅಸಮಾಧಾನ ವ್ಯಕ್ತಪಡಿಸಿದರು.ಸಂಸದ ಆರ್. ಧ್ರುವನಾರಾಯಣ್ ಮಾತ ನಾಡಿ, ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಲೋಪ ಸಹಿಸುವುದಿಲ್ಲ. ಗುಣಮಟ್ಟದ ಕಾಮ ಗಾರಿ ನಡೆಯಲೇಬೇಕು ಎಂದರು. ಶಾಸಕ ಸಿ.ಎಸ್. ನಿರಂಜನಕುಮಾರ್ ಮಾತ ನಾಡಿ, ಗುಂಡ್ಲುಪೇಟೆ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣವಾಗಿದೆ. ಇನ್ನು ಕೆಲವು ಕಡೆ ಸಮರ್ಪಕವಾಗಿ ನಿರ್ವಹಿಸಬೇ ಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಎನ್. ಮಹೇಶ್ ಮಾತನಾಡಿ, ಕೊಳ್ಳೇಗಾಲ ಪಟ್ಟಣದಲ್ಲೂ ಒಳಚರಂಡಿ ಕಾಮಗಾರಿ ವೈಜ್ಞಾನಿಕವಾಗಿ ಮಾಡಲಾ ಗಿಲ್ಲ. ಇದರಿಂದ 21 ಕೋಟಿ ರೂ. ವೆಚ್ಚ ದಲ್ಲಿ ಕೈಗೆತ್ತಿಕೊಳ್ಳುತ್ತಿರುವ ನಗರೋತ್ಥಾನ ಕಾಮಗಾರಿ ಸರಿಯಾಗಿ ಮಾಡಲು ಸಾಧ್ಯ ವಾಗದಿರಬಹುದು. ಹೀಗಾಗಿ ಸಂಪೂರ್ಣ ವಾಗಿ ಹಾಗೂ ಸಮರ್ಪಕವಾಗಿ ಒಳಚರಂಡಿ ಕಾಮಗಾರಿ ಕೈಗೊಳ್ಳಲೇಬೇಕು ಎಂದರು.
ಡಿಸಿ ಬಿ.ಬಿ.ಕಾವೇರಿ ಪ್ರತಿಕ್ರಿಯಿಸಿ ಈ ಸಂಬಂಧ ತಾವೂ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಶಾಸಕ ಆರ್.ನರೇಂದ್ರ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಬೈಲೂರಿನಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಯಡಿ ನಿರ್ಮಿಸಲಾಗಿರುವ ಶಾಲಾ ಕೊಠ ಡಿಗಳ ಕಾಮಗಾರಿ ಕಳಪೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳ ಉತ್ತರಿಸಿ ಆಲೂರು, ಬೈಲೂರಿನಲ್ಲಿ ಕಾಮ ಗಾರಿ ನಿರ್ವಹಣೆ ಸರಿಯಿಲ್ಲ ಎಂಬ ಬಗ್ಗೆ ವರದಿ ನೀಡಲಾಗಿದೆ ಎಂದರÀು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಗತಿ ಪರಿಶೀಲಿಸಿದ ಧ್ರುವನಾರಾ ಯಣ್, ಪ್ರತಿ ಗ್ರಾಪಂ ಮುಂದಿನ ಸಭೆಯ ವೇಳೆಗೆ ಕನಿಷ್ಠ ಒಂದು ಕೋಟಿ ರೂ. ವೆಚ್ಚ ದಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡಬೇ ಕೆಂಬ ಗಡುವನ್ನು ಎಲ್ಲ ತಾಪಂ ಇಓಗಳಿಗೆ ನೀಡಿದರು. ಜಿಪಂ ಸಿಇಓ ಡಾ.ಕೆ. ಹರೀಶ್ ಕುಮಾರ್ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಪ್ರಗತಿ ಹೆಚ್ಚಳಕ್ಕೆ ಹಲವು ಇಲಾಖೆಗಳು ಇನ್ನಷ್ಟು ವೇಗವಾಗಿ ಕೆಲಸ ಮಾಡಬೇಕು. ಪ್ರಗತಿಯಲ್ಲಿ ಹಿಂದೆ ಇರುವ ತಾಲೂಕುಗಳು ಯೋಜನೆ ಅನುಷ್ಠಾನಕ್ಕೆ ಹೆಚ್ಚು ಗಮನ ನೀಡಬೇಕು. ಯೋಜನೆ ಜಾಗೃತಿಗೆ ವಿಶೇಷವಾಗಿ ಕ್ರಮ ವಹಿಸಲಾಗುತ್ತದೆ ಎಂದರು. ಇದೇ ವೇಳೆ ವಿವಿಧ ಇಲಾಖೆಗಳ ಪ್ರಗ ತಿಯನ್ನು ಸಭೆಯಲ್ಲಿ ಪರಿಶೀಲಿಸಲಾ ಯಿತು. ಜಿಪಂ ಅಧ್ಯಕ್ಷೆ ಶಿವಮ್ಮ, ಸಮಿ ತಿಯ ನಾಮ ನಿರ್ದೇಶಿತ ಸದಸ್ಯರು ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

Translate »