ರಾಜ್ಯೋತ್ಸವಕ್ಕೆ ಗೈರಾದರೆ ಶಿಸ್ತು ಕ್ರಮ
ಹಾಸನ

ರಾಜ್ಯೋತ್ಸವಕ್ಕೆ ಗೈರಾದರೆ ಶಿಸ್ತು ಕ್ರಮ

October 28, 2018

ಹೊಳೆನರಸೀಪುರ: ಈ ಬಾರಿಯ 53ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅಧ್ಯಕ್ಷತೆ ಯಲ್ಲಿ ನಡೆದ ತಾಲೂಕು ಮಟ್ಟದ ಅಧಿ ಕಾರಿಗಳ ಸಭೆಯಲ್ಲಿ ತೀರ್ಮಾನಿಸ ಲಾಗಿದೆ ಎಂದು ತಹಶೀಲ್ದಾರ್ ವೈ. ಎಂ.ರೇಣುಕುಮಾರ್ ಹೇಳಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚ ರಣಾ ಸಮಿತಿ ತಾಲೂಕು ಕಚೇರಿ ಸಭಾಂಗಣ ದಲ್ಲಿ 53ನೇ ಕನ್ನಡ ರಾಜ್ಯೋತ್ಸವ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಸೂಚನೆಯಂತೆ ನ.1ರಂದು ಸರ್ಕಾರದಿಂದ ಜರುಗುವ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮಕ್ಕೆ ಗೈರಾಗುವ ಅಧಿಕಾರಿಗಳಿಗೆ ಯಾವುದೇ ಮುಲಾಜು ಇಲ್ಲದೆ ಶಿಸ್ತು ಕ್ರಮ ಕೈಗೊಂಡು ಅವರ ವಿರುದ್ಧ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಎಚ್ಚರಿಸಿದರು.

ಈ ಬಾರಿಯ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸ ಲಾಗಿದೆ. ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿ, ಉಸ್ತುವಾರಿ ಸಚಿವರಾಗಿದ್ದು, ನಾವು ನಡೆ ಸುವ ಕಾರ್ಯಕ್ರಮಗಳು ಮಾದರಿಯಾಗಿರ ಬೇಕು. ಸಾಂಸ್ಕøತಿಕ ಚಟುವಟಿಕೆಗಳು ಸಹ ಕನ್ನಡದಲ್ಲಿಯೇ ನಡೆಯಬೇಕು. ಪ್ರಸ್ತುತ ಸಾಲಿನಲ್ಲಿ ಮಳೆ-ಬೆಳೆ ಸಮೃದ್ಧವಾಗಿದ್ದು, ಕೆರೆಕಟ್ಟೆಗಳು, ನದಿಗಳು ತುಂಬಿಹರಿದಿವೆ. ಕೃಷಿ ಚಟುವಟಿಕೆಗಳು ಸಹ ಉತ್ತಮವಾಗಿದೆ. ಯಾವುದೇ ತೊಂದರೆಗಳಿಲ್ಲದೆ ರಾಜ್ಯೋ ತ್ಸವ ಆಚರಿಸಲು ಸದಾವಕಾಶ ದೊರಕಿದೆ. ಆದ್ದರಿಂದ ಪ್ರತಿಯೊಬ್ಬರೂ ನ.1ರಂದು ತಮ್ಮ ಕಚೇರಿಗಳಲ್ಲಿ ಕನ್ನಡ ಬಾವುಟ ಹಾರಿಸಿ ಬಳಿಕ ತಾಲೂಕು ಆಡಳಿತ ನಡೆ ಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಿದರು.

ಅಂದು ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಚೆನ್ನಾಂಬಿಕಾ ವೃತ್ತದಿಂದ ತೆರೆದ ವಾಹನ ದಲ್ಲಿ ಕನ್ನಡಾಂಬೆಯ ಭಾವಚಿತ್ರದೊಂದಿಗೆ ಮೆರವಣಿಗೆ ಹೊರಡಲಿದ್ದು, ಮೆರವಣಿ ಗೆಯಲ್ಲಿ ನಾಡು-ನುಡಿಗೆ ಸಂಬಂಧಿಸಿದ ಸ್ತಬ್ಧ ಚಿತ್ರಗಳೊಂದಿಗೆ ವಿದ್ಯಾರ್ಥಿಗಳು ಪಾಲ್ಗೊ ಳ್ಳುವರು. ಕನ್ನಡ ನಾಡು-ನುಡಿ ಬಗ್ಗೆ ಪ್ರೊ. ಸುಧಾಕರ್ ಉಪನ್ಯಾಸ ನೀಡುವರು. ವೇದಿಕೆ ಕಾರ್ಯಕ್ರಮದ ನಂತರ ಪಟ್ಟಣದ ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿಕೆ ಜರುಗಲಿದೆ ಎಂದು ಮಾಹಿತಿ ನೀಡಿದ ತಹಶೀಲ್ದಾರ್, ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿ ಗಳೊಂದಿಗೆ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸುವಂತೆ ಸಿಡಿಪಿಓಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಐವರು ಸಾಧಕರನ್ನು ಸನ್ಮಾನಿಸಲು ನಿರ್ಧರಿಸಿದ್ದು, ಅ.30ರೊಳಗೆ ಸಾಧಕರನ್ನು ಆಯ್ಕೆ ಮಾಡಲು ತಂಡ ವೊಂದನ್ನು ರಚಿಸಲಾಗಿದೆ. ಹಲವು ಇಲಾಖಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ತಹಶೀ ಲ್ದಾರ್ ತಾಕೀತು ಮಾಡಿದರು.
ಉತ್ತಮ ಸ್ತಬ್ಧ ಚಿತ್ರಕ್ಕೆ ಕರವೇ ತಾಲೂಕು ಘಟಕದಿಂದ ಗೌರವಾರ್ಥ ಬಹುಮಾನ ನೀಡುವುದಾಗಿ ಅಧ್ಯಕ್ಷ ಒಹಿಲೇಶ್ ತಿಳಿಸಿದರು. ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಅತಿಥಿ ಗಣ್ಯರನ್ನು ಹಾರ ಹಾಕುವ ಮೂಲಕ ಅಭಿನಂದಿಸುವ ಬದಲಿಗೆ ಸಂಪೂರ್ಣ ವಾಗಿ ಕನ್ನಡ ಪುಸ್ತಕಗಳನ್ನು ಕೊಡುಗೆ ಯಾಗಿ ನೀಡುವ ಮೂಲಕ ಕನ್ನಡ ಪುಸ್ತಕ ಗಳ ಪ್ರಚಾರ ಮತ್ತು ಓದುವ ಹವ್ಯಾಸ ಬೆಳವಣಿಗೆಗೆ ಪ್ರೋತ್ಸಾಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಓ ಕೆ.ಯೋಗೇಶ್, ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ ಕುಮಾರಯ್ಯ, ಸ್ವಾಮಿ ವಿವೇಕಾನಂದ ವೇದಿಕೆ ಅಧ್ಯಕ್ಷ ರೆಹಮಾನ್, ಮಾಜಿ ತಾಲೂಕು ಕಸಾಪ ಅಧ್ಯಕ್ಷ ಹೆಚ್.ಎಸ್.ಪುಟ್ಟಸೋಮಪ್ಪ, ಬಿಇಓ ಲೋಕೇಶ್ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಕೆ.ಸಿ.ಪುಷ್ಪ ಲತಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ, ಎಸ್‍ಐ ಕುಮಾರ, ದೈಹಿಕ ಶಿಕ್ಷಕರಾದ ಕೆಂಪೇ ಗೌಡ, ಕೃಷ್ಣ, ಪ್ರೇಮಮಂಜುನಾಥ, ಮಂಗಳ ಗೌರಿ, ಕರವೇ ಅಧ್ಯಕ್ಷ ಒಹಿಲೇಶ್, ಮತ್ತಿತರರಿದ್ದರು.

Translate »