ಗಾಂಜಾ ಗಿಡ ವಶ: ಆರೋಪಿ ಬಂಧನ
ಚಾಮರಾಜನಗರ

ಗಾಂಜಾ ಗಿಡ ವಶ: ಆರೋಪಿ ಬಂಧನ

October 28, 2018

ಹನೂರು:  ಮನೆಯ ಹಿತ್ತಲಿನಲ್ಲಿ ಅಕ್ರಮ ವಾಗಿ ಬೆಳೆದಿದ್ದ ಗಾಂಜಾ ಗಿಡ ವಶಪಡಿಸಿಕೊಂಡು ಆರೋಪಿ ಬಂಧಿಸುವಲ್ಲಿ ಹನೂರು ಪೊಲೀ ಸರು ಯಶಸ್ವಿಯಾಗಿದ್ದಾರೆ.ತಮಿಳುನಾಡು ಗಡಿಗ್ರಾಮ ಅರ್ಧನಾರಿಪುರ ಗ್ರಾಮದ ನಿವಾಸಿ ರಂಗಸ್ವಾಮಿ ಬಂಧಿತ ಆರೋಪಿ.

ಘಟನೆ ವಿವರ: ರಂಗಸ್ವಾಮಿ ಮನೆಯ ಹಿತ್ತಲಿನಲ್ಲಿ ಸುತ್ತಲೂ ಬೇಲಿ ಕಟ್ಟಿ ಅದರೊಳಗೆ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹನೂರು ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಮೋಹಿತ್ ಸಹದೇವ್ ನೇತೃತ್ವದ ತಂಡ ದಾಳಿ ಮಾಡಿ 5 ಕೆಜಿ 700 ಗ್ರಾಂ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಮುಖ್ಯ ಪೇದೆಗಳಾದ ಮಲ್ಲಿಕಾರ್ಜುನ, ಹೂವಯ್ಯ, ಸಿದ್ದೇಶ, ಪೇದೆಗಳಾದ ರಾಜು, ಪ್ರದೀಪ, ವಿಶ್ವನಾಥ, ಬಿಳಿಗೌಡ, ಚಾಲಕ ಶಂಕರ್ ಭಾಗವಹಿಸಿದ್ದರು.

Translate »