ಮದ್ಯ ಮಾರಾಟ ನಿಷೇಧ
ಚಾಮರಾಜನಗರ

ಮದ್ಯ ಮಾರಾಟ ನಿಷೇಧ

October 28, 2018

ಚಾಮರಾಜನಗರ:  ಕೊಳ್ಳೇಗಾಲ ನಗರಸಭೆ ವಾರ್ಡ್ ನಂ.9 ಹಾಗೂ ಗುಂಡ್ಲುಪೇಟೆ ತಾಪಂ ತೆರಕಣಾಂಬಿ ಕ್ಷೇತ್ರಕ್ಕೆ ಅ.28ರಂದು ನಡೆಯುವ ಚುನಾವಣೆ ಹಾಗೂ ಅ.31ರಂದು ನಡೆಯುವ ಮತ ಎಣಿಕೆ ಹಿನ್ನೆಲೆಯಲ್ಲಿ ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ. ಕೊಳ್ಳೇಗಾಲ ನಗರಸಭೆ ವಾರ್ಡ್ ನಂ.9ರ ವ್ಯಾಪ್ತಿ ಹಾಗೂ ಇದರ ಗಡಿಯಿಂದ 3 ಕಿ.ಮೀ. ಅಂತರದಲ್ಲಿ ಹಾಗೂ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಇದರ ಗಡಿ ಯಿಂದ 3 ಕಿ.ಮೀ. ಅಂತರದಲ್ಲಿ ಬರುವ ಮದ್ಯದಂಗಡಿಗಳನ್ನು ಅ.26ರ ಮಧÀ್ಯರಾತ್ರಿ ಯಿಂದ 28ರ ಮಧÀ್ಯರಾತ್ರಿವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Translate »