ಕುಡಿಯಲು ಹಣ ನೀಡದ ತಂದೆ ಹತ್ಯೆಗೈದ ಮಗ
ಚಾಮರಾಜನಗರ

ಕುಡಿಯಲು ಹಣ ನೀಡದ ತಂದೆ ಹತ್ಯೆಗೈದ ಮಗ

October 28, 2018

ಚಾಮರಾಜನಗರ: ಕುಡಿಯಲು ಹಣ ನೀಡದಿದ್ದಕ್ಕೆ ಕುಪಿತಗೊಂಡ ಮಗ ತನ್ನ ತಂದೆಯನ್ನೇ ಹತ್ಯೆ ಗೈದಿರುವ ಘಟನೆ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಗ್ರಾಮದ ನಿವಾಸಿ ಮಹದೇವನಾಯ್ಕ(60) ಹತ್ಯೆಗೊಳಗಾದವರು. ಅವರ ಮಗ ಸ್ವಾಮಿ ಹತ್ಯೆ ಆರೋಪಿ.

ಘಟನೆ ವಿವರ: ಸ್ವಾಮಿ ಕುಡಿಯಲು ಹಣ ನೀಡುವಂತೆ ತಂದೆಯನ್ನು ಕೇಳಿದ್ದಾನೆ. ಈ ವೇಳೆ ಮಹದೇವನಾಯ್ಕ ಹಣ ನೀಡಲು ನಿರಾ ಕರಿಸಿದರು ಎನ್ನಲಾಗಿದೆ. ಇದರಿಂದ ಕುಪಿತ ಗೊಂಡ ಸ್ವಾಮಿ ದೊಣ್ಣೆಯಿಂದ ತನ್ನ ತಂದೆ ಮಹದೇವನಾಯ್ಕ ಅವರ ತಲೆಗೆ ಹೊಡೆದಿದ್ದಾನೆ. ಪರಿಣಾಮ ತೀವ್ರ ಗಾಯಗೊಂಡ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಸ್ವಾಮಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »