ಇನ್ನರ್ ವ್ಹೀಲ್ ಕ್ಲಬ್‍ನಿಂದ ಗ್ರಾಮೀಣ ಶಿಕ್ಷಕರಿಗೆ ಸನ್ಮಾನ
ಮೈಸೂರು

ಇನ್ನರ್ ವ್ಹೀಲ್ ಕ್ಲಬ್‍ನಿಂದ ಗ್ರಾಮೀಣ ಶಿಕ್ಷಕರಿಗೆ ಸನ್ಮಾನ

November 12, 2018

ಮೈಸೂರು : ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 15ಕ್ಕೂ ಹೆಚ್ಚು ಶಿಕ್ಷಕರನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆ ಸನ್ಮಾನಿಸಿತು. ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ಶನಿವಾರ ಸಂಜೆ ನಡೆದ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆಯ ಸಮಾಜ ಸೇವಾ ಕಾರ್ಯಕ್ರಮ ಗಳ ಜಿಲ್ಲಾಧ್ಯಕ್ಷರಿಗೆ ವರದಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪರಿಣಾಮಕಾರಿಯಾಗಿ ಭೋದಿಸುವ ಶಿಕ್ಷಕ ಸಮುದಾಯವನ್ನು ಗೌರವಿಸುವ ಪರಂಪರೆಗೆ ನಾಂದಿ ಹಾಡಿತು.

ಸನ್ಮಾನಿತರು: ಕಾಡನಹಳ್ಳಿ ಶಾಲೆಯ ಡಿ.ಸಿ.ಪುಷ್ಪಲತಾ, ಸೋಲಿಗರ ಕಾಲೋನಿ ಶಾಲೆಯ ಎಂ.ರಮೇಶ್, ದೊಡ್ಡಹುಂಡಿ ಶಾಲೆಯ ಸರಳಾದೇವಿ, ಕೀಳನಪುರ ಶಾಲೆಯ ವಿಜಯ್, ಮುಳ್ಳೂರು ಶಾಲೆಯ ನಾಗಮಲ್ಲಿಕ, ಗೋಪಾಲಪುರ ಶಾಲೆಯ ಸುಜಾತ, ಗುಂಗ್ರಾಲ್ ಛತ್ರ ಶಾಲೆಯ ಪಿ.ಶಾಂತರಾಜು, ಹೂಟಗಳ್ಳಿ ಶಾಲೆಯ ಎಸ್.ಸೋಮಶೇಖರ್, ಮಹದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ರವಿ, ದೀಪ ಅನುದಾನಿತ ಶಾಲೆಯ ಬಾಬು, ಹೆಚ್.ಡಿ.ಕೋಟೆ ತಾಲೂಕಿನ ಚಾಮಲಾಪುರ ಶಾಲೆಯ ದೊರೆಸ್ವಾಮಿ, ಅಣ್ಣೂರು ಶಾಲೆಯ ಅಂತೋಣಮ್ಮ, ಬೆಟ್ಟದಬೀಡು ಶಾಲೆಯ ಹೆಚ್.ವಿ.ವೆಂಕಟೇಶ್, ಡಿ.ಸಾಲುಂಡಿ ಶಾಲೆಯ ಡಿ.ಅನಿತಾ, ಪುಟ್ಟಸ್ವಾಮಿ ಸ್ಮಾರಕ ಶಾಲೆಯ ವೇದಾರಾಧ್ಯ, ಮುಳ್ಳೂರಿನ ವಿನಾಯಕ ಜ್ಞಾನ ವಿದ್ಯಾಶಾಲೆಯ ಕೆ.ಡಿ.ದಿವಾಕರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್‍ನ 318 ಜಿಲ್ಲೆಯ ಅಧ್ಯಕ್ಷೆ ಡಾ. ಸಾರಿಕಾ ಪ್ರಸಾದ್, ಜಯಶ್ರೀ ಅರಸ್, ಉಪಾಧ್ಯಕ್ಷೆ ಅನೂರಾಧ ನಂದಕುಮಾರ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಅಧ್ಯಕ್ಷೆ ಅನಿತಾ ಸುರೇಶ್, ಕಾರ್ಯದರ್ಶಿ ಸುಮಾ ಮಹೇಶ್, ಮಾಜಿ ಅಧ್ಯಕ್ಷೆ ಚಂದ್ರಿಕಾ ಸುಧೀರ್, ಸೌಜನ್ಯ ಅತ್ತಾವರ್ ಹಾಗೂ ಕ್ಲಬ್ ಸದಸ್ಯರಿದ್ದರು.

Translate »