ಮೈಸೂರು: ಸಮಾಜಕ್ಕೆ ಒಳಿತು ಮಾಡಲಾಗದಿದ್ದರೂ ಕೆಡುಕು ಮಾಡಬಾರದು. ಈ ಪರಿಜ್ಞಾನವಿಲ್ಲದವ ರಿಂದ ಒಂದಿಲ್ಲೊಂದು ದುಷ್ಕøತ್ಯಗಳು ನಡೆ ಯುತ್ತಿರುತ್ತವೆ. ಮೈಸೂರಿನಲ್ಲಿ ರಸ್ತೆ ಮಧ್ಯೆ ಮರದ ತುಂಡುಗಳನಿಟ್ಟು ಬೆಂಕಿ ಹೊತ್ತಿಸಿರು ವುದು ಇದಕ್ಕೊಂದು ನಿದರ್ಶನ. 45ನೇ ವಾರ್ಡ್ ವ್ಯಾಪ್ತಿಯ ಬಸವೇಶ್ವರನಗರ, ಅರಳಿಕಟ್ಟೆ ಬಲಮುರಿ ಗಣಪತಿ ರಸ್ತೆಯಲ್ಲಿ ಯಾರೋ ಅನಾಗರಿಕರು ತೆಂಗಿನ ಮರದ ಮೂರು ತುಂಡುಗಳನ್ನು ಒಲೆ ಮಾದರಿಯಲ್ಲಿ ಜೋಡಿಸಿ, ಬೆಂಕಿ ಹೊತ್ತಿಸಿದ್ದಾರೆ. ಇದಾಗಿ ಮೂರ್ನಾಲ್ಕು ದಿನಗಳಾಗಿದ್ದು, ಅರೆಬರೆ ಬೆಂದಿರುವ ಅವು ಹಾಗೆಯೇ ನಿಂತಿವೆ. ಯಾವ ಮಹಾನುಭಾವರು, ಯಾವ ಉದ್ದೇಶಕ್ಕಾಗಿ ಹೀಗೆ ರಸ್ತೆ ಮಧ್ಯದಲ್ಲೇ ಬೆಂಕಿ ಹೊತ್ತಿಸಿದ್ದಾ ರೆಂದು ಗೊತ್ತಿಲ್ಲ. ಆದರೆ ಸುಟ್ಟು ಕರಕಲಾಗಿ ನಿಂತಿರುವ ಮರದ ತುಂಡುಗಳು, ನಾಗರಿಕ ಸಮಾಜವನ್ನು ಮೂದಲಿಸುತ್ತಿವೆ. ಬೆಂಕಿ ಹಾಕಿರುವ ಜಾಗದಲ್ಲಿ ಡಾಂಬರು ಕಿತ್ತು ಬರುವಂತಿದ್ದು, ದಿನ ಕಳೆದಂತೆ ಅಲ್ಲೊಂದು ಗುಂಡಿ ನಿರ್ಮಾಣವಾಗಿ ವಾಹನ ಸವಾರರಿಗೆ ಸಂಚಕಾರವಾಗುವುದಂತೂ ಖಚಿತ. ಅರೆ ಸುಟ್ಟ ಮರದ ತುಂಡುಗಳನ್ನು ಬೆಂಕಿ ಹಚ್ಚಿದ ಅಜ್ಞಾನಿಗಳಾಗಲೀ, ಇದನ್ನು ಖಂಡಿಸದ ಡಿಸಿಪ್ಲಿನ್ ನಿವಾಸಿಗಳಾಗಲೀ, ಸ್ವಚ್ಛತೆ ಬಗ್ಗೆ ಸಂದೇಶ ಸಾರುವ ನಗರ ಪಾಲಿಕೆಯಾಗಲೀ ತೆರವು ಮಾಡಿಲ್ಲ. ಎಚ್ಚರಿಸಿದ ನಂತರವಾದರೂ ಸಾಮಾಜಿಕ ಜವಾಬ್ದಾರಿ ಜಾಗೃತವಾಗುವುದೇ? ಎಂಬುದರ ಪರೀಕ್ಷೆಗಾಗಿ ನಾವೂ ಆ ಕೆಲಸ ಮಾಡಿಲ್ಲ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ರಸ್ತೆ ನಿರ್ಮಾಣವಾಗಿರುವುದು ನಮ್ಮ ತೆರಿಗೆ ಹಣದಿಂದಲೇ. ಹೀಗೆ ಪರಿಜ್ಞಾನವಿಲ್ಲದೆ ಹಾನಿ ಮಾಡಿದರೆ ನಷ್ಟವಾಗುವುದು ನಮಗೇ. ತೊಂದರೆ ಅನುಭವಿಸುವವರೂ ನಾವೇ. ಆದ್ದರಿಂದ ಯಾವುದೇ ಕಾರಣಕ್ಕೂ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಬಾರದು. ಹೀಗೆ ಮಾಡುವವರನ್ನು ಪತ್ತೆ ಹಚ್ಚಿ, ತಕ್ಕ ಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ನಗರ ಪಾಲಿಕೆ ಹಾಗೂ ಪೊಲೀಸರು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.