ಮೈಸೂರು: ದೀಪಾವಳಿ ಹಬ್ಬದ ರಜೆಯ ಹಿನ್ನಲೆಯಲ್ಲಿ ಶಾಲಾ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು, 12,476 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯ ಕನಕಗಿರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, 1,900 ರೂ. ಮೌಲ್ಯದ ಒಂದು ಸೈಡ್ ಡ್ರಮ್, ಎರಡು ಬ್ಯೂಗಲ್, ಬೇಸ್ ಡ್ರಮ್, ಎರಡು ಡ್ರಮ್ ಸ್ಟಿಕ್, ಐದು ಊಟದ ತಟ್ಟೆ, 25 ಹಾಲು ಕುಡಿಯುವ ಲೋಟಗಳು, ಒಂದು ಹಾಲು ಹಾಕುವ ಸೌಟ್, 2 ಸೈಡ್ ಡ್ರಮ್ ಬೆಲ್ಟï , ವಾಲಿಬಾಲ್ ನೆಟ್, 2 ಕೇರಂ ಬೋರ್ಡ್, 1 ವಲ್ಡರ್ï ಮ್ಯಾಪ್ ಫಿಸಿಕಲ್, ರೋಲ್ ಅಪ್ ಇಂಡಿಯಾ ಔಟ್ ಲೈನ್ ಮ್ಯಾಪ್, 1 ರೋಲ್ ಅಪ್ ಇಂಡಿಯಾ ಔಟ್ ಲೈನ್ ಮ್ಯಾಪ್, ಮಿಯಾಸಿಸ್ ಚಾರ್ಟ್ (ಹ್ಯೂಮನ್), 1 ಪ್ರಾಣಿ ಜೀವಕೋಶದ ಚಾರ್ಟ್, ಬಯೋ ವಿಷುವಲ್ ರೆಗ್ಸಿನ್ ಚಾರ್ಟ್‍ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ನ. 6ರಿಂದ 8 ರವರೆಗೆ ಶಾಲೆಗೆ ದೀಪಾವಳಿ ಹಬ್ಬದ ಪ್ರಯುಕ್ತ ರಜೆ ನೀಡಲಾಗಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಳ್ಳರು, ಈ ಕೃತ್ಯ ಎಸಗಿದ್ದಾರೆ. ನ.9ರಂದು ಶಾಲೆಗೆ ಬಂದು ನೋಡಿದಾಗ ಕೊಠಡಿಯ ಬಾಗಿಲು ಒಡೆದಿದ್ದು, ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ದೂರು ನೀಡಿದ್ದಾರೆ. ಈ ಸಂಬಂಧ ವಿದ್ಯಾರಣ್ಯ ಪುರಂ ಪೆÇಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.