ಸಂತ್ರಸ್ತರಿಗೆ ಮನೆ ಕಟ್ಟುವ ಮೊದಲು ಮನಸ್ಸು ಕಟ್ಟಬೇಕು
ಕೊಡಗು

ಸಂತ್ರಸ್ತರಿಗೆ ಮನೆ ಕಟ್ಟುವ ಮೊದಲು ಮನಸ್ಸು ಕಟ್ಟಬೇಕು

November 12, 2018

ಮಡಿಕೇರಿ:  ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆ, ಕಟ್ಟಡ ನಿರ್ಮಿಸುವ ಮೊದಲು ಸಂತ್ರಸ್ತರ ಮನಸ್ಸು ಮತ್ತು ಬದುಕು ಕಟ್ಟುವುದಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ, ಹೆಸರಾಂತ ಮಹಿಳಾ ಸಾಹಿತಿ ಡಾ. ವೈದೇಹಿ ಸಲಹೆ ನೀಡಿದ್ದಾರೆ.

ಕಾಲೂರು ಗ್ರಾಮದಲ್ಲಿ ಪ್ರಾಜೆಕ್ಟ್ ಕೂರ್ಗ್ ಮತ್ತು ಭಾರತೀಯ ವಿದ್ಯಾಭವನ ಸಹ ಯೋಗದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತ ಮಹಿಳೆಯರು ಯಶಸ್ವಿ ಕೌಶಲಾಭಿವೃದ್ದಿ ಯೋಜನೆಯಡಿ ತಯಾರಿಸಿದ ವಿವಿಧ ಮಸಾಲೆ ಪದಾರ್ಥಗಳ ಕೂರ್ಗ್ ಫ್ಲೇ ವರ್ಸ್ ಉತ್ಪನ್ನಗಳನ್ನು ಲೋಕಾರ್ಪ ಣೆಗೊಳಿಸಿ ಮಾತನಾಡಿದ ಡಾ. ವೈದೇಹಿ, ಪ್ರಕೃತಿ ವಿಕೋಪ ಎಂಬುದು ದಿಢೀರನೆ ಎದುರಾಗುವ ಯುದ್ದದಂತೆ. ಆದರೆ, ಕ್ಷಾತ್ರ ತೇಜಸ್ಸಿನ ಕೊಡಗಿನ ಜನರು ಇಂಥ ಯುದ್ಧವನ್ನು ಆತ್ಮಸ್ಥೈರ್ಯದಿಂದ, ಛಲದಿಂದ ಹೊಸ ಹುಮ್ಮಸ್ಸಿನಿಂದ ಎದುರಿಸಿ ಗೆಲುವು ಸಾಧಿಸಿದ ರೀತಿ ಮಾತ್ರ ಎಲ್ಲರಿಗೂ ಮಾದರಿ ಎಂದು ಡಾ.ವೈದೇಹಿ ಶ್ಲಾಘಿಸಿದರು.

ಚೇತನವೇ ಉಡುಗಿ ಹೋಗುವ ಮಹಾ ಸಂಕಟ ಕಾಲದಲ್ಲಿ ಕಾಲೂರು ಗ್ರಾಮಸ್ಥರು ಒಗ್ಗಟ್ಟಿನಿಂದ ಎದುರಾದ ದುರಂತವನ್ನು ಎದುರಿಸಿ ಇದೀಗ ಮಸಾಲೆ ಪದಾರ್ಥ ಗಳ ಉತ್ಪನ್ನಗಳನ್ನು ಮಾರಾಟ ಮಾಡಿ ಹೊಸ ವೃತ್ತಿಜೀವನ ಕಟ್ಟಿಕೊಳ್ಳಲು ಮುಂದಾಗಿದ್ದು ಹೆಮ್ಮೆಯ ವಿಚಾರ ಎಂದರು.

ಮಹಾಸಂಕಟ ಕಾಲದಲ್ಲಿಯೇ ಮನು ಷ್ಯನ ನಿಜವಾದ ಸತ್ವ ಪರೀಕ್ಷೆಯಿರುತ್ತದೆ ಎಂದು ಅಭಿಪ್ರಾಯಪಟ್ಟ ಡಾ.ವೈದೇಹಿ, ಹೊಸ ಉತ್ಸಾಹದೊಂದಿಗೆ ಕಳೆದುಹೋದ ಬದುಕಿನ ಕ್ರಮವನ್ನು ಮತ್ತೆ ಹೊಸದಾಗಿ ರೂಪಿಸುವ ಸತ್ವ ಪರೀಕ್ಷೆಯಲ್ಲಿ ಕೊಡಗಿನ ಸಂತ್ರಸ್ತರು ಗೆಲುವು ಸಾಧಿಸಿದ್ದಾರೆ. ಇದ ರಿಂದಾಗಿ ಕೊಡಗಿನ ಜನತೆಯ ಸ್ವಾಭಿ ಮಾನ ಮತ್ತು ಸ್ವಾವಲಂಬನೆಯ ಬದುಕು ಏನೆಂಬುದು ಸ್ಪಷ್ಟವಾಗಿ ಎಲ್ಲರಿಗೂ ತಿಳಿ ಯುವಂತಾಗಿದೆ ಎಂದು ಹೆಮ್ಮೆ ವ್ಯಕ್ತ ಪಡಿಸಿದರು. ಜನರಿಗೆ ಬೇಕಾಗಿರುವುದನ್ನು ನೀಡುವುದಕ್ಕಿಂತ ಹಣ ಸಂಪಾದನೆಯ ಮಾರ್ಗೋಪಾಯಗಳನ್ನು ಕಲಿಸಿ ಕೊಡು ವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಲೂರು ಗ್ರಾಮದ ಮಹಿಳೆಯರಿಗೆ ಇಂತಹ ಮಾರ್ಗವನ್ನು ತೋರಿಸಿದ ಪ್ರಾಜೆಕ್ಟ್ ಕೂರ್ಗ್, ಭಾರತೀಯ ವಿದ್ಯಾಭವನ ಅತ್ಯುತ್ತಮ ಕಾರ್ಯಯೋಜನೆ ಜಾರಿಗೊಳಿಸಿದೆ ಎಂದು ಡಾ.ವೈದೇಹಿ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾ ದೇವಿ ಚಟ್ಟೋಪಾಧ್ಯಾಯರು ಪ್ರಕೃತಿ ವಿಕೋಪ ಪೀಡಿತವಾಗಿದ್ದ ಫರಿದಾಬಾದ್ ಅನ್ನು ಕೇಂದ್ರವಾಗಿರಿಸಿಕೊಂಡು ಅಲ್ಲಿನ ಮಹಿಳೆಯರಿಗೆ ಮಸಾಲೆ ಪದಾರ್ಥ ಗಳನ್ನು ತಯಾರಿಸಲು ಹೇಳಿಕೊಟ್ಟು ಬದು ಕನ್ನು ಹೇಗೆ ರೂಪಿಸಿದರೋ ಅದೇ ರೀತಿ ಕಾಲೂರಿನ ಸಂತ್ರಸ್ತ ಮಹಿಳೆಯರೂ ಇದೀಗ ವೈವಿಧ್ಯಮಯ ಮಸಾಲೆ ಪದಾರ್ಥಗಳನ್ನು ತಯಾರಿಸಿ ಬದುಕು ಕಂಡುಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೊಡಗಿನಲ್ಲಿ ಈ ಹಿಂದೆ ಭೂರಮೆ ಬಯಸಿದ್ದ ಮಂಜು ಬೇರೆಯದ್ದೇ ಆಗಿದೆ. ಇದೀಗ ಆ ಮಂಜಿನ ಮೇಲೆ ವಿಕೋಪದ ಕತ್ತಲು ಕವಿದಿದೆ. ಈ ಕತ್ತಲು ಮರೆಯಾಗಿ ಹೊಸ ಮಂಜು ಮತ್ತೆ ಮುಸುಕಿ ಮಿನು ಗಲಿ ಎಂದು ಅವರು ಹಾರೈಸಿದರು. ಸಂತ್ರ ಸ್ತರ ಹೊಸ ಜೀವನಕ್ಕಾಗಿ ಶ್ರಮಿಸುತ್ತಿರುವ ಶಾಸಕ ಕೆ.ಜಿ.ಬೋಪಯ್ಯ, ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ, ಸಾಹಿತಿ ನಾಗೇಶ್ ಕಾಲೂರು ಅವರನ್ನೂ ಡಾ. ವೈದೇಹಿ ಶ್ಲಾಘಿಸಿದರು.

ಸಂತ್ರಸ್ತ ಮಹಿಳೆಯರಿಗಾಗಿ ಹೊಲಿಗೆ ತರಬೇತಿಯ ಎರಡನೇ ಘಟಕ ಉದ್ಘಾ ಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಸಂತ್ರಸ್ತರು ಎಲ್ಲಿಯೂ ನಿರಾಶರಾಗದೇ ನಮ್ಮ ತನ ಬಿಟ್ಟುಕೊಡದೇ ಸ್ವಾಭಿಮಾನ ಮತ್ತು ಸ್ವಾವಲಂಭಿಗಳಾಗಿ ಜೀವಿಸಬೇಕಾಗಿದೆ. ಕೊಡ ಗಿನ ಮೂಲ ಸಂಸ್ಕೃತಿ, ಆಚಾರಗಳನ್ನು ಶಾಶ್ವತ ವಾಗಿ ರಕ್ಷಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿ ಸಬೇಕಾಗಿದೆ ಎಂದು ಕರೆ ನೀಡಿದರಲ್ಲದೇ, ಮಸಾಲೆ ಪದಾರ್ಥಗಳ ಗುಣಮಟ್ಟ ಕಾಪಾಡಿ ಕೊಳ್ಳುವ ಮೂಲಕ ಕಾಲೂರಿನ ಸಂತ್ರಸ್ತ ಮಹಿಳೆಯರ ಉತ್ಪನ್ನಗಳನ್ನು ಜಾಗತಿಕ ಮಟ್ಟ ದಲ್ಲಿ ಗುರುತಿಸುವಂಥ ಕಾರ್ಯಕ್ಕೆ ಸ್ಥಳೀಯ ಮಹಿಳೆಯರು ಮುಂದಾಗಬೇಕಾಗಿದೆ ಎಂದರು.
ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತ ನಾಡಿ, ಸಂತ್ರಸ್ತರು ತಯಾರಿಸಿದ ಮಸಾಲೆ ಪದಾರ್ಥಗಳಿಗೆ ಸೂಕ್ತ ಮಾರುಕಟ್ಟೆ ಒದಗಿ ಸಲು ಮಡಿಕೇರಿ ಕೊಡವ ಸಮಾಜ ಸಂಕೀರ್ಣ ದಲ್ಲಿ ಕೊಠಡಿ ನೀಡುವುದಾಗಿ ಹೇಳಿದ ರಲ್ಲದೇ, ಜಾತಿ ಬೇಧವಿಲ್ಲದೇ ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ವಿದ್ಯಾರ್ಥಿ ವೇತನವನ್ನು ಕೊಡಗು ವಿದ್ಯಾನಿಧಿಯಿಂದ ಒದಗಿಸುವುದಾಗಿ ಘೋಷಿಸಿದರು.

ಕೊಡಗು ವಿದ್ಯಾನಿಧಿ ಅಧ್ಯಕ್ಷ ಕೆ.ಪಿ. ಉತ್ತಪ್ಪ ಮಾತನಾಡಿ, ನಿಸರ್ಗ ರಕ್ಷಣೆ ನಿಟ್ಟಿನಲ್ಲಿ ಎಲ್ಲರೂ ಸೂಕ್ತ ರೀತಿಯಲ್ಲಿ ಚಿಂತಿಸಿ ಪ್ರಕೃತಿ ಮಾತೆಯ ರಕ್ಷಣೆಗೆ ಮುಂದಾಗು ವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೂರಿನ ಕಾಕೇರ ಕುಟುಂಬಸ್ಥರು ತಮ್ಮ ಕುಟುಂಬಕ್ಕೆ ಸೇರಿದ 20 ಸೆಂಟ್ ಜಾಗವನ್ನು ಮಹಿಳೆಯರ ತರ ಬೇತಿ ಕಾರ್ಯಗಳಿಗೆ ಬಳಕೆ ಮಾಡಲು ಉದ್ದೇಶಿತ ಕಟ್ಟಡಕ್ಕೆ ದಾನ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಡಾ. ಎಂ.ಜಿ. ಪಾಟ್ಕರ್, ಸಲೀಲಾ ಪಾಟ್ಕರ್, ಮಾತನಾಡಿದರು.

ಪ್ರಾಜೆಕ್ಟ್ ಕೂರ್ಗ್ ಸದಸ್ಯರಾದ ಕೆ.ಎಸ್. ರಮೇಶ್ ಹೊಳ್ಳ, ವೇದಮೂರ್ತಿ, ಅನಿಲ್ ಎಚ್.ಟಿ., ತರಬೇತುದಾರರಾದ ನೀನಾ ಆರ್.ಶೆಟ್ಟಿ, ಆಶ್ರಫುನ್ನೀಸಾ ಮತ್ತು ಉಡುಪಿಯ ಶ್ರೀನಿವಾಸ ಮೂರ್ತಿ ಹಾಜರಿದ್ದರು. ಸಾಹಿತಿ ನಾಗೇಶ್ ಕಾಲೂರು ನಿರೂಪಿಸಿ ಕಾಲೂರು ಗ್ರಾಮದ ಅಗತ್ಯ ತೆಗಳ ಮನವಿಯನ್ನೂ ಶಾಸಕರ ಮುಂದಿ ಟ್ಟರು. ಡಾ.ನಯನಾ ಕಶ್ಯಪ್ ವಂದಿಸಿದರು.

Translate »