ವಿದ್ಯುತ್ ಕಂಬದ ಸುತ್ತಲಿನ ಗಿಡಗಂಟಿ ತೆರವಿಗೆ ಆಗ್ರಹ
ಮೈಸೂರು

ವಿದ್ಯುತ್ ಕಂಬದ ಸುತ್ತಲಿನ ಗಿಡಗಂಟಿ ತೆರವಿಗೆ ಆಗ್ರಹ

October 8, 2018

ಬೈಲಕುಪ್ಪೆ:  ಟ್ರಾನ್ಸ್‍ಫಾರ್ಮರ್ ಅಳವಡಿಸಿರುವ ವಿದ್ಯುತ್ ಕಂಬದ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ತಿರುಗಾಡುತ್ತಿದ್ದಾರೆ ಎಂದು ಗೆರೋಸಿಯಾ ಕಾಲೋನಿಯ ಮುಖಂಡ ಧರ್ಮ ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಕೊಪ್ಪ ಬಿ.ಎಂ.ರಸ್ತೆಯಿಂದ ಗೆರೋಸಿಯಾ ಕಾಲೋನಿಯ ಮಾರ್ಗ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಬದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ಅದೇ ಮಾರ್ಗ ಮತ್ತೊಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬದ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದು, ಟ್ರಾನ್ಸ್‍ಫಾರ್ಮರ್ ತಂತಿಗೆ ಗಿಡಗಳು ತಗಲುತ್ತಿದೆ. ದಿನಕ್ಕೆ ಹಲವು ಬಾರಿ ವಿದ್ಯುತ್ ಸ್ಥಗಿತವಾಗುತ್ತಿದೆ. ಈ ಬಗ್ಗೆ ಕೊಪ್ಪ ಸೆಸ್ಕಂ ಇಂಜಿನಿ ಯರ್ ಸುರೇಶ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಗ್ರಾಮದ ಅಚ್ಚು, ರಾಜ, ಸ್ವಾಮಿ, ಮಂಜು ದೂರಿದ್ದಾರೆ.

ಈ ರಸ್ತೆಯಲ್ಲಿ ನಿತ್ಯ ಶಾಲಾ ಮಕ್ಕಳು, ಸಾರ್ವಜನಿಕರು ಓಡಾ ಡುತ್ತಾರೆ. ಸಾಕು ಪ್ರಾಣಿಗಳು ಮೇವಿಗಾಗಿ ಟ್ರಾನ್ಸ್‍ಫಾರ್ಮರ್ ಬಳಿ ಹೋಗುತ್ತವೆ. ಈ ವೇಳೆ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ ಅವರು, ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

Translate »