ಗ್ರಾಹಕರಿಲ್ಲದೆ ನಡೆದ ಸೆಸ್ಕಾಂ ಜನಸಂಪರ್ಕ ಸಭೆ
ಮೈಸೂರು

ಗ್ರಾಹಕರಿಲ್ಲದೆ ನಡೆದ ಸೆಸ್ಕಾಂ ಜನಸಂಪರ್ಕ ಸಭೆ

October 8, 2018

ರೈತ ಮುಖಂಡರಿಂದ ಸಭೆ ಬಹಿಷ್ಕಾರ, 9 ದೂರು ದಾಖಲಾಗಿರುವ ಬಗ್ಗೆ ಅಧಿಕಾರಿಗಳ ಮಾಹಿತಿ
ತಿ.ನರಸೀಪುರ: ಪಟ್ಟಣದ ಸೆಸ್ಕಾಂ ಇಲಾಖೆ ಆವರಣದಲ್ಲಿ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಅಧ್ಯಕ್ಷತೆ ಯಲ್ಲಿ ನಡೆದ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಗೆ ಗ್ರಾಹಕರ ಕೊರತೆ ಎದುರಾಯಿತು.

ಕಚೇರಿ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದ್ದ, ಅಧಿಕಾರಿ ಗಳು ಗ್ರಾಹಕರಿಗಾಗಿ ಕಾದು ಕುಳಿತ ಪ್ರಸಂಗ ನಡೆಯಿತು. ಈ ವೇಳೆ ಸಭೆಗೆ ಆಗಮಿಸಿದ್ದ ರೈತ ಮುಖಂಡರು, ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೇ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶನ ತೋರಿದ್ದಾರೆ ಎಂದು ಇಇ ಮುಜಾಮಿಲ್ ಖಾನ್ ಹಾಗೂ ಜೆಇ ಯೋಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಗ್ರಾಹಕರಿಲ್ಲದೇ ಅಧಿಕಾರಿಗಳಾದ ನೀವೇ ಜನ ಸಂಪರ್ಕ ಸಭೆ ಮಾಡುವುದಾದರೂ ಹೇಗೆ ಇಂದಿನ ಸಭೆಯನ್ನು ರದ್ದುಪಡಿಸಿ, ಮುಂದಿನ ಸಭೆಯ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ರೈತರ ಒತ್ತಾಯಕ್ಕೆ ಮನ್ನಣೆ ನೀಡದ ಅಧಿಕಾರಿಗಳು ಸಭೆಯನ್ನು ಮುಂದುವರೆಸು ವುದಾಗಿ ಹೇಳಿದರು. ಗ್ರಾಹಕರಿಲ್ಲದೆ ಸಭೆ ನಡೆಸುವುದು ಸರಿಯಲ್ಲ ಎಂದು ರೈತರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಿರಗಸೂರು ಶಂಕರ್ ನೇತೃತ್ವದಲ್ಲಿ ರೈತರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ನಂತರ ಜೆಇ ಯೋಗೇಶ್ ಗ್ರಾಹಕರಿಂದ 9 ದೂರುಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ಸುದ್ದಿಗಾರರಿಗೆ ತಿಳಿಸಿದರು. ಇದರಲ್ಲಿ ಕಂಬವಾಲಿರುವುದು, ಮೀಟರ್ ಹಿಂತಿರುಗಿಸುವುದು ಮುಖ್ಯ ದೂರಾಗಿದೆ ಎಂದು ತಿಳಿಸಿದರು. ಪತ್ರಕರ್ತರು ತೆರಳಿದ ವೇಳೆ ಯಾವುದೇ ಗ್ರಾಹಕರು ಇಲ್ಲದೇ ಖಾಲಿ ಖಾಲಿ ಕುರ್ಚಿಗಳು ಕಂಡುಬಂದವು. ಕೇವಲ ವಿದ್ಯುತ್ ಗುತ್ತಿಗೆದಾರರು ಮಾತ್ರ ಹಾಜರಿ ದುದ್ದು ಕಂಡು ಬಂತು. ಸಭೆಯಲ್ಲಿ ನಂಜನ ಗೂಡು ಇಇ ರಮೇಶ್, ಎಇ ಶಿವಕುಮಾರ್, ಎಜೆಟಿ ಅನಿತಾ, ಗೀತಾ ಇತರರು ಇದ್ದರು.
ಕುಂಟು ನೆಪ ಹೇಳಿದ ಜೆಇ: ಗ್ರಾಹಕರ ಕೊರತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜೆಇ ಯೋಗೇಶ್, ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಆದೇಶ ಮೇರೆಗೆ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದ್ದು, ಗ್ರಾಹಕರ ಕೊರತೆ ಎದುರಾಗಿರುವುದು ನಿಜ. ಅಮಾವಾಸ್ಯೆ ಹಿಂದಿನ ದಿನ ಜನರು ಮಹ ದೇಶ್ವರ ಬೆಟ್ಟಕ್ಕೆ, ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ತೆರಳಿರುವುದರಿಂದ ಸಭೆಗೆ ಹಾಜರಾಗಿಲ್ಲ ಎಂದು ಹೇಳುವ ಮೂಲಕ ನಗೆಪಾಟಲಿಗೀಡಾದರು.

Translate »