ಅಂಬೇಡ್ಕರ್, ಕನಕದಾಸರ ವೈಚಾರಿಕ ಚಿಂತನೆ ಇಂದಿಗೂ ಪ್ರಸ್ತುತ: ಪ್ರೊ.ಜೆ.ಸೋಮಶೇಖರ್
ಮೈಸೂರು

ಅಂಬೇಡ್ಕರ್, ಕನಕದಾಸರ ವೈಚಾರಿಕ ಚಿಂತನೆ ಇಂದಿಗೂ ಪ್ರಸ್ತುತ: ಪ್ರೊ.ಜೆ.ಸೋಮಶೇಖರ್

October 8, 2018

ನಂಜನಗೂಡು:  ಮನು ಕುಲದ ಉದ್ಧಾರಕ್ಕೆ ಅಗತ್ಯವಾದ ನೀತಿ ಸಂಗತಿಗಳನ್ನು ಕನಕದಾಸರು ತಮ್ಮ ಕೀರ್ತನೆ ಗಳ ಮೂಲಕ ಕಟ್ಟಿಕೊಟ್ಟರೆ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ದಲ್ಲಿ ನಾಗರಿಕ ಹಕ್ಕುಗಳನ್ನು ಅಳವಡಿಸುವ ಮೂಲಕ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾದರು ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಡೆದ ‘ಸಂತಕವಿ ಕನಕದಾಸರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಹಾಗೂ ಕನಕದಾಸರ ವೈಚಾರಿಕ ಚಿಂತನೆಗಳ ಅಧ್ಯಯನ ಅತ್ಯಾವಶ್ಯಕ ವಾಗಿದ್ದು, ಜನಸಾಮಾನ್ಯರ ಏಳಿಗೆಯ ಸಲುವಾಗಿ ತಮ್ಮ ಬದುಕನ್ನೇ ಮುಡಿಪಾಗಿ ಸಿದ ಇಬ್ಬರು ಮಹನೀಯರ ಚಿಂತನೆಗಳು ಸದಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದರು.
ರಾಜ್ಯ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್.ತುಕರಾಂ ಮಾತ ನಾಡಿ, ಧಾರ್ಮಿಕ ಸೌಹಾಧರ್ತೆಗಾಗಿ ಕನಕದಾಸರು ಹೋರಾಟ ನಡೆಸಿದರೆ, ಸಾಮಾಜಿಕ ಸಮಾನತೆಯ ಸಲುವಾಗಿ ಬಾಬಾ ಸಾಹೇಬ್ ಹೋರಾಟ ನಡೆಸಿದರು.

ಸಮಾಜವನ್ನು ಆವರಿಸಿದ್ದ ಮೂಢ ನಂಬಿಕೆ ಹಾಗೂ ಅನಾಚಾರಗಳನ್ನು ಹೋಗ ಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಕನಕದಾಸರು ಎಚ್ಚರಿಸಿ ದರೆ ಅಸ್ಪøಶ್ಯತೆ, ಅಸಮಾನತೆಯ ವಿರುದ್ಧ ಜನರನ್ನು ಜಾಗೃತಿಗೊಳಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಸಮ ಸಮಾಜ ನಿರ್ಮಾಣ ಮಾಡುವ ಆಶಯ ಹೊಂದಿದ್ದರು ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಸಾಂಸ್ಕøತಿಕ ಅನನ್ಯತೆ, ಭಾವೈಕ್ಯತೆ ಹಾಗೂ ಅಭಿವ್ಯಕ್ತಿ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಾಯಿತು. ಇದೇ ಸಂದರ್ಭ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಕನಕದಾಸ ಅಧ್ಯಯನ ಹಾಗೂ ಸಂಶೋ ಧನಾ ಕೇಂದ್ರದ ಸಮನ್ವಯಾಕಾರಿ ಕಾ.ತ.ಚಿಕ್ಕಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಡಿ.ವಿಜಯಲಕ್ಷ್ಮಿ, ಮಹೇಶ್ ಹರವೆ, ಡಾ.ಎಸ್.ನರೇಂದ್ರಕುಮಾರ್, ಪ್ರಕಾಶ್, ಎಚ್.ಡಿ.ಉಮಾಶಂಕರ್, ರಂಗಕರ್ಮಿ ಸಿ.ಎಂ.ನರಸಿಂಹಮೂರ್ತಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಬಿ.ಸಿದ್ದರಾಜು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಂ. ಶಿವಸ್ವಾಮಿ ಇದ್ದರು.

Translate »