ಕಂಡಯ್ಯನಪಾಳ್ಯ ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ
ಚಾಮರಾಜನಗರ

ಕಂಡಯ್ಯನಪಾಳ್ಯ ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ

July 5, 2018

ಕೊಳ್ಳೇಗಾಲ:  ಕಂಡಯ್ಯನಪಾಳ್ಯ ಶಾಲೆಯಲ್ಲಿನ ವಾತಾವರಣ ನೋಡಿದರೆ ಸಂತಸವಾಗುತ್ತದೆ. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿದೆ. ಖಾಸಗಿ ಶಾಲೆಗೆ ಪೈಪೋಟಿ ನೀಡುವಲ್ಲಿ ಇಲ್ಲಿನ ಮಕ್ಕಳು ಸಹಾ ಕಲಿಕೆಯಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕ ಡಾ.ಮಹದೇವಪ್ಪ ಹೇಳಿದರು.

ಅವರು ಹನೂರು ಶೈಕ್ಷಣಿಕ ವಲಯದ ಸರ್ಕಾರಿ ಕಂಡಯ್ಯನಪಾಳ್ಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಲಾಗಿದ್ದ ನೋಟ್ ಪುಸ್ತಕ, ಬ್ಯಾಗ್ ವಿತರಣೆ ಹಾಗೂ ದಾನಿ ಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಶಾಲೆಯ ವಾತಾವರಣ ಗಮನಿಸಿ ಇತರೆ ಶಾಲೆಗಳ ಶಿಕ್ಷಕರು ಶಾಲೆ ಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮಕ್ಕಳನ್ನು ಕಲಿಕೆಗೆ ಹೆಚ್ಚಿನ ರೀತಿ ಪ್ರೇರೇಪಿ ಸುವಲ್ಲಿ ಮುಂದಾಗಬೇಕು. ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಾಮರಾಜನಗರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲ್ಲೇಶ್ ಮಾತನಾಡಿ, ಸರ್ಕಾರಿ ಎಂದರೆ ನನ್ನ ಕಲ್ಪನೆಯೇ ಬೇರೆ ರೀತಿ ಇತ್ತು. ಆದರೆ ಕಂಡಯ್ಯನಪಾಳ್ಯ ಶಾಲೆ ನೋಡಿ ನನ್ನ ಭಾವನೆ ಬದಲಾಗಿದೆ. ಶಿಕ್ಷ ಕರು ಇನ್ನು ಹೆಚ್ಚಿನ ರೀತಿಯಲ್ಲಿ ಮಕ್ಕ ಳನ್ನು ಕಲಿಕೆಯತ್ತ ಪೆÇ್ರೀತ್ಸಾಹಿಸಬೇಕು. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಮಾತನಾಡಿ, ಇಲ್ಲಿನ ಶಾಲೆಯಲ್ಲಿ ಕೇವಲ 28 ಮಕ್ಕಳಿದ್ದು, ಇನ್ನೂ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಶಿಕ್ಷಕರು ಮುಂದಾಗ ಬೇಕು. ಈ ಶಾಲೆಯಲ್ಲಿ ಶಾಲಾ ಆಪ್ ಬಳಸಿ ಶಿಕ್ಷಣ ನೀಡುತ್ತಿರುವಂತೆ ಇತರೆ ಶಾಲೆಗಳು ಇದೇ ರೀತಿ ಅನುಸರಿಸು ವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಮಹದೇವ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಸಂಪನ್ಮೂಲ ವ್ಯಕ್ತಿ ಮಹದೇವ ಪ್ರಸಾದ್, ಧಾನಿಗಳಾದ ಕಂಡಯ್ಯನಪಾಳ್ಯ ತಿಮ್ಮೆಗೌಡ, ಲ್ಯಾಂಪ್ ಸೊಸೈಟಿಯ ಐಸಾಕ್, ಪೆÇಲೀಸ್ ಇಲಾಖೆಯ ನಾಗರಾಜು, ಗಿರೀಶ್, ಜುಲಿಯಾನ ಬ್ರಿಟ್ಟೊ, ಮುಖ್ಯ ಶಿಕ್ಷಕರು ಗಳಾದ ತನುಜಾ ಫಾತಿಮಾ ಬ್ರಿಟ್ಟೊ ಸತೀಶ್. ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟರಾಜು. ಮಹದೇವು. ಮಾದೇಶ್. ಸೋಮಣ್ಣ, ಜಾರ್ಜ್, ಬೆಳತ್ತೂರು ನಂಜುಂಡ, ನಂದೀಶ್, ಸಹಶಿಕ್ಷಕ ಶಾಂತ ರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಾದೇಶ, ಗ್ರಾಪಂ ಸದಸ್ಯ ದಾಸೇಗೌಡ ಇತರರಿದ್ದರು.

Translate »