Tag: Government School

ದೆಹಲಿ, ಕೇರಳ ಮಾದರಿ ರಾಜ್ಯದ ಸರ್ಕಾರಿ ಶಾಲೆ ಅಭಿವೃದ್ಧಿ
ಮೈಸೂರು

ದೆಹಲಿ, ಕೇರಳ ಮಾದರಿ ರಾಜ್ಯದ ಸರ್ಕಾರಿ ಶಾಲೆ ಅಭಿವೃದ್ಧಿ

June 27, 2019

ಬೆಂಗಳೂರು, ಜೂನ್ 26(ಕೆಎಂಶಿ)- ರಾಜ್ಯದ ಸರ್ಕಾರಿ ಶಾಲೆಗಳನ್ನು ದೆಹಲಿ ಹಾಗೂ ಕೇರಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಇಲಾಖೆ ಅಧಿಕಾರ ವಹಿಸಿಕೊಂಡ ಎರಡು ದಿನಗಳಲ್ಲೇ ಅಧಿಕಾರಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ, ಸುದ್ದಿಗಾರರಿಗೆ ಇಂದು ಮಾಹಿತಿ ನೀಡಿ ದರು. ಎರಡು ರಾಜ್ಯಗಳ ಮಾದರಿ ಶಾಲೆ ಗಳ ಕಾರ್ಯ ವೈಖರಿಯನ್ನು ಪರಿಶೀಲಿ ಸಲು ನಾನೇ ಖುದ್ದಾಗಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ಈ ಶಾಲೆಗಳು ರಾಷ್ಟ್ರಕ್ಕೆ…

ಮುಂಬ ರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ
ಮೈಸೂರು

ಮುಂಬ ರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ

December 12, 2018

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲಾಗುವುದು ಎಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನ ಸಭೆಯಲ್ಲಿಂದು ಘೋಷಣೆ ಮಾಡಿದ್ದಾರೆ. ರಾಜ್ಯದ ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆಗೆ ಒಂದನೇ ತರಗತಿಯಿಂದ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ. ಪ್ರಶ್ನೋತ್ತರ ವೇಳೆಯಲ್ಲಿ ಉಮಾನಾಥ.ಎ ಕೋಟ್ಯಾನ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಅವರು, 276 ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ 6 ಮತ್ತು 7ನೇ…

ಸರ್ಕಾರಿ ಶಾಲೆಯ ಹೆಚ್.ಎಂ. ಕೊಠಡಿಗೆ ಬೆಂಕಿ ಹಚ್ಚಲು ಯತ್ನ
ಚಾಮರಾಜನಗರ

ಸರ್ಕಾರಿ ಶಾಲೆಯ ಹೆಚ್.ಎಂ. ಕೊಠಡಿಗೆ ಬೆಂಕಿ ಹಚ್ಚಲು ಯತ್ನ

December 4, 2018

ಚಾಮರಾಜನಗರ: ನಗರದ ಸಂತೇಮರ ಹಳ್ಳಿ ರಸ್ತೆಯ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥ ಮಿಕ ಶಾಲೆಯ (ಅಂಚೆ ಕಚೇರಿ ಪಕ್ಕ) ಮುಖ್ಯೋಪಾಧ್ಯಾಯರ ಕೊಠಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಯತ್ನ ನಡೆಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಕಿಟಕಿಯ ಮೂಲಕ ಬೆಂಕಿಯ ಕಿಡಿಯನ್ನು ಕೊಠಡಿಯ ಒಂದು ಮೂಲೆಗೆ ಎಸೆಯಲಾಗಿದೆ. ಸ್ಥಳದಲ್ಲಿ ಯಾವುದೇ ವಸ್ತುಗಳು ಮತ್ತು ದಾಖಲಾತಿಗಳು ಇರದ ಕಾರಣ ಯಾವುದೇ ಅನಾಹುತ ವಾಗಲೀ ಅಥವಾ ನಷ್ಟ ಸಂಭವಿಸಿಲ್ಲ. ಕೊಠಡಿಯ ಒಳಕ್ಕೆ ಮದ್ಯದ ಬಾಟಲುಗಳನ್ನು ಎಸೆಯಲಾಗಿದೆ. ಈ ಬಗ್ಗೆ ಶಾಲೆಯ…

ಕುಸಿಯುವ ಭೀತಿಯಲ್ಲಿ ಆಲನಹಳ್ಳಿ ಸರ್ಕಾರಿ ಶಾಲೆ
ಮೈಸೂರು

ಕುಸಿಯುವ ಭೀತಿಯಲ್ಲಿ ಆಲನಹಳ್ಳಿ ಸರ್ಕಾರಿ ಶಾಲೆ

December 3, 2018

ಬೈಲಕುಪ್ಪೆ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ 6 ದಶಕ ಗಳಿಂದ ನಿರ್ವಹಣೆ ಇಲ್ಲದೆ ಸರ್ಕಾರಿ ಶಾಲೆಯೊಂದು ಕುಸಿಯುವ ಭೀತಿಯಲ್ಲಿದ್ದು, ಆತಂಕದಲ್ಲಿ ಪಾಠ ಪ್ರವಚನ ನಡೆಯುವಂತಾಗಿದೆ. ತಾಲೂಕಿನ ಆಲನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿಯುವ ಭೀತಿಯಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯಾವ ಸಂದರ್ಭದಲ್ಲಿ ಅನಾಹುತ ಸಂಭವಿಸುತ್ತದೋ ಎಂಬ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. 1958ರಲ್ಲಿ ಕೇವಲ ಒಂದು ಕೊಠಡಿ ಕಟ್ಟಡವಾಗಿ ಆರಂಭವಾದ ಈ ಶಾಲೆಯು ವರ್ಷ ಕಳೆದಂತೆ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಅನುಗುಣವಾಗಿ ಇದೇ…

ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ
ಮೈಸೂರು

ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ

September 30, 2018

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮ ಆರಂಭಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಜೊತೆಯಲ್ಲೇ ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ) ರದ್ದುಗೊಳಿಸಲು ತೀರ್ಮಾನಿಸಿದೆ. ಹಳ್ಳಿಯ ಮಕ್ಕಳು ಜಾಗತಿಕ ಮಟ್ಟಕ್ಕೆ ಮುಟ್ಟಲು ಸಹಕಾರಿಯಾಗುವಂತೆ ಪ್ರಥಮ ಹಂತದಲ್ಲಿ 1000 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ಒಂದು ಮತ್ತು 5ನೇ ತರಗತಿಗೆ ಪ್ರವೇಶಾವಕಾಶ ಕಲ್ಪಿಸಿ ಮೊದಲ ವರ್ಷದ ತರಗತಿಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭ ವಾಗಲಿವೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕಾತಿ ಮತ್ತು ಸರಳ ಪಠ್ಯ ಸಿದ್ಧಪಡಿಸುವ ಪ್ರಕ್ರಿಯೆ ಆರಂಭ…

ಸರಕಾರಿ ಶಾಲೆ ಉಳಿಸುವ ಅಭಿಯಾನ: ಕೈಲಾಸಪುರಂ, ತಿಲಕ್‍ನಗರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ
ಮೈಸೂರು

ಸರಕಾರಿ ಶಾಲೆ ಉಳಿಸುವ ಅಭಿಯಾನ: ಕೈಲಾಸಪುರಂ, ತಿಲಕ್‍ನಗರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

August 6, 2018

ಮೈಸೂರು: ಸರಕಾರಿ ಶಾಲೆಗಳನ್ನು ಉಳಿಸುವ ಜೊತೆಗೆ ಪ್ರವೇಶಾತಿ ಹೆಚ್ಚಳ ಮಾಡುವ ಉದ್ದೇಶದಿಂದ `ಸರಕಾರಿ ಶಾಲೆ ಉಳಿಸುವ ಅಭಿಯಾನ’ದಡಿ ಎರಡು ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಜಾಮಿಟ್ರಿ ಬಾಕ್ಸ್ ವಿತರಣೆ ಮಾಡಲಾಯಿತು. ನಗರ ಪಾಲಿಕೆಯ ವಾರ್ಡ್ 25ರ ವ್ಯಾಪ್ತಿಗೆ ಬರುವ ಕೈಲಾಸಪುರಂ, ತಿಲಕ್‍ನಗರ ಸರಕಾರಿ ಶಾಲೆಯ ಮಕ್ಕಳಿಗೆ ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಪುಸ್ತಕ, ಜಾಮಿಟ್ರಿ ಬಾಕ್ಸ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ಶಾಲೆ ಉಳಿಸುವ ಅಭಿಯಾನದಡಿ ಕೈಲಾಸಪುರಂ, ತಿಲಕ್‍ನಗರ ಶಾಲೆಯ…

ವೇತನ ವಿಳಂಬ: ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು
ಚಾಮರಾಜನಗರ

ವೇತನ ವಿಳಂಬ: ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು

July 17, 2018

ಗುಂಡ್ಲುಪೇಟೆ:  ಎರಡು ತಿಂಗಳಿನಿಂದ ವೇತನ ಪಾವತಿಯಾಗದಿರುವುದನ್ನು ವಿರೋಧಿಸಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಸಿದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕರೆಯ ಮೇರೆಗೆ ತಾಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರೂ ತಮ್ಮ ತೋಳುಗಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿ ದರು. ಎರಡು ತಿಂಗಳ ವೇತನ ದೊರಕದೆ ಶಿಕ್ಷಕರಿಗೆ ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿರುವ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು. ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗಿಲ್ಲವಾದ್ದರಿಂದ ಜೀವನ ನಿರ್ವಹಣೆಗೆ ಸಾಲಮಾಡಬೇಕಾದ…

ಶಿಕ್ಷಕರು ಚಕ್ಕರ್: ಮುಚ್ಚಿದ ಹಾವಿನಮೂಲೆ ಶಾಲೆ
ಚಾಮರಾಜನಗರ

ಶಿಕ್ಷಕರು ಚಕ್ಕರ್: ಮುಚ್ಚಿದ ಹಾವಿನಮೂಲೆ ಶಾಲೆ

July 15, 2018

ಕೊಳ್ಳೇಗಾಲ: ಹನೂರು ಶೈಕ್ಷಣಿಕ ವಲಯದ ಕಾಡಂಚಿನಲ್ಲಿರುವ ಹಾವಿನ ಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಶನಿವಾರ ಶಿಕ್ಷಕರು ಗೈರು ಹಾಜರಾದ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿ, ಮಕ್ಕಳು ವಾಪಾಸ್ ಮನೆಗೆ ತೆರಳಿದ ಘಟನೆ ನಡೆದಿದೆ. ಪಿಜಿಪಾಳ್ಯ ಗ್ರಾಪಂ ವ್ಯಾಪ್ತಿಯ ಹಾವಿನ ಮೂಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 43 ಗಿರಿಜನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಪ್ರತಾಪ್ ಹಾಗೂ ಚಿಕ್ಕಸ್ವಾಮಿ ಎಂಬ ಇಬ್ಬರು ಶಿಕ್ಷಕರನ್ನು ನೇಮಿಸಲಾಗಿದ್ದು, ಅವರು ಶನಿವಾರ ಇಲಾಖಾಧಿಕಾರಿಗಳ ಅನುಮತಿ ಪಡೆಯದೇ…

ರೈಲು ಬೋಗಿಯಲ್ಲಿ ಸರ್ಕಾರಿ ಶಾಲೆ: ಮಕ್ಕಳನ್ನು ಸೆಳೆಯಲು ಶಿಕ್ಷಕರ ಹೀಗೊಂದು ತಂತ್ರ
ಮೈಸೂರು

ರೈಲು ಬೋಗಿಯಲ್ಲಿ ಸರ್ಕಾರಿ ಶಾಲೆ: ಮಕ್ಕಳನ್ನು ಸೆಳೆಯಲು ಶಿಕ್ಷಕರ ಹೀಗೊಂದು ತಂತ್ರ

July 11, 2018

ಮೈಸೂರು: ಬಸ್ ಸೌಲಭ್ಯವೇ ಇಲ್ಲದ ಗ್ರಾಮದಲ್ಲಿ ಏಕಾಏಕಿ ರೈಲು ಗಾಡಿ ಬಂದು ನಿಂತರೆ ಅಚ್ಚರಿ ಎನಿಸದೇ ಇರಲಾರದು. ಅಂತಹ ಆಶ್ಚರ್ಯಕರ ಸಂಗತಿಯೊಂದು ನಂಜನಗೂಡು ತಾಲೂಕು, ಸುತ್ತೂರು ಕ್ಲಸ್ಟರ್ ವ್ಯಾಪ್ತಿಯ ಹಾರೋಪುರ ಗ್ರಾಮದಲ್ಲಿ ನಡೆದಿದೆ. ನಂಜನಗೂಡಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಹಾರೋಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೈಲು ಬೋಗಿ ಗಳಾಗಿ ಮಾರ್ಪಟ್ಟಿದ್ದು, ಇದೀಗ ಶಾಲೆ ಜನಾಕರ್ಷಣೆ ಕೇಂದ್ರವಾಗಿದೆ. ಶಾಲೆಯಲ್ಲಿ 3 ಕೊಠಡಿಗಳಿವೆ. ಮೊದಲ ಕೊಠಡಿಗೆ ಎಂಜಿನ್ ಹಾಗೂ ಉಳಿದೆರಡು ಕೊಠಡಿಗೆ ಬೋಗಿಗಳ ಚಿತ್ರ ಚಿತ್ರಿಸಲಾಗಿದ್ದು,…

ಕಂಡಯ್ಯನಪಾಳ್ಯ ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ
ಚಾಮರಾಜನಗರ

ಕಂಡಯ್ಯನಪಾಳ್ಯ ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ

July 5, 2018

ಕೊಳ್ಳೇಗಾಲ:  ಕಂಡಯ್ಯನಪಾಳ್ಯ ಶಾಲೆಯಲ್ಲಿನ ವಾತಾವರಣ ನೋಡಿದರೆ ಸಂತಸವಾಗುತ್ತದೆ. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿದೆ. ಖಾಸಗಿ ಶಾಲೆಗೆ ಪೈಪೋಟಿ ನೀಡುವಲ್ಲಿ ಇಲ್ಲಿನ ಮಕ್ಕಳು ಸಹಾ ಕಲಿಕೆಯಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕ ಡಾ.ಮಹದೇವಪ್ಪ ಹೇಳಿದರು. ಅವರು ಹನೂರು ಶೈಕ್ಷಣಿಕ ವಲಯದ ಸರ್ಕಾರಿ ಕಂಡಯ್ಯನಪಾಳ್ಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಲಾಗಿದ್ದ ನೋಟ್ ಪುಸ್ತಕ, ಬ್ಯಾಗ್ ವಿತರಣೆ ಹಾಗೂ ದಾನಿ ಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಶಾಲೆಯ ವಾತಾವರಣ ಗಮನಿಸಿ ಇತರೆ ಶಾಲೆಗಳ ಶಿಕ್ಷಕರು…

1 2
Translate »