ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ
ಮೈಸೂರು

ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ

September 30, 2018

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮ ಆರಂಭಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಜೊತೆಯಲ್ಲೇ ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ) ರದ್ದುಗೊಳಿಸಲು ತೀರ್ಮಾನಿಸಿದೆ.

ಹಳ್ಳಿಯ ಮಕ್ಕಳು ಜಾಗತಿಕ ಮಟ್ಟಕ್ಕೆ ಮುಟ್ಟಲು ಸಹಕಾರಿಯಾಗುವಂತೆ ಪ್ರಥಮ ಹಂತದಲ್ಲಿ 1000 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ಒಂದು ಮತ್ತು 5ನೇ ತರಗತಿಗೆ ಪ್ರವೇಶಾವಕಾಶ ಕಲ್ಪಿಸಿ ಮೊದಲ ವರ್ಷದ ತರಗತಿಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭ ವಾಗಲಿವೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕಾತಿ ಮತ್ತು ಸರಳ ಪಠ್ಯ ಸಿದ್ಧಪಡಿಸುವ ಪ್ರಕ್ರಿಯೆ ಆರಂಭ ಗೊಂಡಿದೆ. ರಾಜ್ಯ ಸರ್ಕಾರವೇ ತನ್ನ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯುತ್ತಿರುವುದ ರಿಂದ ಆರ್‌ಟಿಇ ರದ್ದುಪಡಿಸಿ ಅದಕ್ಕೆ ವಾರ್ಷಿಕ 400 ಕೋಟಿ ರೂ. ಅನುದಾನವನ್ನು ಈ ಶಾಲೆ ಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು.

ಕಡ್ಡಾಯ ಶಿಕ್ಷಣ ಜಾರಿ ನಂತರ ಸರ್ಕಾರಿ ಶಾಲೆ ಗಳಲ್ಲಿ ಮಕ್ಕಳ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಶೇಕಡ 25 ರಷ್ಟು ನಮ್ಮ ಮಕ್ಕಳು ಖಾಸಗಿ ಇಂಗ್ಲೀಷ್ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ನಾವೇ ಹಣ ನೀಡಿ ನಮ್ಮ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಆರ್‌ಟಿಇ ಅನುಷ್ಠಾನ ನಂತರ ಕಳೆದ ನಾಲ್ಕು ವರ್ಷಗಳಲ್ಲೇ 4.5 ಲಕ್ಷ ಸರ್ಕಾರಿ ಶಾಲೆ ಮಕ್ಕಳು ಖಾಸಗಿ ಆಂಗ್ಲ ಶಾಲೆಗಳಿಗೆ ವರ್ಗಾ ವಣೆಗೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದು ವರೆದರೆ ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುವ ಸ್ಥಿತಿ ಬರುವುದು ಖಂಡಿತ.

ಗ್ರಾಮೀಣ ಭಾಗದಲ್ಲಿ ತಮ್ಮ ಮಕ್ಕಳಿಗೂ ಗುಣ ಮಟ್ಟದ ಶಿಕ್ಷಣ ಕೊಡಿಸುವ ಪರಿಕಲ್ಪನೆ ಪೋಷಕ ರಲ್ಲಿ ಬಂದಿದೆ. ಅದು ನಿಜವೂ ಆಗಿರುವುದರಿಂದ ನಮ್ಮ ಮಕ್ಕಳು ವಿಶ್ವದರ್ಜೆಯ ಶಿಕ್ಷಣ ಪಡೆಯು ವುದು ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯುವಂತಾಗಬೇಕು. ಗ್ರಾಮೀಣ ಮಕ್ಕಳ ಹಿತದೃಷ್ಟಿಯಿಂದ ಎಷ್ಟೇ ವಿರೋಧ ಬಂದರೂ ಮುಂದಿನ ಶೈಕ್ಷಣಿಕ ವರ್ಷದಿಂದಲೇ
ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಆದೇಶಿಸಿದ್ದಾರೆ.

ಅಷ್ಟೇ ಅಲ್ಲ, ಆರ್‌ಟಿಇ ರದ್ದುಗೊಳಿಸಿ ಅದರ ಹಣವನ್ನು ಇಲ್ಲಿಗೆ ಬಳಕೆ ಮಾಡಿಕೊಳ್ಳಿ, ಮಕ್ಕಳಿಗೆ ಆಂಗ್ಲ ಪಠ್ಯ ಬೋಧಿಸಲು ಇರುವ ಶಿಕ್ಷಕರಿಗೆ ಹೆಚ್ಚುವರಿ ತರಬೇತಿ ನೀಡುವುದಲ್ಲದೆ, ಹೊಸಬರ ನೇಮಕಾತಿಗೂ ಸೂಚಿಸಿದ್ದಾರೆ.

ನಾನು, ಅಂದು ಇಂಗ್ಲೀಷ್ ಕಲಿಯದಿದ್ದುದಕ್ಕೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇನೆ ಮತ್ತು ಭಾಷೆಯ ಸಮಸ್ಯೆಯನ್ನೂ ಎದುರಿಸಿದ್ದೇನೆ. ನನ್ನ ಪರಿಸ್ಥಿತಿ ಗ್ರಾಮೀಣ ಮಕ್ಕಳಿಗೆ ಬರುವುದು ಬೇಡ, ಅವರೂ ವಿಶ್ವದರ್ಜೆಯ ಶಿಕ್ಷಣ ಪಡೆದು, ಉನ್ನತ ಉದ್ಯೋಗಗಳಿಗೆ ಸೇರಲಿ ಎಂದು ಅವರು ಉನ್ನತ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಇದಕ್ಕೆ ಸಾರ್ವಜನಿಕವಾಗಿ ಬರುವ ವಿರೋಧವನ್ನು ನಾನು ಎದುರಿಸುತ್ತೇನೆ. ನೀವು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಕ್ರಮಕೈಗೊಳ್ಳಿ ಎಂದಿದ್ದಾರೆ.

ರಾಜ್ಯದಲ್ಲಿ 43,712 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 4,681 ಪ್ರೌಢಶಾಲೆಗಳಿವೆ. 48,393 ಒಟ್ಟು ಶಾಲೆಗಳಿದ್ದು 44,57,535 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Translate »