ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉರಿಯೂತ ಕರುಳಿನ ಕಾಯಿಲೆ ಕ್ಲಿನಿಕ್ ಆರಂಭ
ಮೈಸೂರು

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉರಿಯೂತ ಕರುಳಿನ ಕಾಯಿಲೆ ಕ್ಲಿನಿಕ್ ಆರಂಭ

July 5, 2018

ಮೈಸೂರು: ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉರಿಯೂತ ಕರುಳಿನ ಕಾಯಿಲೆಗೆ (Inflammatory bowel disease) ಉನ್ನತ ದರ್ಜೆಯ ಕ್ಲಿನಿಕ್ ಆರಂಭವಾಗಿದೆ. ಇಂಡಿಯನ್ ಗ್ಯಾಸ್ಟ್ರೋಎಂಟೆರಲಾಜಿಸ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ನರೇಶ್ ಭಟ್ ಇಂದು ಕ್ಲಿನಿಕ್ ಉದ್ಘಾಟಿಸಿದರು.

ಕರುಳಿನಲ್ಲಿ ಉಂಟಾಗುವ ಉರಿಯೂತದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯ ಜೊತೆಗೆ ಅವರಲ್ಲಿ ರೋಗದ ಬಗ್ಗೆ ಅರಿವು ಮೂಡಿಸುವುದು, ಆರ್ಥಿಕವಾಗಿ ಅಗತ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸುವುದು ಈ ಕ್ಲಿನಿಕ್‍ನ ಉದ್ದೇಶವಾಗಿದೆ. ಮೈಸೂರಿನ ವಿಜಯನಗರದ ರೋಟರಿ ಸಂಸ್ಥೆಯು ಈ ಅನನ್ಯ ಕ್ಲಿನಿಕ್ ಗೆ ಬರುವ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಸಹಾಯ ನೀಡಲಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

Translate »