ಕುಡಿಯಲು ಹಣ ನೀಡದ್ದಕ್ಕೆ ತಂದೆ ಮೇಲೆ ಮಗನಿಂದ ಹಲ್ಲೆ
ಮೈಸೂರು

ಕುಡಿಯಲು ಹಣ ನೀಡದ್ದಕ್ಕೆ ತಂದೆ ಮೇಲೆ ಮಗನಿಂದ ಹಲ್ಲೆ

July 5, 2018

ಮೈಸೂರು: ಕುಡಿಯಲು ಹಣ ನೀಡದ್ದಕ್ಕೆ ಮಗನೇ ತಂದೆಯ ಮೇಲೆ ದೋಸೆ ತವಾದಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುವ ಘಟನೆ ಕ್ಯಾತಮಾರನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿ 75 ವರ್ಷದ ನಾರಾಯಣ ಅವರ ಪುತ್ರ ರಾಜೇಶ್ ಹಲ್ಲೆ ನಡೆಸಿದಾತ. ಜೂ.26 ರಂದು ಸಂಜೆ ನಾರಾಯಣ ಮನೆಯಲ್ಲಿದ್ದ ವೇಳೆ ಬಂದ ರಾಜೇಶ್, ಕುಡಿಯಲು ಹಣ ಕೇಳಿದ್ದಾನೆ. ಅದಕ್ಕೆ ನಾರಾಯಣ ಅವರು ಒಪ್ಪದಿದ್ದಾಗ ಕುಪಿತಗೊಂಡ ರಾಜೇಶ, ಮನೆಯಲ್ಲಿದ್ದ ದೋಸೆ ತವಾದಿಂದ ಹೊಡೆದು, ಕೊಲೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »