ಕಾಡಾನೆ-ಮಾನವ ಸಂಘರ್ಷ ನಿಯಂತ್ರಣ ಸಲಹಾ ಸಭೆ
ಕೊಡಗು

ಕಾಡಾನೆ-ಮಾನವ ಸಂಘರ್ಷ ನಿಯಂತ್ರಣ ಸಲಹಾ ಸಭೆ

June 13, 2018

ಗೋಣಿಕೊಪ್ಪಲು:  ಅರಣ್ಯ ದಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಗಟ್ಟಲು ಸಂಪೂರ್ಣವಾಗಿ ಅರಣ್ಯ ದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳ ವಡಿಸಬೇಕು ಎಂದು ಮಾಯಮುಡಿ, ಬಾಳೆಲೆ, ಪೊನ್ನಪ್ಪಸಂತೆ ಹಾಗೂ ನಿಟ್ಟೂರು ಗ್ರಾಮಸ್ಥರು ಆಗ್ರಹಿಸಿದರು.

ಮಾಯಮುಡಿ ಕಂಗಳತ್‍ನಾಡ್ ಮಹಿಳಾ ಸಮಾಜ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಾನಂಡ ಪ್ರತ್ಯು ಅಧ್ಯಕ್ಷತೆಯಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ತಹಶೀ ಲ್ದಾರ್ ಸಮ್ಮುಖದಲ್ಲಿ ನಡೆದ ಕಾಡಾನೆ-ಮಾನವ ಸಂಘರ್ಷದ ಸಲಹಾ ಸಭೆ ಯಲ್ಲಿ ಆಗ್ರಹಿಸಲಾಯಿತು.

ರೈಲ್ವೆ ಕಂಬಿ ನಿರ್ಮಾಣ ಯೋಜನೆ ಯಶಸ್ಸು ಕಾಣುತ್ತಿರುವುದರಿಂದ ಅರಣ್ಯ ಇಲಾಖೆ ಅರಣ್ಯ ಪ್ರದೇಶದ ಸುತ್ತಲೂ ರೈಲ್ವೆ ಕಂಬಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ರೈಲ್ವೆ ಕಂಬಿ ನಿರ್ಮಾಣದಿಂದ ಕಾಡಾನೆ ಗಳಿಗೆ ಒಳ ನುಗ್ಗಲು ಆಗುತ್ತಿಲ್ಲ. ಆದರೆ, ಯೋಜನೆ ಪೂರ್ಣವಾಗಿ ಅನುಷ್ಠಾವಾ ಗದೆ ಉಳಿದಿರುವುದರಿಂದ ಅಂತಹ ಕಡೆ ಗಳಿಂದ ಆನೆಗಳು ಒಳಬರುತ್ತಿವೆ. ಇದನ್ನೂ ಸಂಪೂರ್ಣವಾಗಿ ತಡೆಗಟ್ಟಲು ಈ ಯೋಜನೆ ಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸ ಬೇಕು ಎಂದು ಕಾಫಿ ಬೆಳೆಗಾರರುಗಳಾದ ಅರಮಣಮಾಡ ರಂಜನ್ ಚೆಂಗಪ್ಪ, ಟಾಟು ಮೊಣ್ಣಪ್ಪ ಆಗ್ರಹಿಸಿದರು.

ನಾಗರಹೊಳೆ ಎಸಿಎಫ್ ಪೌಲ್ ಆಂಥೋನಿ ಮಾತನಾಡಿ, ಈಗಾಗಲೇ ನಾಗರಹೊಳೆ ಅರಣ್ಯ ಪರದೇಶದಲ್ಲಿ 26 ಕಿ.ಮೀ. ನಷ್ಟು ರೈಲ್ವೆ ಕಂಬಿ ಅಳವಡಿಸಲಾಗಿದೆ. 28 ಕಿ.ಮೀ. ನಷ್ಟು ಅನುಷ್ಠಾನ ಆಗಬೇಕಿದೆ. ವೀರನ ಹೊಸಳ್ಳಿ ಹಾಗೂ ಮತ್ತಿಗೋಡು ಭಾಗ ದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಹಮತ ಹಂತವಾಗಿ ರೈಲ್ವೆ ಕಂಬಿ ಯೋಜನೆ ಅನುಷ್ಠಾನವಾಗುತ್ತಿದೆ ಎಂದರು.ನಾಗರಹೊಳೆಯಲ್ಲಿ ಶೇ.38 ರಷ್ಟು ಮಾತ್ರ ತೇಗದ ಮರಗಳಿವೆ. ಉಳಿದ ಪ್ರದೇಶದಲ್ಲಿ ಹುಲ್ಲು ಬೆಳೆದಿದ್ದರೂ ಆನೆಗಳು ಗ್ರಾಮ ಗಳಿಗೆ ಬರುತ್ತಿವೆ. ಅರಣ್ಯದಲ್ಲಿ ಆಹಾರ ಕೊರತೆ ಅಷ್ಟು ಕಾಡುತ್ತಿಲ್ಲ ಎಂದರು.

ವನ್ಯಪ್ರಾಣ ಗಳಿಂದ ಸಾವಿಗೀಡಾಗುವ ಜಾನುವಾರುಗಳಿಗೆ ನೀಡುವ ಪರಿಹಾರ ವನ್ನು ದಯಾತ್ಮಕ ಧನವಾಗಿ ನೀಡಲಾಗು ತ್ತಿದೆ. ಜಾನುವಾರುಗಳಿಗೆ ಹೆಚ್ಚಿನ ಪರಿ ಹಾರ ಬೇಕು ಎಂಬ ಬೇಡಿಕೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಜಾನುವಾರು ಸತ್ತಾಗ ಪಶುವೈದ್ಯರ ಶಿಪಾರಸ್ಸಿನಂತೆ ಹೆಚ್ಚು ವರಿ ಪರಿಹಾರ ನೀಡುವ ಚಿಂತನೆ ಇದೆ. ಇದು ಸರ್ಕಾರದ ಮಟ್ಟದಲ್ಲಿ ಅನುಮೋಧನೆ ಗೊಳ್ಳಬೇಕಿದೆ. ಅನೊಮೋಧನೆ ದೊರೆತ ಸಂದರ್ಭ ಪರಿಹಾರಗಳು ಜಾನುವಾರು ಗಳ ಮೌಲ್ಯ ಆಧರಿಸಿ ನೀಡಲು ಅವ ಕಾಶವಿದೆ ಎಂದರು.

ತಿತಿಮತಿ ಎಸಿಎಫ್ ಶ್ರೀಪತಿ ಮಾತನಾಡಿ, ತಿತಿಮತಿ ವ್ಯಾಪ್ತಿಯ ದಿಡ್ಡಳ್ಳಿ, ದೇವಮಚ್ಚಿಯ 100 ಹೆಕ್ಟೆರ್ ಪ್ರದೇಶಗಳಲ್ಲಿ ಕಾಡುಪ್ರಾಣ ಗಳಿಗೆ ಆಹಾರವಾಗುವಂತ ಸಸಿಗಳನ್ನು ನೆಡಲಾಗಿದೆ. ಇದೇ ವ್ಯಾಪ್ತಿಯಲ್ಲಿ 2.5 ಕಿ.ಮೀ. ದೂರಕ್ಕೆ ರೈಲ್ವೆ ಕಂಬಿ ಅಳವಡಿಸಲು ಹಣ ಬಂದಿರುವುದರಿಂದ ಶೀಘ್ರವಾಗಿ ನಿರ್ಮಾಣ ಗೊಳ್ಳಲಿದೆ. ನಾವು ಕೂಡ ಆನೆಗಳು ಕಾಡಿಗೆ ಬಾರದಂತೆ ಯೋಜನೆ ರೂಪಿಸಲು ಕಾರ್ಯ ಪ್ರವೃತ್ತವಾಗಿದ್ದೇವೆ ಎಂದರು.

ಮತ್ತಿಗೋಡು ವಲಯ ಅಧಿಕಾರಿ ಕಿರಣ್ ಕುಮಾರ್ ಮಾತನಾಡಿ, 9 ಕಿ.ಮೀ ದೂರಕ್ಕೆ ರೈಲ್ವೆ ಕಂಬಿ ಅಳವಡಿಸಲು ಹಣ ಬಿಡುಗಡೆ ಯಾಗಿರುವುದರಿಂದ ಮಳೆ ಮುಗಿದ ತಕ್ಷಣ ನಿರ್ಮಾಣ ಕಾರ್ಯ ನಡೆಯಲಿದೆ. ನಂತ ರದ ದಿನಗಳಲ್ಲಿ ಆನೆಗಳು ಒಳನುಸುಳುವ ಸಮಸ್ಯೆ ಪರಿಹಾರ ಕಾಣಲಿದೆ ಎಂದರು.

ತಹಶೀಲ್ದಾರ್ ಗೋವಿಂದರಾಜು ಮಾತ ನಾಡಿ, ಆನೆ, ಮಾನವ ಸಂಘರ್ಷದ ವಿಚಾ ರದಲ್ಲಿ ಜಿಲ್ಲಾಡಳಿತ 2 ಸಭೆಗಳನ್ನು ನಡೆಸ ಲಾಗಿದೆ. ಇದರಂತೆ ರೈಲ್ವೆ ಕಂಬಿ ಯೋಜ ನೆಗೆ ಹಣ ಬಿಡುಗಡೆಯಾಗಿದೆ. ಅಂದಿನ ಸಿಸಿಎಪ್ ಮನೋಜ್‍ಕುಮಾರ್ ಅವರ ಸಲಹೆಯಂತೆ ಯೋಜನೆ ಅನುಷ್ಠಾನ ವಾಗುತ್ತಿದೆ ಎಂದರು.

ಪರಿಹಾರ ನೀಡುವುದರಿಂದ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಆನೆಗಳನ್ನು ತೋಟಗಳಿಗೆ ಬಾರದಂತೆ ಅರಣ್ಯ ಇಲಾಖೆ ಕ್ರವಕೈಗೊಳ್ಳಬೇಕು ಎಂದು ಬೆಳೆಗಾರರು ಗಳಾದ ಕಾಳಪಂಡ ಸುದೀರ್, ಚಿರಿಯ ಪಂಡ ರಾಜಾ ನಂಜಪ್ಪ, ಟಾಟು ಮೊಣ್ಣಪ್ಪ, ಮನೋಜ್, ರಂಜನ್ ಚೆಂಗಪ್ಪ ಆಗ್ರಹಿಸಿದರು.

ಸಭೆಯಲ್ಲಿ ಮಾಯಮುಡಿ, ಬಾಳಾಜಿ, ಧನುಗಾಲ, ನಿಟ್ಟೂರು, ಬಾಳೆಲೆ, ದೇವನೂರು ಗ್ರಾಮಸ್ಥರು ಪಾಲ್ಗೊಂಡು ಆನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದರು.ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು, ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿ ಗಂಗಾಧರ್, ತಿತಿಮತಿ ವಲಯ ಅಧಿಕಾರಿ ಅಶೋಕ್, ವೃತ್ತ ನಿರೀಕ್ಷಕ ಹರಿಶ್ಚಂದ್ರ ಉಪಸ್ಥಿತರಿದ್ದರು.

Translate »