ಕೊಡಗಿನ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ
ಕೊಡಗು

ಕೊಡಗಿನ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ

June 13, 2018

ಮಡಿಕೇರಿ: 2011ರ ಜನ ಗಣತಿ ಅನ್ವಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 2018-19ನೇ ಸಾಲಿನಲ್ಲಿ ಚುನಾವಣೆ ನಡೆಸಲು ಸರ್ಕಾರವು ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಿದೆ.

ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲಾತಿಯನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಚೇರಿಗಳಲ್ಲಿ, ತಾಲೂಕು ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ಕೊಡಗು ಜಿಲ್ಲೆಯ ವೆಬ್‍ಸೈಟ್ http://kodagu.nic.in/election ಟಿನಲ್ಲಿ ಜೂನ್ 21 ರವರೆಗೆ ಪರಿಶೀಲಿಸಿಕೊಳ್ಳಬಹು ದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಕೋರಿದ್ದಾರೆ.

ಸರ್ಕಾರವು ನಿಗದಿಪಡಿಸಿರುವ ವಾರ್ಡ್ ವಾರು ಮೀಸಲಾತಿಯಿಂದ ಬಾಧಿತರಾ ಗುವ ವ್ಯಕ್ತಿಗಳು ತಮ್ಮ ಸಲಹೆ/ ಆಕ್ಷೇ ಪಣೆಗಳನ್ನು ಜೂನ್ 21ರವರೆಗೆ ಜಿಲ್ಲಾ ಧಿಕಾರಿಯವರ ಕಚೇರಿ, ತಾಲೂಕು ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿ ಹಾಗೂ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಮಡಿಕೇರಿ ನಗರಸಭೆ: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 2- ಸಾಮಾನ್ಯ, ವಾರ್ಡ್ ಸಂಖ್ಯೆ 3- ಹಿಂದುಳದ ವರ್ಗ (ಬಿ) ಮಹಿಳೆ, ವಾರ್ಡ್ ಸಂಖ್ಯೆ 4- ಸಾಮಾನ್ಯ, ವಾರ್ಡ್ ಸಂಖ್ಯೆ 5- ಹಿಂದು ಳಿದ ವರ್ಗ(ಎ), ವಾರ್ಡ್ ಸಂಖ್ಯೆ 6- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 7- ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 8- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 9 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 10- ಸಾಮಾನ್ಯ, ವಾರ್ಡ್ ಸಂಖ್ಯೆ 11- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 12- ಸಾಮಾನ್ಯ, ವಾರ್ಡ್ ಸಂಖ್ಯೆ 13- ಹಿಂದು ಳಿದ ವರ್ಗ (ಎ), ವಾರ್ಡ್ ಸಂಖ್ಯೆ 14- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 15- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 16- ಸಾಮಾನ್ಯ, ವಾರ್ಡ್ ಸಂಖ್ಯೆ 17- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 18- ಸಾಮಾನ್ಯ, ವಾರ್ಡ್ ಸಂಖ್ಯೆ 19- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 20 ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 21- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 22- ಸಾಮಾನ್ಯ ಮಹಿಳೆ ಮತ್ತು ವಾರ್ಡ್ ಸಂಖ್ಯೆ 23 ಸಾಮಾನ್ಯ ಮಹಿಳೆಗೆ ಮೀಸ ಲಾತಿ ನಿಗದಿಯಾಗಿದೆ ಎಂದು ನಗರಾ ಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕರ್ನಾಟಕ ರಾಜ್ಯ ಪತ್ರದಲ್ಲಿ ತಿಳಿಸಿದ್ದಾರೆ.

ವಿರಾಜಪೇಟೆ ಪಟ್ಟಣ ಪಂಚಾಯತ್: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2- ಸಾಮಾನ್ಯ, ವಾರ್ಡ್ ಸಂಖ್ಯೆ 3- ಸಾಮಾನ್ಯ, ವಾರ್ಡ್ ಸಂಖ್ಯೆ 4- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 5-ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 6 ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 7- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 8- ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 9- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 10- ಸಾಮಾನ್ಯ, ವಾರ್ಡ್ ಸಂಖ್ಯೆ 11- ಸಾಮಾನ್ಯ, ವಾರ್ಡ್ 12- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 13- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 14- ಸಾಮಾನ್ಯ, ವಾರ್ಡ್ ಸಂಖ್ಯೆ 15- ಪರಿ ಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 16- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 17- ಸಾಮಾನ್ಯ ಮಹಿಳೆ ಮತ್ತು ವಾರ್ಡ್ ಸಂಖ್ಯೆ 18- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯತ್: ವಾರ್ಡ್ ಸಂಖ್ಯೆ 1-ಸಾಮಾನ್ಯ, ವಾರ್ಡ್ ಸಂಖ್ಯೆ 2- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 3- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 4-ಸಾಮಾನ್ಯ, ವಾರ್ಡ್ ಸಂಖ್ಯೆ 5- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 6- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 7-ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 8- ಸಾಮಾನ್ಯ, ವಾರ್ಡ್ ಸಂಖ್ಯೆ 9- ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 10- ಸಾಮಾನ್ಯ ಮಹಿಳೆ ಮತ್ತು ವಾರ್ಡ್ ಸಂಖ್ಯೆ 11- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಕುಶಾಲನಗರ ಪಟ್ಟಣ ಪಂಚಾಯತ್: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 2- ಸಾಮಾನ್ಯ, ವಾರ್ಡ್ ಸಂಖ್ಯೆ 3- ಸಾಮಾನ್ಯ, ವಾರ್ಡ್ ಸಂಖ್ಯೆ 4- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 5- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 6- ಹಿಂದುಳಿದ ಹಿಂದುಳಿದ ವರ್ಗ(ಬಿ), ವಾರ್ಡ್ 7- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 8- ಸಾಮಾನ್ಯ, ವಾರ್ಡ್ ಸಂಖ್ಯೆ 9- ಸಾಮಾನ್ಯ, ವಾರ್ಡ್ ಸಂಖ್ಯೆ 10- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 11- ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 12- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 13-ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 14- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 15- ಪರಿಶಿಷ್ಟ ಜಾತಿ ಮಹಿಳೆ ಮತ್ತು ವಾರ್ಡ್ 16-ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

Translate »