ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದರೂ ಹಾನಿ ಯಂತೂ ಮುಂದುವರೆದಿದೆ. ಸೋಮ ವಾರಪೇಟೆ ಮತ್ತು ವಿರಾಜಪೇಟೆ ತಾಲೂ ಕಿನಲ್ಲಿ ಉತ್ತಮ ಮಳೆ ಕಂಡು ಬಂದಿದೆ. ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ, ಬಾಳೆಲೆ ಮತ್ತು ಮಡಿಕೇರಿ ತಾಲೂಕಿನ ನಾಪ್ಲೋಕು, ಕಕ್ಕಬ್ಬೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಸೀಮಿತವಾಗಿ ಜೂ.12 ರಂದು ರಜೆ ಘೋಷಿಸಲಾಗಿತ್ತು.
ಭಾಗಮಂಡಲ, ಚೆಟ್ಟಿಮಾನಿ, ಕೋರಂಗಾಲ ವ್ಯಾಪ್ತಿಯಲ್ಲಿ ಮಳೆಯ ರಭಸ ಕಡಿ ಮೆಯಾದ ಹಿನ್ನಲೆಯಲ್ಲಿ ತ್ರಿವೇಣಿ ಸಂಗಮ ದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಅದ ರೊಂದಿಗೆ ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಚಾರ ಮುಕ್ತಗೊಂಡಿದ್ದು, ಭಾಗ ಮಂಡಲ ಸಹಜ ಸ್ಥಿತಿಗೆ ಮರಳಿದೆ. ಮಡಿ ಕೇರಿ ಸಮೀಪದ ತಂತಿಪಾಲದ ಬಳಿ ಭಾರೀ ಬರೆ ಕುಸಿತಗೊಂಡಿದ್ದು, ಮರಗಳು ರಸ್ತೆಗೆ ಉರುಳಿ ಬಿದ್ದಿವೆÉ. ಸ್ಥಳೀಯರು ಮರ ಗಳನ್ನು ಕಡಿದು ತೆರವುಗೊಳಿಸಿದ್ದು, ರಸ್ತೆ ಸಂಚಾರ ಸುಗಮಗೊಂಡಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗಗಳು ಇಂದಿಗೂ ಕತ್ತಲೆಯಲ್ಲೇ ಮುಳುಗಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬೆಳವಣಿಗೆ ಕಂಡಿಲ್ಲ. ಮಾತ್ರವಲ್ಲದೆ ಸ್ಥಿರ ದೂರವಾಣಿ ಸಂಪರ್ಕ ಕೂಡ ಕಡಿತಗೊಂಡಿದ್ದು, ಗ್ರಾಮೀಣ ಭಾಗದ ನಿವಾಸಿಗಳು ಹೊರ ಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದು ಕೊಂಡಿದ್ದಾರೆ.
ಬಾಳೆಲೆ, ನಿಟ್ಟೂರುವಿನಲ್ಲಿ ಲಕ್ಷ್ಮಣ ತೀರ್ಥ ನದಿಯ ನೀರಿನ ಮಟ್ಟವೂ ಏರಿಕೆ ಯಾಗಿದ್ದು, ನದಿ ಪಾತ್ರದ , ಗದ್ದೆಗಳು, ಕಾಫಿ ತೋಟಗಳಿಗೆ ನದಿ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಕೊಟ್ಟಗೇರಿ-ಬಾಳೆಲೆ-ದೋಣಿಕಾಡು ರಸ್ತೆ ಕುಸಿಯುವ ಭೀತಿ ಎದುರಾಗಿದ್ದು ಮುಂಜಾಗೃತಾ ಕ್ರಮ ವಾಗಿ ರಸ್ತೆ ಸಂಚಾರವನ್ನು ಬಂದ್ ಮಾಡ ಲಾಗಿದೆ. ಹೊಳೆ ನೀರು ರಸ್ತೆ ಬದುವನ್ನು ಕೊರೆದಿದ್ದು, ರಸ್ತೆ ಯಾವ ಸಮಯದಲ್ಲಾ ದರು ಕುಸಿದುಬೀಳುವ ಸ್ಥಿತಿ ತಲುಪಿದೆ. ಮೂರ್ನಾಡು ಸಮೀಪದ ಕದನೂರು ಹೊಳೆ ಪ್ರವಾಹ ಸ್ವರೂಪ ಪಡೆದಿದ್ದು ಗದ್ದೆಗಳು ಜಲಾವೃತವಾಗಿದೆ.
ಬೇತ್ರಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಭಾರಿ ಏರಿಕೆ ಕಂಡಿದ್ದು ಬೇತ್ರಿ ಸೇತುವೆ ತುಂಬಲು ಕೇವಲ 2 ಅಡಿ ಗಳಷ್ಟು ಮಾತ್ರ ಬಾಕಿ ಉಳಿದಿದೆ. ಮದಾ ಪುರ-ಹಟ್ಟಿಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಹಾರಂಗಿ ಜಲಾಶಯಕ್ಕೆ, ಬಾರಿ ಪ್ರಮಾಣದಲ್ಲಿ ಒಳಹರಿವು ಕಂಡು ಬಂದಿದೆ. ಸಿದ್ದಾಪುರ-ನೆಲ್ಲಿಹುದಿಕೇರಿ ಕರಡಿ ಗೋಡು ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಸ್ಥಳೀಯಾಡಳಿತ, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ 173 ಕುಟುಂಬಗಳಿಗೆ ಸೂಚಿಸಿರುವ ಮಾಹಿತಿ ಲಭ್ಯವಾಗಿದೆ.ಮೇ ತಿಂಗಳಿನಿಂದಲೇ ಜಿಲ್ಲೆಯಲ್ಲಿ ಮಳೆ ಕಂಡು ಬಂದ ಕಾರಣ, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆ ಗರಿಗೆದ ರಿದೆ. ಈಗಾಗಲೇ ಗದ್ದೆಯ ಉಳುಮೆ ಮುಗಿಸಿರುವ ಕೆಲವು ರೈತರು, ಭತ್ತದ ಸಸಿ ಮಡಿಗಳನ್ನು ಸಿದ್ದಪಡಿಸಿದ್ದು, ನಾಟಿ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ.
ಗೋಣಿಕೊಪ್ಪಲು ವರದಿ: ವಿಪರೀತ ಸುರಿಯುತ್ತಿರುವ ಮಳೆಗೆ ಬಲ್ಯಮುಂಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಗುಟ ಗೇರಿ ಕಾಲೋನಿ ನಿವಾಸಿಗಳಾದ ಹೆಚ್.ಎಸ್. ಪ್ರವೀಣ ಹಾಗೂ ಹೆಚ್.ಎಸ್.ಪ್ರಕಾಶ್ ಎಂಬುವರ ಎರಡು ಮನೆಯ ಮಧ್ಯ ಭಾಗಕ್ಕೆ ಬಾರೀ ಮರವೊಂದು ಉರುಳಿ ಬಿದ್ದಿದ್ದು ಪ್ರವೀಣ ಎಂಬುವರ ಮನೆಗೆ ಭಾಗಶಃ ಹಾನಿ ಆಗಿದೆ. ಸ್ಥಳಕ್ಕೆ ಸ್ಥಳೀಯ ಮುಖಂಡರಾದ ಚೀರಂಡ ಕಂದಾ ಸುಬ್ಬಯ್ಯ ಹಾಗೂ ಹುದಿಕೇರಿ ರೆವಿನ್ಯೂ ಅಧಿಕಾರಿಗಳಾದ ನಿಶಾಂತ್,ನಿತೀನ್, ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸಂಪರ್ಕ ಕಡಿತ: ದಕ್ಷಿಣ ಕೊಡಗಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿ, ಬಾಳೆಲೆ ದೋಣ ಕಡವು ಎಂಬ ಸಂಪರ್ಕ ರಸ್ತೆ ಹಾನಿಯಾಗಿದ್ದು, ಈ ಭಾಗದಲ್ಲಿ ವಾಹನ ಸಂಚಾರ ಸಧ್ಯಕ್ಕೆ ಸ್ಥಗಿತಗೊಂಡಿದೆ. ಬಾರೀ ಸುರಿಯುತ್ತಿರುವ ಮಳೆಯಿಂದ ಈ ಕಾಂಕ್ರಿಟ್ ರಸ್ತೆಯ ಒಂದು ಭಾಗ ಕುಸಿದಿದ್ದು ಇನ್ನಷ್ಟು ಕುಸಿ ಯುವ ಸಂಭವ ಹೆಚ್ಚಾಗಿವೆ. ಸ್ಥಳಕ್ಕೆ ಬಾಳೆಲೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ರಾದ ಕೊಕ್ಕೆಂಗಡ ರಂಜನ್, ಭೇಟಿ ನೀಡಿದ್ದು ರಸ್ತೆ ಮಾರ್ಗದಲ್ಲಿ ಯಾರು ಸಂಚರಿಸದಂತೆ ಮುಂಜಾಗೃತವಾಗಿ ಬ್ಯಾರಿ ಕೇಡ್‍ಅನ್ನು ಅಳವಡಿಸಿದ್ದಾರೆ.
ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ: ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಿಹರ ಟಿ.ಶೆಟ್ಟಿಗೇರಿ ರಸ್ತೆಯ ಸಂಪರ್ಕ ಕಡಿತಗೊಂಡಿದ್ದು ಬಸ್ ಸಂಚಾರ ವ್ಯವಸ್ಥೆ ಲಭ್ಯವಿರುವುದಿಲ್ಲ. ಲಕ್ಷ್ಮಣ ತೀರ್ಥ ನದಿಯು ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ವನ್ನು ಮೀರಿ ಸೇತುವೆ ಮೇಲೆ ನೀರು ಹರಿದು ಹೋಗುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ವೀರಾಜಪೇಟೆ ವರದಿ: ಭಾರಿ ಮಳೆ ಯಿಂದಾಗಿ ಸಮೀಪದ ಹೆಮ್ಮಾಡು ನಾಲ್ಕೇರಿ ಗ್ರಾಮದ ಭದ್ರಕಾಳಿ ದೇವಾಲಯದ ಪೌಳಿಯ ಮೇಲೆ ಬಾರಿ ಗಾತ್ರದ ಮರಬಿದ್ದ ಕಾರಣ ಅಪಾರ ಹಾನಿ ಉಂಟಾಗಿದ್ದು.
ವಿರಾಜಪೇಟೆ ಕಲ್ಲುಬಾಣೆಯ ಚಂಗಪ್ಪ ನಂಜುಂಡ ಅವರ ದನದ ಕೊಟ್ಟಿಗೆ ಬಾಗಶಃ ಮಳೆಯಿಂದ ಜರಿದು ಬಿದ್ದಿದೆ. ಪಟ್ಟಣದ ನೆಹರು ನಗರದ ಪೊನ್ನಮ್ಮ ಎಂಬುವರ ಮನೆಯ ಗೋಡೆ ಕುಸಿದು ಬಿದ್ದು, ಅಪಾರ ಹಾನಿ ಉಂಟಾಗಿದೆ.
ವಿ.ಪೇಟೆ ಶಾಲೆಗಳಿಗೆ ರಜೆ: ವಿರಾಜಪೇಟೆ ತಾಲೂಕಿನ ಅಂಗನ ವಾಡಿ ಮತ್ತು 1 ರಿಂದ 10ನೇ ತರಗತಿ ವರೆಗಿನ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.