ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆರ್ಭಟಿಸುತ್ತಿರುವ ಆಶ್ಲೇಷಾ ಮಳೆಯ ಮರಣ ಮೃದಂಗಕ್ಕೆ ಎರಡು ದಿನದಲ್ಲಿ ಒಟ್ಟು 7 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಬಿರುಗಾಳಿ ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಭಾರೀ ಭೂ ಕುಸಿತದ ದುರಂತಗಳ ಸರಮಾಲೆಯೇ ಮುಂದುವರೆದಿದ್ದು, ಕೊಡಗಿನ ಭೂಪಟದ ನಕ್ಷೆಯಿಂದ ಈಗಾಗಲೇ ಹಲವು ಗ್ರಾಮಗಳು ಅಳಿಸಿ ಹೋಗಿವೆ. ಹಿಂದೆಂದೂ ಕಂಡು ಕೇಳರಿಯದ ಮಹಾ ಪ್ರಳಯಕ್ಕೆ ಕಾವೇರಿ ತವರು ಮೂಕ ಸಾಕ್ಷಿಯಾಗಿದ್ದು, ಎತ್ತ ನೋಡಿದರೂ ಭೂಕುಸಿತ, ನದಿ ನೀರಿನ ಪ್ರವಾಹ ಕಂಡು ಬರುತ್ತಿದೆ. ಮರಣಮಳೆ…
ಮಳೆ ಅಬ್ಬರ: ಕೊಡಗು ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ
August 13, 2018ಮಡಿಕೇರಿ: ಕೊಡಗಿನಾದ್ಯಂತ ಇಂದು ಮಳೆಯ ಅಬ್ಬರ ಜೋರಾಗಿತ್ತು, ಅಲ್ಲದೇ ಮುಂದಿನ ಎರಡು ದಿನ ಕೊಡಗು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೊಡಗಿನಲ್ಲಿ ಹೈ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ನಾಳೆ(ಆ.13) ಶಾಲಾ -ಕಾಲೇಜು ಹಾಗೂ ಅಂಗನವಾಡಿ ಕೇಂದ್ರ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಹಾರಂಗಿ ಜಲಾಶಯದ ಒಳಹರಿವು ಇಂದು 35 ಸಾವಿರ ಕ್ಯೂಸೆಕ್ ಆಗಿದ್ದು, ಜಲಾಶಯದಿಂದ ನದಿಗೆ 25 ಸಾವಿರ ಕ್ಯೂಸೆಕ್…
ಲಘು ವಾಹನಗಳಿಗೆ ಮಡಿಕೇರಿ-ಮಂಗಳೂರು ಹೆದ್ದಾರಿ ಸಂಚಾರ ಮುಕ್ತ
August 11, 2018ಮಡಿಕೇರಿ: ಕೆಲವೆಡೆ ಬಿರುಕು ಬಿಟ್ಟಿದ್ದರೂ ಕೂಡ ಮಡಿಕೇರಿ-ಮಂಗ ಳೂರು ಹೆದ್ದಾರಿಯನ್ನು ಅನಿವಾರ್ಯ ಕಾರಣಗಳಿಂದಾಗಿ ಪ್ರಯಾಣಿಕ ಮತ್ತು ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಅಧಿಕ ಭಾರ ಹೊತ್ತ ಲಾರಿಗಳು, ಶಿಪ್ಪಿಂಗ್ ಕಾರ್ಗೋ, ಮಲ್ಟಿ ಆಕ್ಸಿಲ್, ಲಾಂಗ್ ಚಾಸೀಸ್ ಮತ್ತು ಬುಲ್ಲೆಟ್ ಟ್ಯಾಂಕರ್ ಗಳ ಸಂಚಾರವನ್ನು ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ನಿಷೇಧಿಸಲಾಗಿದೆ. ಅಡುಗೆ ಅನಿಲ, ಪೆಟ್ರೋಲ್ ಉತ್ಪನ್ನ, ಪಡಿತರ ಹಾಗೂ ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಹೆದ್ದಾರಿ ಸಂಚಾರ ಮುಕ್ತವಾಗಿರಲಿದೆ. ಹೆದ್ದಾರಿ ಕುಸಿದಿರುವ ಸ್ಥಳದಲ್ಲಿ ತಾತ್ಕಾಲಿಕ ದುರಸ್ಥಿ ಮಾಡಲಾಗಿದ್ದು, ಬೃಹತ್…
ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್
August 10, 2018ಮಡಿಕೇರಿ: ಭಾರೀ ಮಳೆ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕುಸಿಯುವ ಹಂತ ತಲುಪಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ಹಾಗೂ ತಾಳತ್ತಮನೆ ಜಂಕ್ಷನ್ ಬಳಿ ರಸ್ತೆಯನ್ನು ಬಂದ್ ಮಾಡಿದ್ದು, ಎಲ್ಲಾ ರೀತಿಯ ವಾಹನಗಳನ್ನು ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆಯ ಮೂಲಕ ಮಡಿಕೇರಿಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ರಸ್ತೆ ಸಂಪೂರ್ಣ ಕಿರಿದಾಗಿದ್ದು ಬಸ್‍ಗಳು, ಸರಕು ತುಂಬಿದ ಲಾರಿಗಳ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಲಾರಿಗೆ…
ಕೊಡಗಿನಲ್ಲಿ ಮತ್ತೇ ವರುಣನ ಆರ್ಭಟ: ಮಡಿಕೇರಿ-ಮಂಗಳೂರು ಹೆದ್ದಾರಿ ಸೇರಿ ಹಲವೆಡೆ ಭೂ ಕುಸಿತ
August 9, 2018ಮಡಿಕೇರಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿದೆ. ಬಿರುಗಾಳಿ ಸಹಿತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂ ದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನದಿ ತೊರೆಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಕಳೆದ ಒಂದು ವಾರದಿಂದ ಮಳೆ ಕೊಂಚ ಬಿಡುವ ನೀಡಿದ್ದರಿಂದ ಜನತೆ ಅಲ್ಪ ನಿರಾಳರಾಗಿ ನಿಟ್ಟುಸಿರು ಬಿಡುತ್ತಿದ್ದಂತೆಯೇ ಆಶ್ಲೇಷ ಮಳೆ ಆರ್ಭಟ ತೋರಿದ್ದು, ಪ್ರಕೃತಿ ವಿಕೋಪಗಳ ಸರ ಣಿಯೂ ಮುಂದುವರಿದಿದೆ. ಈ ಹಿಂದೆ ಸುರಿದ ಆರಿದ್ರ ಮಳೆಯ ರಭಸಕ್ಕೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ…
ಸಾಧಾರಣ ಮಳೆ: ಕೃಷಿ ಚಟುವಟಿಕೆ ಚುರುಕು
August 1, 2018ಮಡಿಕೇರಿ: ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರೆದಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಭತ್ತ ಕೃಷಿಗೆ ನಾಟಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಹಲವು ಕಡೆ ನಾಟಿ ಪ್ರಾರಂಭವಾಗಿದೆ. ಜಿಲ್ಲೆಯಾದ್ಯಂತ ಸುಮಾರು 9,800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಆಗಿದೆ. ಹಾಗೆಯೇ ಮುಸುಕಿನ ಜೋಳ 1800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಯಾಗಿದೆ. ಮಡಿಕೇರಿ ತಾಲೂಕಿ ನಲ್ಲಿ 6500 ಹೆಕ್ಟೇರ್ ಪ್ರದೇಶದ ಗುರಿಗೆ 850 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 10000 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 1,103 ಹೆಕ್ಟೇರ್ ಪ್ರದೇಶದಲ್ಲಿ…
ಮೊಣ್ಣಂಗೇರಿಯಲ್ಲಿ ಬಿರುಕು ಬಿಟ್ಟ ಭೂಮಿಯಿಂದ ಉಕ್ಕಿ ಹರಿಯುತ್ತಿದೆ ನೀರು
July 29, 2018ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಬಿರುಕಿನಿಂದ ಅಂತರ್ಜಲ ಕೋಡಿಯಾಗಿ ಹರಿಯುತ್ತಿದೆ. ಕಳೆದ 10 ದಿನಗಳ ಹಿಂದೆ ಅಂದಾಜು 1 ಕಿ.ಮೀ. ವ್ಯಾಪ್ತಿಯುದ್ದಕ್ಕೂ ಭೂಮಿಯಲ್ಲಿ 2 ಇಂಚು ಅಗಲದ ಬಿರುಕು ಮೂಡಿತ್ತು. ದಿನದಿಂದ ದಿನಕ್ಕೆ ಬಿರುಕು ಹೆಚ್ಚುತ್ತಾ ಹೋಗಿದ್ದು, ಇದೀಗ ಬಿರುಕಿನಿಂದ ಕೆಂಪು ಬಣ್ಣದ ನೀರು ಉಕ್ಕಿ ಹರಿಯುತ್ತಿದ್ದು, ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ಭೂಮಿ ಬಿರುಕು ಬಿಟ್ಟಿರುವ ಮಾಹಿತಿ ಪಡೆದು ಈ ಹಿಂದೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ…
ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
July 26, 2018ನವದೆಹಲಿ: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸಂಸತ್‍ನಲ್ಲಿ ಇಂದು ಕೊಡಗಿನ ಮಳೆ ಹಾನಿಯನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಸಂಕಷ್ಟದಲ್ಲಿರುವ ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಚುಚ್ಚಿದರು. ಕೇಂದ್ರ ಸರ್ಕಾರವು ಕೊಡಗಿಗೆ ನೆರವಿನ ಹಸ್ತ ನೀಡಬೇಕೆಂದು ಮನವಿ ಮಾಡಿದರು. ಸಂಸತ್‍ನಲ್ಲಿ ಇಂದು ಸಭಾಧ್ಯಕ್ಷರ ಸ್ಥಾನದಲ್ಲಿ ಉಪ ಸಭಾಧ್ಯಕ್ಷ ತಮಿಳುನಾಡಿನ ತಂಬಿದುರೈ ಅವರು ಆಸೀನರಾಗಿದ್ದಾಗ ಪ್ರತಾಪ್ ಸಿಂಹ ಅವರಿಗೆ ಮಾತನಾಡಲು ಅವಕಾಶ ದೊರೆಯಿತು. ಕರ್ನಾಟಕದ ದಕ್ಷಿಣ ಭಾಗ ತೀವ್ರ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ…
ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು
July 26, 2018ಮಡಿಕೇರಿ: ಪುನರ್ವಸು ಮಳೆಯನ್ನು ಹಿಂಬಾಲಿಸುವ ರೀತಿಯಲ್ಲಿ ಪುಷ್ಯ ಮಳೆಯ ಬಿರುಸು ಕೊಡಗು ಜಿಲ್ಲೆಯನ್ನು ವ್ಯಾಪಿಸಿದೆ. ಕಳೆದೊಂದು ದಿನದ ಅವಧಿ ಯಲ್ಲಿ ಭಾರೀ ಗಾಳಿ ಮಳೆಗೆ ಮತ್ತೊಮ್ಮೆ ‘ಕಾವೇರಿ’ಯ ಒಡಲು ಭರ್ತಿಯಾಗಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರು ರಸ್ತೆಗಳನ್ನು ಆವರಿಸಿದೆ. ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿ ನಿಂದ ಇಂದು ಬೆಳಗ್ಗಿನವರೆಗೆ ಸಾಧಾರಣ ವಾಗಿ 3 ಇಂಚಿನಷ್ಟು ಮಳೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ಕಾವೇರಿ ನದಿ ನೀರಿನ ಮಟ್ಟ ಏರಲಾರಂಭಿಸಿದೆ. ಇದರಿಂದ ಭಾಗಮಂಡಲದ ಅಯ್ಯಂಗೇರಿ…
ಗಾಳಿಬೀಡು ಬಳಿ ಭೂಮಿ ಬಿರುಕು ಅಧಿಕಾರಿಗಳಿಂದ ಪರಿಶೀಲನೆ
July 22, 2018ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಬಳಿ ಭೂಮಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ತಪ್ಪಲು 2 ಇಂಚುಗಳಷ್ಟು ಆಳಕ್ಕೆ ಇಳಿದಿದೆ. ಬೆಟ್ಟದಲ್ಲಿ 1 ಕಿ.ಮೀ ಉದ್ದಕ್ಕೂ ಅಂದಾಜು 3 ಇಂಚು ಅಗಲ ದಷ್ಟು ಬಿರುಕು ಮೂಡಿದೆ. 1 ಕಿ.ಮೀ ಉದ್ದದ ಬಿರುಕು 50 ಎಕರೆ ಬೆಟ್ಟ ಪ್ರದೇಶ ವನ್ನು ಆವರಿಸಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಹುಟ್ಟು ಹಾಕಿದೆ. ಬಿರುಕು ಕಾಣಿಸಿಕೊಂಡ ಪ್ರದೇಶದಲ್ಲಿ 4 ಕುಟುಂಬಗಳು ವಾಸವಿದ್ದು, ಜೀವಭಯ ಎದುರಿಸುತ್ತಿದ್ದಾರೆ. ಈ ವಿಚಾರ…