ಮಳೆ ಅಬ್ಬರ: ಕೊಡಗು ಜಿಲ್ಲಾಡಳಿತದಿಂದ  ಹೈ ಅಲರ್ಟ್ ಘೋಷಣೆ
ಕೊಡಗು

ಮಳೆ ಅಬ್ಬರ: ಕೊಡಗು ಜಿಲ್ಲಾಡಳಿತದಿಂದ  ಹೈ ಅಲರ್ಟ್ ಘೋಷಣೆ

August 13, 2018

ಮಡಿಕೇರಿ: ಕೊಡಗಿನಾದ್ಯಂತ ಇಂದು ಮಳೆಯ ಅಬ್ಬರ ಜೋರಾಗಿತ್ತು, ಅಲ್ಲದೇ ಮುಂದಿನ ಎರಡು ದಿನ ಕೊಡಗು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೊಡಗಿನಲ್ಲಿ ಹೈ ಅಲರ್ಟ್ ಘೋಷಿಸಿದೆ.

ಜಿಲ್ಲೆಯಾದ್ಯಂತ ನಾಳೆ(ಆ.13) ಶಾಲಾ -ಕಾಲೇಜು ಹಾಗೂ ಅಂಗನವಾಡಿ ಕೇಂದ್ರ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಹಾರಂಗಿ ಜಲಾಶಯದ ಒಳಹರಿವು ಇಂದು 35 ಸಾವಿರ ಕ್ಯೂಸೆಕ್ ಆಗಿದ್ದು, ಜಲಾಶಯದಿಂದ ನದಿಗೆ 25 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ದಡದಲ್ಲಿ ವಾಸ ವಿರುವವರು ಜಾಗೃತರಾಗಿರಬೇಕೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಭಾರಿ ಮಳೆಯಿಂದಾಗಿ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಸೇತುವೆ ಅಥವಾ ರಸ್ತೆಯ ಮೇಲೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದಾಗ ಕಾಲ್ನಡಿಗೆ ಅಥವಾ ವಾಹನಗಳ ಮೂಲಕ ನೀರನ್ನು ದಾಟಲು ಪ್ರಯತ್ನಿಸಬಾರದು. ಸಾರ್ವಜನಿ ಕರು ಹಾಗೂ ಪ್ರವಾಸಿಗರು ಸುರಕ್ಷತ ದೃಷ್ಟಿಯಿಂದ ನದಿ ತೊರೆ ಹಾಗೂ ಜಲಪಾತ ಮುಂತಾದವುಗಳ ಸಮೀಪಕ್ಕೆ ತೆರಳದೆ ಸುರಕ್ಷಿತ ಸ್ಥಳದಿಂದ ವೀಕ್ಷಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

ಮಳೆಯ ಅಬ್ಬರದಿಂದಾಗಿ ಮರಗಳು ಉರುಳುವುದು ಹಾಗೂ ಬರೆ ಕುಸಿಯು ವುದು ಮುಂತಾದ ಅವಘಡಗಳು ಸಂಭ ವಿಸುತ್ತಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ತಮ್ಮ ವಾಹನ ಗಳನ್ನು ಮರದ ಕೆಳಗೆ ಅಥವಾ ಎತ್ತರವಾದ ಬರೆ ಇರುವ ಪ್ರದೇಶದಲ್ಲಿ ನಿಲ್ಲಿಸ ಬಾರದು ಹಾಗೂ ತಾವು ಸಹ ಇಂತಹ ಸ್ಥಳಗಳಲ್ಲಿ ಆಶ್ರಯ ಪಡೆಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಳೆಯಿಂದಾಗುವ ಅನಾಹುತ ನಡೆ ಯುವ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿ ತದ 24×7 ಕಾರ್ಯನಿರತ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 08272-221077 ಅನ್ನು ಸಂಪರ್ಕಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ನೌಕರರು ರಜೆ ತೆಗೆದುಕೊಳ್ಳಬಾರದು ಹಾಗೂ ಕಂದಾಯ ಅಧಿಕಾರಿಗಳು ಗ್ರಾಪಂ ಪಿಡಿಓಗಳು, ಗ್ರಾಮ ಲೆಕ್ಕಿಗರು ಮುಂತಾದವರು ದಿನದ 24 ಗಂಟೆಯೂ ಜಾಗೃತರಾಗಿರಬೇಕು ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಬಾರದೆಂದು ಸೂಚಿಸಲಾಗಿದೆ.

Translate »