ಕೊಡಗಿನಲ್ಲಿ ಮತ್ತೇ ವರುಣನ ಆರ್ಭಟ: ಮಡಿಕೇರಿ-ಮಂಗಳೂರು ಹೆದ್ದಾರಿ ಸೇರಿ ಹಲವೆಡೆ ಭೂ ಕುಸಿತ
ಕೊಡಗು

ಕೊಡಗಿನಲ್ಲಿ ಮತ್ತೇ ವರುಣನ ಆರ್ಭಟ: ಮಡಿಕೇರಿ-ಮಂಗಳೂರು ಹೆದ್ದಾರಿ ಸೇರಿ ಹಲವೆಡೆ ಭೂ ಕುಸಿತ

August 9, 2018

ಮಡಿಕೇರಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿದೆ. ಬಿರುಗಾಳಿ ಸಹಿತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂ ದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನದಿ ತೊರೆಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಕಳೆದ ಒಂದು ವಾರದಿಂದ ಮಳೆ ಕೊಂಚ ಬಿಡುವ ನೀಡಿದ್ದರಿಂದ ಜನತೆ ಅಲ್ಪ ನಿರಾಳರಾಗಿ ನಿಟ್ಟುಸಿರು ಬಿಡುತ್ತಿದ್ದಂತೆಯೇ ಆಶ್ಲೇಷ ಮಳೆ ಆರ್ಭಟ ತೋರಿದ್ದು, ಪ್ರಕೃತಿ ವಿಕೋಪಗಳ ಸರ ಣಿಯೂ ಮುಂದುವರಿದಿದೆ.

ಈ ಹಿಂದೆ ಸುರಿದ ಆರಿದ್ರ ಮಳೆಯ ರಭಸಕ್ಕೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಮೂಡಿತ್ತಾದರು, ಮಂಗಳವಾರ ರಾತ್ರಿ ಆರ್ಭಟಿಸಿದ ಆಶ್ಲೇಷ ಮಳೆಯ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ಕಡೆ ತೆರಳುವ 1 ಕಿ.ಮಿ. ದೂರದಲ್ಲಿ ರಸ್ತೆಯ ಒಂದು ಬದಿ ಸಂಪೂರ್ಣ ಭೂಕುಸಿತಕ್ಕೆ ಒಳಗಾಗಿದ್ದು, ಹೆದ್ದಾರಿ ಸಂಚಾರ ದುಸ್ತರ ವಾಗಿ ಪರಿಣಮಿಸಿದೆ. ರಾಜಾಸೀಟು ಬೆಟ್ಟದ ಕೆಳಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿ ದಿದ್ದು ಭಾರಿ ವಾಹನಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಒಂದೆಡೆ ಬೆಟ್ಟ ಮತ್ತೊಂದು ಬದಿ ಅಂದಾಜು 2 ಸಾವಿರ ಅಡಿ ಪ್ರಪಾತ ವಿದ್ದು, ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿ ಏಕಮುಖ ವಾಹನ ಸಂಚಾ ರಕ್ಕೆ ಅನುವು ಮಾಡಿದ್ದಾರೆ. ಯಾವ ಕ್ಷಣದ ಲ್ಲಾದರೂ ಹೆದ್ದಾರಿ ಕುಸಿಯುವ ಆತಂಕ ಎದುರಾಗಿದೆ.

ಮಡಿಕೇರಿಯಿಂದ ಕಾಟಕೇರಿ ಯವರೆಗೆ 2 ಕಡೆಗಳಲ್ಲಿ ಹೆದ್ದಾರಿ ಕುಸಿತವಾ ಗಿದ್ದು, ತಾಳತ್ತಮನೆ ಬಳಿ ರಸ್ತೆ ಮದ್ಯೆದಲ್ಲಿಯೇ ಬೃಹತ್ ಗುಂಡಿ ಮೂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ದುರಸ್ಥಿ ಕಾರ್ಯ ನಡೆಸುವುದು ಕೂಡ ಅಸಾಧ್ಯವಾಗಿದೆ.

ಮಡಿಕೇರಿ ಮಂಗಳದೇವಿ ನಗರದಲ್ಲಿ ಸರಣಿ ಭೂಕುಸಿತ ಸಂಭವಿಸಿದೆ. ಬರೆ ಕುಸಿದ ಪರಿಣಾಮ ಹೇಮಾವತಿ ಎಂಬವರ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಮತ್ತೊಂದು ಮನೆಗೆ ಹಾನಿ ಸಂಭ ವಿಸಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾ ಗಿದ್ದು, ಮನೆಯೊಳಗಿದ್ದ ಗೃಹ ಬಳಕೆ ವಸ್ತುಗಳು ಸಂಪೂರ್ಣವಾಗಿ ಮಣ್ಣು ಪಾಲಾಗಿದೆ. ನಗರ ಸಭೆ ಅಧಿಕಾರಿಗಳು ಮಂಗಳದೇವಿ ನಗರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಹಾನಿಗೊಳ ಗಾದ ಮನೆಯಲ್ಲಿ ವಾಸವಿದ್ದ ಕುಟುಂಬ ವನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. ಕಾನ್ವೆಂಟ್ ಜಂಕ್ಷನ್ ಬಳಿಯಿರುವ ಕಾವೇರಿ ಲೇಔಟ್‍ನ ಹಲವು ಮನೆಗಳಿಗೆ ಚರಂಡಿ ನೀರು ನುಗಿದ್ದು, ನೀರು ಹೊರಹಾಕುಲು ಮನೆ ಮಂದಿ ಪ್ರಯಾಸ ಪಡುತ್ತಿದ್ದಾರೆ.

ನಗರದ ಗೌಳಿಬೀದಿಯಲ್ಲಿ ತೋಡು ತುಂಬಿ ರಸ್ತೆಯ ಮೇಲೆ ಹರಿಯುತ್ತಿದ್ದು, ರಸ್ತೆ ಜಲಾವೃತವಾಗಿದೆ. ಕೊಹಿನೂರು ರಸ್ತೆಯ ಮಾರ್ಗವಾಗಿ ಜನರಲ್ ತಿಮ್ಮಯ್ಯ ವೃತ್ತಕ್ಕೆ ಸೇರುವ ರಸ್ತೆಯಲ್ಲಿ ಸಂಪೂರ್ಣ ಕೊಳಚೆ ನೀರು ಆವರಿಸಿದ್ದು ಜನ ನಡೆದಾಡಲು ಪರದಾಡುವಂತಾಯಿತು. ಕೆಲವು ಮನೆಗಳಿಗೂ ಕೊಳಚೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಕಕ್ಕಬ್ಬೆ ವ್ಯಾಪ್ತಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಕಕ್ಕಬ್ಬೆ ಹೊಳೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಸೇತುವೆಯ ಪಕ್ಕದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ಭಾಗಶಃ ನೀರಿನಲ್ಲಿ ಮುಳುಗಿದ್ದು, ಸೇತುವೆ ಪಕ್ಕದ ಮನೆ, ಅಂಗಡಿಗಳು ಮತ್ತು ಹೋಟೆಲ್‍ಗಳಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ. ಭಾಗಮಂಡಲ -ಅಯ್ಯಂ ಗೇರಿ ರಸ್ತೆ ಸಂಚಾರ 7ನೇ ಬಾರಿಗೆ ಬಂದ್ ಆಗಿದೆ. ರಸ್ತೆಯ ಮೇಲೆ 3 ಅಡಿ ನೀರು ಹರಿಯುತ್ತಿದ್ದು, ತ್ರಿವೇಣಿಗೆ ಸಂಗಮದಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದೇ ರೀತಿಯಲ್ಲಿ ಮಳೆ ಸುರಿದಲ್ಲಿ ಭಾಗಮಂಡಲ-ತಲಕಾವೇರಿ ರಸ್ತೆ ಸಂಚಾರವೂ ಬಂದ್ ಆಗುವ ಸಾಧ್ಯತೆ ಇದೆ.

ಇಂದು ಶಾಲಾ-ಕಾಲೇಜು ರಜೆ

ಕೊಡಗಿನಾದ್ಯಂತ ಧಾರಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಜಿಲ್ಲಾದ್ಯಂತ ನಾಳೆ (ಆ.9) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

Translate »